ಬೆಂಗಳೂರಿನ ಟನಲ್ ರಸ್ತೆ ಯೋಜನೆಗೆ ಅಪಸ್ವರ: ಏಕೆ? ಇಲ್ಲಿದೆ ಮಾಹಿತಿ
ಬೆಂಗಳೂರಿನ 18 ಕಿಮೀ. ಸುರಂಗ ರಸ್ತೆ ಯೋಜನೆಗೆ ಸಂಸದ ಪಿಸಿ ಮೋಹನ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಯೋಜನೆಯ ತಾಂತ್ರಿಕ ದೋಷಗಳು, 3 ತಿಂಗಳ ಕಡಿಮೆ ಅವಧಿ, ಬೆಂಗಳೂರು ಮೊಬಿಲಿಟಿ ಯೋಜನೆಗೆ ವಿರುದ್ಧವಾಗಿರುವುದು ಮತ್ತು ಪಾರದರ್ಶಕತೆಯ ಕೊರತೆಯನ್ನು ಅವರು ಪ್ರಶ್ನಿಸಿದ್ದಾರೆ. ಯೋಜನೆಯನ್ನು ಮರುಪರಿಶೀಲಿಸಲು ಸಲಹೆ ನೀಡಿದ್ದಾರೆ.
ಬೆಂಗಳೂರು, ಜನವರಿ 10: ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕಾಗಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ 18 ಕಿಮೀ ಟನಲ್ ರಸ್ತೆಗೆ (tunnel road project) ಬಿಬಿಎಂಪಿ ಮುಂದಾಗಿದೆ. ಆದರೆ ಈ ಬೆಂಗಳೂರಿನ ಟನಲ್ ರಸ್ತೆ ಪ್ರಾಜೆಕ್ಟ್ ಬಗ್ಗೆ ಅಪಸ್ವರ ಕೇಳಿಬಂದಿದ್ದು, ಟನಲ್ ರಸ್ತೆ ಯೋಜನೆಯ ನ್ಯೂನ್ಯತೆಗಳ ಬಗ್ಗೆ ಬಿಬಿಎಂಪಿ ಕಮಿಷನರ್ಗೆ ಸಂಸದ ಪಿಸಿ ಮೋಹನ್ ಪತ್ರ ಬರೆದಿದ್ದಾರೆ.
18 ಕಿಮೀ ಟನಲ್ ರಸ್ತೆಗೆ ಸರ್ಕಾರ 8,043 ಕೋಟಿ ರೂ. ಮೀಸಲಿಟ್ಟಿದೆ. ಇತ್ತ ಟನಲ್ ರಸ್ತೆ ಪ್ರಾಜೆಕ್ಟ್ನ ದೋಷಗಳ ಬಗ್ಗೆ ಪಟ್ಟಿ ಮತ್ತು ಸಮಸ್ಯೆ ಬಗೆಹರಿಸುವುದಕ್ಕೆ ಕೆಲ ಸಲಹೆಗಳನ್ನು ಸಂಸದ ಪಿಸಿ ಮೋಹನ್ ನೀಡಿದ್ದಾರೆ.
ಸಂಸದ ಪಿಸಿ ಮೋಹನ್ ಟ್ವೀಟ್
I have written to the BBMP Commissioner to express my concerns and urge reconsideration of the proposed 18-km Tunnel Road project from Hebbal to Silk Board Junction, estimated at ₹8,043 crore. This misguided initiative, rather than solving Bengaluru’s mobility and environmental… pic.twitter.com/ijbz4k1AW4
— P C Mohan (@PCMohanMP) January 10, 2025
ಸಮಸ್ಯೆಗಳ ಪಟ್ಟಿಯೇನು?
- ತಾಂತ್ರಿಕವಾಗಿ ಹಲವು ರೀತಿಯ ಅಡೆತಡೆಗಳಿವೆ.
- 3 ತಿಂಗಳು ಮಾತ್ರ ಸಮಯಾವಕಾಶ ಕೊಟ್ಟಿರೋದು ಗುಣಮಟ್ಟದ ಮೇಲೆ ಸಂಶಯ ಮೂಡಿಸುತ್ತಿದೆ.
