ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಮಹಿಳೆ ಕಿಡ್ನ್ಯಾಪ್: ಯುವಕನಿಂದ ದೂರು

ಪೀಣ್ಯದ ಸುವರ್ಣ ನಗರ ಬಸ್ ನಿಲ್ದಾಣದ ಬಳಿ ಶನಿವಾರ ರಾತ್ರಿ ಒಬ್ಬ ಮಹಿಳೆಯನ್ನು ಆರು ಜನರು ಅಪಹರಿಸಿದ ಘಟನೆ ನಡೆದಿದೆ. ಘಟನೆಯನ್ನು ಸಾಕ್ಷಿಯಾಗಿದ್ದ ಯುವಕನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟಿಂಟೆಡ್ ಗ್ಲಾಸ್ ಕಾರಲ್ಲಿ ಬಂದ ಆರೋಪಿಗಳು ಮಹಿಳೆಯನ್ನು ಕಾರಿಗೆ ಎತ್ತಿಕೊಂಡು ಪರಾರಿಯಾಗಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಮಹಿಳೆ ಕಿಡ್ನ್ಯಾಪ್: ಯುವಕನಿಂದ ದೂರು
ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಮಹಿಳೆ ಕಿಡ್ನ್ಯಾಪ್: ಯುವಕನಿಂದ ದೂರು
Updated By: ಗಂಗಾಧರ​ ಬ. ಸಾಬೋಜಿ

Updated on: Oct 25, 2024 | 4:08 PM

ಬೆಂಗಳೂರು, ಅಕ್ಟೋಬರ್​ 25: ನಗರದಲ್ಲಿ ತಡರಾತ್ರಿ ಸಿನಿಮೀಯ ರೀತಿಯಲ್ಲಿ ಮಹಿಳೆಯ ಕಿಡ್ನ್ಯಾಪ್​ (Kidnapped) ಮಾಡಿರುವಂತಹ ಘಟನೆ ಪೀಣ್ಯದ ಸುವರ್ಣ ನಗರ ಬಸ್ ನಿಲ್ದಾಣದ ಬಳಿ ನಡೆದಿದೆ. ಕಳೆದ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ 6 ಜನರಿಂದ ಮಹಿಳೆಯ ಕಿಡ್ನ್ಯಾಪ್​ ಮಾಡಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯನ್ನು ಕಿಡ್ನ್ಯಾಪ್ ಮಾಡಿರುವುದನ್ನು​ ನೋಡಿದ್ದೇನೆ ಎಂದು ಯುವಕನಿಂದ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ.

ಸತ್ಯಜಿತ್‌ ಚೌದರಿ ಎಂಬಾತನಿಂದ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ರಾತ್ರಿ ತನ್ನ ತಾಯಿಯ ಜೊತೆ ವಾಸವಾಗಿದ್ದ ಪಿಜಿಯಲ್ಲಿ ಫೋನ್​ನಲ್ಲಿ ಮಾತನಾಡುವಾಗ ಘಟನೆ ನಡೆದಿದೆ. 32 ವರ್ಷ ವಯಸ್ಸಿನ ಮಹಿಳೆ ಫೋನ್​ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಕಿಡ್ನ್ಯಾಪ್​ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಥಣಿ ಕಿಡ್ನ್ಯಾಪ್​​ ಪ್ರಕರಣ: ಮಕ್ಕಳ ರಕ್ಷಣೆ, ಮೂವರ ಬಂಧನ, ಓರ್ವನ ಕಾಲಿಕೆ ಗುಂಡು

ಹಳದಿ ಬಣ್ಣದ ನಂಬರ್ ಪ್ಲೇಟ್ ಇಲ್ಲದ ಟಿಂಟೆಡ್ ಗ್ಲಾಸ್ ಕಾರ್​ನಲ್ಲಿ ಬಂದು ದುಷ್ಕೃತ್ಯ ಎಸಗಲಾಗಿದೆ. ಕಪ್ಪು ಬಣ್ಣದ ಜಾಕೆಟ್ ಧರಿಸಿ, ಮಹಿಳೆಯ ಮುಖಕ್ಕೆ ಹಿಂಭಾಗದಿಂದ ವ್ಯಕ್ತಿ ಓರ್ವ ಬಟ್ಟೆಯಿಂದ ಅದುಮಿದ. ಮಹಿಳೆಯನ್ನು 6 ಜನ ವ್ಯಕ್ತಿಗಳು ಎತ್ತಿಕೊಂಡು ಕಾರ್​ನ ಎಡಭಾಗದ ಡೋರ್ ತೆಗೆದು ಒಳಗೆ ಹಾಕಿಕೊಂಡು ಪರಾರಿ ಆಗಿದ್ದಾರೆ ಎಂದು ಯುವಕ ತಿಳಿಸಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯಾ ಪೊಲೀಸರು ಆರು ದಿನದಿಂದ ಆರೋಪಿಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.

ರಸ್ತೆ ದಾಟುವಾಗ ಟಿಪ್ಪರ್ ಡಿಕ್ಕಿಯಾಗಿ ಮಹಿಳೆ ಸಾವು

ಕಲಬುರಗಿ: ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಗರದ ಹುಮನಬಾದ್ ರಿಂಗ್ ರೋಡ್‌ನಲ್ಲಿ ನಡೆದಿದೆ. ರಸ್ತೆ ದಾಟುತ್ತಿದ್ದಾಗ ಟಿಪ್ಪರ್ ಹರಿದ  ಗಣಜಲಖೇಡ ಗ್ರಾಮದ ಅನುಸೂಯ (55) ಮೃತ ಪಟ್ಟಿದ್ದಾರೆ. ಕಲಬುರಗಿ ಸಂಚಾರಿ ಠಾಣೆ-2 ರಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್​ ತಂತಿ ತಗುಲಿ ವ್ಯಕ್ತಿ ಸಾವು

ರಾಮನಗರ: ಕುಂಬಳಗೋಡು ಠಾಣಾ ವ್ಯಾಪ್ತಿಯ ಭೀಮನಕುಪ್ಪೆಯಲ್ಲಿ ವಿದ್ಯುತ್​ ತಂತಿ ತಗುಲಿ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಗಂಗಲಿಂಗಯ್ಯ(54) ಮೃತ ಮಹಿಳೆ. ಮನೆಯಲ್ಲಿದ್ದ ವಿದ್ಯುತ್ ಮೀಟರ್ ಸರಿಪಡಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಇದನ್ನೂ ಓದಿ: ಮಂಗಳೂರು: “ಸಹಕರಿಸು, ಇಲ್ಲ 24 ತುಂಡು ಮಾಡುವೆ”, ಬೆದರಿಕೆ ನೊಂದು ಯುವತಿ ಆತ್ಮಹತ್ಯೆಗೆ ಯತ್ನ

ಗಂಗಲಿಂಗಯ್ಯ ಉಳಿಸಲು ಹೋಗಿದ್ದ ಪತ್ನಿ ಸರೋಜಿನಿಗೆ ಗಾಯಗಳಾಗಿವೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.