2015ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ದಿಶಾ ಪಟಾನಿ ಅವರು ನಟಿಸಿರುವುದು ಕೆಲವೇ ಸಿನಿಮಾಗಳಲ್ಲಿ ಮಾತ್ರ. ಹಾಗಿದ್ದರೂ ಅವರ ಖ್ಯಾತಿ ದೇಶಾದ್ಯಂತ ಹಬ್ಬಿದೆ. ‘ಎಂ.ಎಸ್. ಧೋನಿ: ದಿ ಅಲ್ ಟೋಲ್ಡ್ ಸ್ಟೋರಿ’, ‘ಬಾಘಿ’ ಮುಂತಾದ ಸಿನಿಮಾಗಳಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಅವರು ರಾಯಭಾರಿ ಆಗಿದ್ದಾರೆ.