- ವಿವರವಾದ ಯೋಜನಾ ವರದಿ (ಡಿಪಿಆರ್) ಕೇವಲ ಮೂರು ತಿಂಗಳಲ್ಲಿ ಪೂರ್ಣಗೊಂಡಿದೆ, ಇದು ಅವಾಸ್ತವಿಕವಾಗಿದೆ. ಒಂದು ಸಮಗ್ರ DPR 12-18 ತಿಂಗಳುಗಳನ್ನು ತೆಗೆದುಕೊಳ್ಳಬೇಕು ಮತ್ತು ಸಂಪೂರ್ಣ ಭೂತಾಂತ್ರಿಕ ತನಿಖೆಗಳನ್ನು ಒಳಗೊಂಡಿರಬೇಕು.
- 30 ಮೀಟರ್ ಆಳದಲ್ಲಿ ಸುರಂಗ ಮಾರ್ಗಕ್ಕಾಗಿ, ಪ್ರತಿ ಕಿಲೋಮೀಟರ್ಗೆ 20 ಮಣ್ಣಿನ ಮಾದರಿ ಬೇಕಾಗುತ್ತವೆ. ಇದು 18-ಕಿಮೀ ವಿಸ್ತರಣೆಗೆ ಕನಿಷ್ಠ 400 ಮಾದರಿಗಳಿಗೆ ಸಮನಾಗಿರುತ್ತದೆ. ಯೋಜನೆಯ ಸುರಕ್ಷತೆ ಮತ್ತು ಕಾರ್ಯಸಾಧ್ಯತೆಗೆ ಧಕ್ಕೆ ತರುವಂತಹ ಯಾವುದೇ ತನಿಖೆಗಳು ನಡೆದಿಲ್ಲ.
ಇದನ್ನೂ ಓದಿ: ಕಂದಾಯ ಇಲಾಖೆ ಬಿತ್ತಿ ಪತ್ರದಲ್ಲಿ ಹಸ್ತದ ಚಿಹ್ನೆ: ಜೆಡಿಎಸ್ ಶಾಸಕ ಆಕ್ಷೇಪ..!
- ಸಾಕಷ್ಟು ಜಿಯೋಟೆಕ್ನಿಕಲ್ ಅಧ್ಯಯನಗಳು ತಪ್ಪಾದ ಟನಲ್ ಬೋರಿಂಗ್ ಮೆಷಿನ್ (TBM) ಆಯ್ಕೆ, ಅನಿರೀಕ್ಷಿತ ನೆಲದ ಪರಿಸ್ಥಿತಿಗಳು ಮತ್ತು ಸುರಂಗ ಕುಸಿತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು, ಇದು ಬೆಂಗಳೂರು ಮೆಟ್ರೋ ಹಂತ 1 ರಲ್ಲಿ ಕಂಡುಬರುವಂತೆ, ತಪ್ಪು TBM ಆಯ್ಕೆಯಿಂದಾಗಿ ಸುಮಾರು ಎರಡು ವರ್ಷಗಳ ವಿಳಂಬವನ್ನು ಎದುರಿಸಿತು.
- ಟನಲ್ ರಸ್ತೆ ಪ್ಲಾನ್ ಬೆಂಗಳೂರು ಮೊಬಿಲಿಟಿ ಪ್ಲಾನ್ಗೆ ವಿರುದ್ಧವಾಗಿದೆ.
- ಪಾಲಿಕೆಯ ಡಿಪಿಆರ್ನಲ್ಲಿ ಹಲವು ಲೋಪದೋಷ ಪತ್ತೆಯಾಗಿದೆ.
- ಕಾಪಿ ಪೇಸ್ಟ್ ಮಾಡಿ ಡೇಟಾ ನೀಡಿರೋದು ಹಲವು ಶಂಕೆ ಮೂಡಿಸಿದೆ.
ಸಲಹೆಗಳೇನು?
- ಟನಲ್ ರಸ್ತೆ ಯೋಜನೆಯನ್ನ ಮರುಪರಿಶೀಲಿಸಿ
- ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿರೋ ಮಾರ್ಗಗಳ ಪ್ರಾಮುಖ್ಯತೆ ಪರಿಶೀಲಿಸಿ
- ಪಾರದರ್ಶಕತ್ವ, ಗುಣಮಟ್ಟ ಇರುವಂತೆ ಎಚ್ಚರಿಕೆವಹಿಸಿ
- ಸಾರ್ವಜನಿಕರನ್ನ ಗಮನದಲ್ಲಿಟ್ಟುಕೊಂಡು ಯೋಜನೆ ಬಗ್ಗೆ ಚಿಂತಿಸಿ
- ಜನರಿಗೆ ಏನು ಬೇಕು ಅನ್ನೋದರ ಬಗ್ಗೆ ಗಮನಹರಿಸಿ ಪ್ಲಾನ್ ಮಾಡಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.