- Kannada News Photo gallery Designer Forever Naveen Kumar wins International Celebrity Designer title
ದುಬೈನಲ್ಲಿ ಅಂತಾರಾಷ್ಟ್ರೀಯ ಫ್ಯಾಷನ್ ಸ್ಪರ್ಧೆ; ಕನ್ನಡಿಗ ಫಾರೆವರ್ ನವೀನ್ಕುಮಾರ್ಗೆ ಸಿಕ್ತು ಹೊಸ ಟೈಟಲ್
ದುಬೈನಲ್ಲಿ ಈ ಫ್ಯಾಷನ್ ಸ್ಪರ್ಧೆ ನಡೆಯಿತು. ಅನೇಕ ಮಾಡೆಲ್ಗಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದರು. ಆ ಕ್ಷಣದ ರಂಗುರಂಗಿನ ಫೋಟೋಗಳು ಇಲ್ಲಿವೆ..
Updated on: Mar 25, 2022 | 2:48 PM

Designer Forever Naveen Kumar wins International Celebrity Designer title

Designer Forever Naveen Kumar wins International Celebrity Designer title

ಝಗಮಗಿಸುವ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆದ ಈ ಇವೆಂಟ್ನಲ್ಲಿ ಜರ್ಮನಿ, ಸ್ಪೇನ್, ಸ್ವಿಡನ್, ರಷ್ಯಾ ಸೇರಿ 16ಕ್ಕೂ ಅಧಿಕ ದೇಶಗಳ ಡಿಸೈನರ್ಗಳು ಸ್ಪರ್ಧಿಸಿದ್ದರು. ಆ ಪೈಕಿ ‘ಅಂತಾರಾಷ್ಟ್ರೀಯ ಸೆಲೆಬ್ರಿಟಿ ಡಿಸೈನರ್’ ಟೈಟಲ್ ಅನ್ನು ಭಾರತದಿಂದ ಸ್ಪರ್ಧಿಸಿದ್ದ ವಿನ್ಯಾಸಕ ಫಾರೆವರ್ ನವೀನ್ ಕುಮಾರ್ ಪಡೆದರು.

ನವೀನ್ ಅವರಿಗೆ ಶೋ ಸ್ಟಾಪರ್ ಆಗಿ ಬಹುಭಾಷಾ ನಟಿ ಸಂಹಿತಾ ವಿನ್ಯಾ ಮತ್ತು ಇಶಾ ಫರ್ಹಾ ಖುರೇಷಿ ಸಾಥ್ ನೀಡಿದರು. ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ಸಂಹಿತಾ ನಟಿಸುತ್ತಿದ್ದರೆ, ಇಶಾ 2018ರಲ್ಲಿಯೇ ಮಿಸ್ ಯೂನಿವರ್ಸ್ ಸಾಲಿಡರೇಟ್ ಅವಾರ್ಡ್ ಪಡೆದುಕೊಂಡಿದ್ದರು.

ಈ ಶೋನಲ್ಲಿ ಈ ಬಾರಿ ಫೆದರ್ ವಿಂಗ್ಸ್ ಮತ್ತು ಐ ಫ್ಯಾಷನ್ ರೆಡ್ ಕಾರ್ಪೆಟ್ ವೇರ್ ಮಾದರಿಯ ಡಿಸೈನಿಂಗ್ ಉಡುಪನ್ನು ನವೀನ್ ಕುಮಾರ್ ವಿನ್ಯಾಸ ಮಾಡಿದ್ದರು. ಇದಕ್ಕೂ ಮೊದಲು ಕೊಲೊಂಬೊದಲ್ಲಿ ನಡೆದ ಮೆಟ್ ಗಾಲಾ ನಡೆಸಿದ ಏಷ್ಯಾ ಸ್ಟಾರ್ ಗಾಲಾ ಫ್ಯಾಶನ್ ಇವೆಂಟ್ನಲ್ಲಿಯೂ ನವೀನ್ ಕುಮಾರ್ ಭಾಗವಹಿಸಿದ್ದರು.

ಫಾರೆವರ್ ನವೀನ್ ಕುಮಾರ್ ಎಂದೇ ಗುರುತಿಸಿಕೊಂಡಿರುವ ನವೀನ್ ಅವರು ಬೆಂಗಳೂರಿನವರು. ಕನ್ನಡಿಗರಾದ ಅವರು ಹಲವು ಸೆಲೆಬ್ರಿಟಿಗಳಿಗೆ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಅನೇಕ ಟಿವಿ ಶೋಗಳಿಗೆ, ಅಂತರಾಷ್ಟ್ರೀಯ ಕಾರ್ಯಕ್ರಮಗಳಿಗೆ ಫ್ಯಾಶನ್ ಡಿಸೈನರ್ ಆಗಿಯೂ ಅನುಭವ ಹೊಂದಿದ್ದಾರೆ.



















