108 ಆಂಬುಲೆನ್ಸ್​ ಸರ್ವೀಸ್ ಸಾಫ್ಟ್​​ವೇರ್ ಸಮಸ್ಯೆ, ಸರಿಯಾಗಲು ಇನ್ನೂ ಎರಡು ದಿನ ಬೇಕು: ಆರೋಗ್ಯ ಸಚಿವ ಸುಧಾಕರ

ಈ ಸಾಫ್ಟ್​ವೇರ್​ ರೂಪುಗೊಂಡಿದ್ದು 2008ರಲ್ಲಿ. ಸರ್ವೀಸಸ್​​ನಲ್ಲಿ ಬಳಸಿದ ಬೋರ್ಡ್​ ಸರಿಪಡಿಸಲು ಇನ್ನೂ ಎರಡುಮೂರು ದಿನ ಬೇಕಾಗಬಹುದು. ಅದನ್ನು ತರಿಸಲು ಕ್ರಮವಹಿಸಿದ್ದೇವೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದರು.

108 ಆಂಬುಲೆನ್ಸ್​ ಸರ್ವೀಸ್ ಸಾಫ್ಟ್​​ವೇರ್ ಸಮಸ್ಯೆ, ಸರಿಯಾಗಲು ಇನ್ನೂ ಎರಡು ದಿನ ಬೇಕು: ಆರೋಗ್ಯ ಸಚಿವ ಸುಧಾಕರ
ಆರೋಗ್ಯ ಸಚಿವ ಕೆ ಸುಧಾಕರ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 25, 2022 | 1:12 PM

ಬೆಂಗಳೂರು: ಕರ್ನಾಟಕ ಹಲವು ಜಿಲ್ಲೆಗಳಲ್ಲಿ ‘108 ಆಂಬುಲೆನ್ಸ್​’ ಸೇವೆ ಸ್ಥಗಿತಗೊಂಡಿದೆ. ತಾಂತ್ರಿಕ ಕಾರಣಗಳಿಂದಾಗಿ ಸೇವೆಯು ಸ್ಥಗಿತಗೊಂಡಿದೆ. ಕಂಟ್ರೋಲ್​ ರೂಮ್​ನ ಸಾಫ್ಟ್​ವೇರ್ ಹಾಗೂ ಹಾರ್ಡ್​​ವೇರ್ ಸರಿಪಡಿಸಿದ ನಂತರ ಆಂಬುಲೆನ್ಸ್​ ಸೇವೆ ಮರುಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ (Health Minister Dr K Sudhakar) ಹೇಳಿದರು. ಏಕಾಏಕಿ ಉದ್ಭವಿಸಿರುವ ಈ ಪರಿಸ್ಥಿತಿಗೆ ತಾಂತ್ರಿಕ ಸಮಸ್ಯೆಯೇ ಮುಖ್ಯ ಕಾರಣ. ಸಾಫ್ಟ್​​ವೇರ್​​​ನ​​ ಮದರ್​ಬೋರ್ಡ್​ ಹಾಳಾಗಿದ್ದು, ಅದರ ಬಿಡಿಭಾಗ ಎಲ್ಲಿಯೂ ಸಿಗುತ್ತಿಲ್ಲ ಎಂದು ಅವರು ವಿವರಿಸಿದರು.

ಈ ಸಾಫ್ಟ್​ವೇರ್​ ರೂಪುಗೊಂಡಿದ್ದು 2008ರಲ್ಲಿ. ಸರ್ವೀಸಸ್​​ನಲ್ಲಿ ಬಳಸಿದ ಬೋರ್ಡ್​ ಸರಿಪಡಿಸಲು ಇನ್ನೂ ಎರಡುಮೂರು ದಿನ ಬೇಕಾಗಬಹುದು. ಅದನ್ನು ತರಿಸಲು ಕ್ರಮವಹಿಸಿದ್ದೇವೆ. ಸದ್ಯಕ್ಕೆ ಕಾಲ್​ಸೆಂಟರ್​ ಮೂಲಕ ಕರೆಗಳನ್ನು ಸ್ವೀಕರಿಸಲು ಕ್ರಮ ತೆಗೆದುಕೊಂಡಿದ್ದೇವೆ. ರೋಗಿಗಳ ಸಂಬಂಧಿಕರ ಫೋನ್​​ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಸಪೋರ್ಟ್​ಗಾಗಿ ಸದ್ಯ ಎಚ್​​ಪಿ ಕಂಪನಿಯ ಎಂಜಿನಿಯರ್​ಗಳನ್ನು ಭೇಟಿ ಮಾಡಿ, ಈ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅವರ ನೆರವು ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

108 ಆಂಬುಲೆನ್ಸ್​ ವ್ಯವಸ್ಥೆಯು ತುರ್ತುಸೇವೆಯಾಗುತ್ತದೆ. ಶೀಘ್ರ ಸೇವೆಯ ಮರುಸ್ಥಾಪನೆಗೆ ಕ್ರಮತೆಗೆದುಕೊಂಡಿದ್ದೇವೆ. ಸಂಬಂಧಿಸಿದ ತಂತ್ರಜ್ಞರೊಂದಿಗೆ ಅಧಿಕಾರಿಗಳು ಸಭೆ ನಡೆಸಿ ಶೀಘ್ರ ನಮಗೆ ಮಾಹಿತಿ ನೀಡಲಿದ್ದಾರೆ. ಕಾಲ್​ ಸೆಂಟರ್​ಗೆ ಸ್ವತಃ ನಾನೇ ಹೋಗುತ್ತಿದ್ದೇನೆ. ನಮ್ಮ ಎಂಜಿನಿಯರ್ ಜೊತೆಗೆ ಮಾತನಾಡಿ, ಮಧ್ಯಾಹ್ನದ ಒಳಗೆ ವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಸರ್ವರ್​ನ ಮದರ್​ಬೋರ್ಡ್ ಹಾಳಾಗಿರುವ ಕಾರಣ ಜನರ ಕಾಲ್​ಗೆ ಸ್ಪಂದನೆ ಸಿಗಲು ಸರಾಸರಿ 8 ನಿಮಿಷ ಬೇಕಾಗುತ್ತಿದೆ. ಜನರು ಕಾದುಕಾದು ಬೇಸರಗೊಂಡಿದ್ದಾರೆ. ಪ್ರತಿದಿನ 7ರಿಂದ 8 ಸಾವಿರದಷ್ಟು ಕಾಲ್ ರಿಸೀವ್ ಮಾಡುತ್ತೇವೆ. ಆದರೆ ತಾಂತ್ರಿಕ ದೋಷದಿಂದಾಗಿ ಕೇವಲ 2ರಿಂದ 2,500 ದಷ್ಟು ಜನರಿಗೆ ಮಾತ್ರ ಸೌಲಭ್ಯ ಒದಗಿಸಲಾಗುತ್ತಿದೆ. ಬಾಕಿ 5 ಸಾವಿರ ಕರೆಗಳನ್ನು ಸ್ವೀಕರಿಸಲು ಆಗುತ್ತಿಲ್ಲ ಎಂದು ಹೇಳಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada