AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಲ್ಲಿ ಅಂತಾರಾಷ್ಟ್ರೀಯ ಫ್ಯಾಷನ್ ಸ್ಪರ್ಧೆ; ಕನ್ನಡಿಗ​ ಫಾರೆವರ್​ ನವೀನ್​ಕುಮಾರ್​ಗೆ ಸಿಕ್ತು ಹೊಸ ಟೈಟಲ್

ದುಬೈನಲ್ಲಿ ಈ ಫ್ಯಾಷನ್​ ಸ್ಪರ್ಧೆ ನಡೆಯಿತು. ಅನೇಕ ಮಾಡೆಲ್​ಗಳು ರ‍್ಯಾಂಪ್​ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದರು. ಆ ಕ್ಷಣದ ರಂಗುರಂಗಿನ ಫೋಟೋಗಳು ಇಲ್ಲಿವೆ..

TV9 Web
| Updated By: ಮದನ್​ ಕುಮಾರ್​|

Updated on: Mar 25, 2022 | 2:48 PM

Share
ಫ್ಯಾಷನ್​ ಶೋ ಎಂದರೆ ಫ್ಯಾಷನ್​ ಪ್ರಿಯರಿಗೆ ಅಚ್ಚುಮೆಚ್ಚು.​ ದುಬೈನಲ್ಲಿ ಇನ್ವಿಕ್ಟಾ ಟ್ರಿಯೋ ಸಹಯೋಗದಲ್ಲಿ ಇತ್ತೀಚೆಗೆ ಗ್ಲಿಟ್ಜ್​ ಆ್ಯಂಡ್ ಗ್ಲಿಟ್ರೇಟಿ ಸೀಸನ್ 2 ಇಂಟರ್​ ನ್ಯಾಷನಲ್​ ಫ್ಯಾಷನ್ ಸ್ಪರ್ಧೆ ನಡೆಯಿತು. ಆ ಕಲರ್​ಫುಲ್​ ಕಾರ್ಯಕ್ರಮದ ಆಕರ್ಷಕ ಫೋಟೋಗಳು ಇಲ್ಲಿವೆ. ಕನ್ನಡದ ಪ್ರತಿಭೆಗಳು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Designer Forever Naveen Kumar wins International Celebrity Designer title

1 / 6
ದುಬೈನಲ್ಲಿ ನಡೆದ ಈ ಕಾರ್ಯಕ್ರಮವನ್ನು ಕೇರಳ ಮೂಲದ ಶರತ್ ಚಂದ್ರನ್ ಆಯೋಜನೆ ಮಾಡಿದ್ದರು. ಈ ಇವೆಂಟ್​ಗೆ ದುಬೈನ ಪ್ರವಾಸೋದ್ಯಮ ಸಚಿವರು ಅತಿಥಿಯಾಗಿ ಆಗಮಿಸಿ ಉದ್ಘಾಟಸಿದರು. ಕನ್ನಡದ ನಟಿ ಸಂಹಿತಾ ವಿನ್ಯಾ, ಕರ್ನಾಟಕದ ಡಿಸೈನರ್​ ಫಾರೆವರ್​ ನವೀನ್​ ಕುಮಾರ್​ ಕೂಡ ಪಾಲ್ಗೊಂಡರು.

Designer Forever Naveen Kumar wins International Celebrity Designer title

2 / 6
ಝಗಮಗಿಸುವ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆದ ಈ ಇವೆಂಟ್​ನಲ್ಲಿ ಜರ್ಮನಿ, ಸ್ಪೇನ್, ಸ್ವಿಡನ್, ರಷ್ಯಾ ಸೇರಿ 16ಕ್ಕೂ ಅಧಿಕ ದೇಶಗಳ ಡಿಸೈನರ್​ಗಳು ಸ್ಪರ್ಧಿಸಿದ್ದರು. ಆ ಪೈಕಿ ‘ಅಂತಾರಾಷ್ಟ್ರೀಯ ಸೆಲೆಬ್ರಿಟಿ ಡಿಸೈನರ್’ ಟೈಟಲ್ ಅನ್ನು ಭಾರತದಿಂದ ಸ್ಪರ್ಧಿಸಿದ್ದ ವಿನ್ಯಾಸಕ ಫಾರೆವರ್ ನವೀನ್ ಕುಮಾರ್ ಪಡೆದರು.

