ಪ್ರೇಮಿಗಳ ದಿನಕ್ಕಾಗಿ ವ್ಯಾಪಾರಿಗಳ ಭರ್ಜರಿ ತಯಾರಿ: ಗುಲಾಬಿ, ಚಾಕೊಲೇಟ್, ಗಿಫ್ಟ್​​ಗಳದ್ದೇ ಕಾರುಬಾರು

ನಾಳೆ ಅಂದರೆ ಫೆಬ್ರವರಿ 14 ಪ್ರೇಮಿಗಳ ದಿನ. ಪ್ರೇಮಿಗಳ ಪಾಲಿಗೆ ಸಂಭ್ರಮದ ದಿನ. ಈ ದಿನಕ್ಕಾಗಿ ಪ್ರೇಮಿಗಳು ಕಾದುಕುಳಿತ್ತಿದ್ದಾರೆ. ಎಲ್ಲೆಡೆ ಸಂಭ್ರಮ ಜೋರಿದ್ದು, ಇತ್ತ ಬೆಂಗಳೂರಿನಲ್ಲೂ ಸಡಗರ ಶುರುವಾಗಿದೆ. ಪ್ರೇಮಿಗಳು ಸಂಗಾತಿಗಾಗಿ ರೋಸ್, ಚಾಕೊಲೇಟ್, ಟೆಡ್ಡಿ ಬೇರ್‌ಗಳಂತಹ ಗಿಫ್ಟ್‌ಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ವ್ಯಾಪಾರಿಗಳು ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಪ್ರೇಮಿಗಳ ದಿನಕ್ಕಾಗಿ ವ್ಯಾಪಾರಿಗಳ ಭರ್ಜರಿ ತಯಾರಿ: ಗುಲಾಬಿ, ಚಾಕೊಲೇಟ್, ಗಿಫ್ಟ್​​ಗಳದ್ದೇ ಕಾರುಬಾರು
ಸಾಂದರ್ಭಿಕ ಚಿತ್ರ
Edited By:

Updated on: Feb 13, 2026 | 9:47 PM

ಬೆಂಗಳೂರು, ಫೆಬ್ರವರಿ 13: ನಾಳೆ ಫೆಬ್ರವರಿ 14. ಈ ದಿನ ಸಮಸ್ತ ಪ್ರೇಮಿಗಳ ಪಾಲಿಗೆ (Valentine’s Day) ಎಂದಿಗೂ ಮರೆಯಲಾಗದಂತಹ ಒಂದು ಅವಿಸ್ಮರಣೀಯ ದಿನ. ಪ್ರೇಮಿಗಳ ದಿನಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಪ್ರಪಂಚದೆಲ್ಲೆಡೆ ಕಾವು ಪಡೆದುಕೊಳ್ಳುತ್ತಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ (bangaluru) ಸಹ ವ್ಯಾಲೆಂಟೆನ್ಸ್ ಡೇಗೆ ಪ್ರೇಮಿಗಳು ಸಜ್ಜಾಗಿದ್ದಾರೆ. ಪ್ರೇಮಿಗಳು ಜೊತೆಗೆ ವ್ಯಾಪಾರಿಗಳು ಭರ್ಜರಿ ತಯಾರಿ ನಡೆಸಿದ್ದಾರೆ.

ಗಿಫ್ಟ್​​ಗಳ ಮೊರೆಹೋಗುತ್ತಿರುವ ಪ್ರೇಮಿಗಳು 

ಫೆಬ್ರವರಿ 14 ನಾಳಿನ ವ್ಯಾಲೆಂಟೈನ್ಸ್ ಡೇಯನ್ನ ಅವಿಸ್ಮರಣೀಯ ಆಚರಿಸಲು ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ನೆಚ್ಚಿನ ಸಂಗಾತಿಯನ್ನ ಮೆಚ್ಚಿಸಲು ತರಹೇವಾರಿ ಗಿಫ್ಟ್​​ಗಳ ಮೊರೆಹೋಗುತ್ತಿದ್ದಾರೆ. ಎಂದಿನಂತೆ ರೋಸ್ ಡಿಮ್ಯಾಂಡ್​​​ ಹೆಚ್ಚಾಗಿದ್ದು, ಹೂಗಳ ವ್ಯಾಪಾರಿಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ಫ್ಲವರ್ ಡೆಕೋರೇಷನ್​​ಗಳಲ್ಲಿ ತೊಡಗಿದ್ದಾರೆ. ಟೆಡ್ಡಿಬೇರ್‌, ಚಾಕೊಲೇಟ್, ರೆಡ್ ಥೀಮ್​ ಉಡುಗೆಗಳು ಕೂಡ ಮಾರಾಟ ಚುರುಕು ಪಡೆದುಕೊಂಡಿದೆ.

ಪ್ರೇಮಿಗಳ ದಿನ ಹಿನ್ನೆಲೆ ಯುವ ಜನಾಂಗ ಮಿಶ್ರ ಪ್ರತಿಕ್ರಿಯೆ: ಕರಾಳ ದಿನವನ್ನ ಸ್ಮರಿಸುತ್ತೇವೆ ಎಂದ ಕಾಲೇಜ್​​ ವಿದ್ಯಾರ್ಥಿಗಳು

ಇನ್ನು ವ್ಯಾಲೆಂಟೈನ್ಸ್ ಡೇಗಾಗಿ ನಾನಾ ರೀತಿಯ ತಯಾರಿಯಲ್ಲಿ ಒಂದಷ್ಟು ಮಂದಿ ತೊಡಗಿದ್ದರೆ, ನಗರದ ಒಂದಷ್ಟು ಕಾಲೇಜು ವಿದ್ಯಾರ್ಥಿಗಳು ಪುಲ್ವಾಮಾ ಅಟ್ಯಾಕ್​ನಲ್ಲಿ ಹುತಾತ್ಮರಾದ ವೀರಯೋಧರನ್ನ ಸ್ಮರಿಸುವ ಮೂಲಕ ಕರಾಳ ದಿನವನ್ನ ಆಚರಿಸುತ್ತೇವೆ ಅಂತಿದ್ದಾರೆ. ಇನ್ನು ಕೆಲ ಮಂದಿ ಅರ್ಥಪೂರ್ಣವಾಗಿ ಆಚರಿಸುವುದು ಸಮಂಜಸ ಎನ್ನುತ್ತಿದ್ದಾರೆ.

ಇದನ್ನೂ ಓದಿ: Nandi Hills: ವ್ಯಾಲೆಂಟೈನ್ಸ್ ಡೇಗೆ ಲವರ್ಸ್‌ಗೆ ಶಾಕ್; ನಾಳೆ ನಂದಿ ಬೆಟ್ಟಕ್ಕೆ ಹೋಗೂ ಪ್ಲಾನ್ ಇದ್ದರೆ ಈ ವಿಚಾರ ಗಮನಿಸಿ

ಒಟ್ಟಾರೆ ಫೆಬ್ರಬರಿ ಎನ್ನುವ ತಿಂಗಳೇ ಲವರ್ಸ್​​ಗಳಿಗೆ ಮೋಸ್ಟ್ ಫೇವರೆಟ್ ಎನ್ನಬಹುದು. ಅದರಲ್ಲೂ 14ರಂದು ಇನ್ನು ಪ್ರಿಯ. ವಿಶ್ವದೆಲ್ಲೆಡೆ ಈ ದಿನದಂದು ಆಚರಣೆ ಜೋರಾಗಿರುತ್ತದೆ. ಆದರೆ ಭಾರತದಲ್ಲಿ ಮಾತ್ರ ಈ ದಿನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us