3 / 6
ದುಬೈನಲ್ಲಿ ಅಂತಾರಾಷ್ಟ್ರೀಯ ಫ್ಯಾಷನ್ ಸ್ಪರ್ಧೆ; ಕನ್ನಡಿಗ​ ಫಾರೆವರ್​ ನವೀನ್​ಕುಮಾರ್​ಗೆ ಸಿಕ್ತು ಹೊಸ ಟೈಟಲ್

ನವೀನ್​ ಅವರಿಗೆ ಶೋ ಸ್ಟಾಪರ್ ಆಗಿ ಬಹುಭಾಷಾ ನಟಿ ಸಂಹಿತಾ ವಿನ್ಯಾ ಮತ್ತು ಇಶಾ ಫರ್ಹಾ ಖುರೇಷಿ ಸಾಥ್ ನೀಡಿದರು. ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ಸಂಹಿತಾ ನಟಿಸುತ್ತಿದ್ದರೆ, ಇಶಾ 2018ರಲ್ಲಿಯೇ ಮಿಸ್ ಯೂನಿವರ್ಸ್ ಸಾಲಿಡರೇಟ್ ಅವಾರ್ಡ್ ಪಡೆದುಕೊಂಡಿದ್ದರು.

4 / 6
ದುಬೈನಲ್ಲಿ ಅಂತಾರಾಷ್ಟ್ರೀಯ ಫ್ಯಾಷನ್ ಸ್ಪರ್ಧೆ; ಕನ್ನಡಿಗ​ ಫಾರೆವರ್​ ನವೀನ್​ಕುಮಾರ್​ಗೆ ಸಿಕ್ತು ಹೊಸ ಟೈಟಲ್

ಈ ಶೋನಲ್ಲಿ ಈ ಬಾರಿ ಫೆದರ್ ವಿಂಗ್ಸ್ ಮತ್ತು ಐ ಫ್ಯಾಷನ್ ರೆಡ್ ಕಾರ್ಪೆಟ್ ವೇರ್ ಮಾದರಿಯ ಡಿಸೈನಿಂಗ್ ಉಡುಪನ್ನು ನವೀನ್ ಕುಮಾರ್ ವಿನ್ಯಾಸ ಮಾಡಿದ್ದರು. ಇದಕ್ಕೂ ಮೊದಲು ಕೊಲೊಂಬೊದಲ್ಲಿ ನಡೆದ ಮೆಟ್ ಗಾಲಾ ನಡೆಸಿದ ಏಷ್ಯಾ ಸ್ಟಾರ್ ಗಾಲಾ ಫ್ಯಾಶನ್ ಇವೆಂಟ್​ನಲ್ಲಿಯೂ ನವೀನ್ ಕುಮಾರ್ ಭಾಗವಹಿಸಿದ್ದರು.

5 / 6
ದುಬೈನಲ್ಲಿ ಅಂತಾರಾಷ್ಟ್ರೀಯ ಫ್ಯಾಷನ್ ಸ್ಪರ್ಧೆ; ಕನ್ನಡಿಗ​ ಫಾರೆವರ್​ ನವೀನ್​ಕುಮಾರ್​ಗೆ ಸಿಕ್ತು ಹೊಸ ಟೈಟಲ್

ಫಾರೆವರ್ ನವೀನ್ ಕುಮಾರ್ ಎಂದೇ ಗುರುತಿಸಿಕೊಂಡಿರುವ​ ನವೀನ್​ ಅವರು ಬೆಂಗಳೂರಿನವರು. ಕನ್ನಡಿಗರಾದ ಅವರು ಹಲವು ಸೆಲೆಬ್ರಿಟಿಗಳಿಗೆ ಡಿಸೈನರ್​ ಆಗಿ ಕೆಲಸ ಮಾಡಿದ್ದಾರೆ. ಅನೇಕ ಟಿವಿ ಶೋಗಳಿಗೆ, ಅಂತರಾಷ್ಟ್ರೀಯ ಕಾರ್ಯಕ್ರಮಗಳಿಗೆ ಫ್ಯಾಶನ್ ಡಿಸೈನರ್ ಆಗಿಯೂ ಅನುಭವ ಹೊಂದಿದ್ದಾರೆ.

6 / 6
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