AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋರ್ಟ್ ತೀರ್ಪು ಬರೋ ಮುನ್ನವೇ ಮಡಿವಾಳ ಬಾಂಬ್ ಸ್ಫೋಟ ಕೇಸ್‌ನ ಶಂಕಿತ ಉಗ್ರ ಸಾವು

2008ರ ಬೆಂಗಳೂರು ಮಡಿವಾಳ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಹಾಗೂ ಶಂಕಿತ ಉಗ್ರ ಮೃತಪಟ್ಟಿದ್ದಾನೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇದ್ದ 60 ವರ್ಷದ ಅಬ್ದುಲ್ ಖಾದರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ಬಾಂಬ್ ಸ್ಫೋಟದಲ್ಲಿ ಅಬ್ದುಲ್ ಖಾದರ್ ಆರೋಪಿಯಾಗಿದ್ದು, ಕೆಲವೇ ದಿನಗಳಲ್ಲಿ ಸ್ಫೋಟ ಕೇಸ್​ನ ತೀರ್ಪು ಬರುವ ಸಾಧ್ಯತೆಯಿತ್ತು. ಆದ್ರೆ, ತೀರ್ಪು ಹೊರ ಬೀಳುವ ಮೊದಲೇ ಶಂಕಿತ ಉಗ್ರ ಮೃತಪಟ್ಟಿದ್ದಾನೆ.

ಕೋರ್ಟ್ ತೀರ್ಪು ಬರೋ ಮುನ್ನವೇ ಮಡಿವಾಳ ಬಾಂಬ್ ಸ್ಫೋಟ ಕೇಸ್‌ನ ಶಂಕಿತ ಉಗ್ರ ಸಾವು
Bengaluru Jail
ಪ್ರದೀಪ್​ ಚಿಕ್ಕಾಟಿ
| Edited By: |

Updated on: Jun 12, 2026 | 7:59 PM

Share

ಬೆಂಗಳೂರು, (ಜೂನ್ 12): ಇನ್ನೇನು ಕೋರ್ಟ್​​​ ತೀರ್ಪು ನೀಡುವ ಮೊದಲೇ 2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ (Madiwala bomb blast case) ಆರೋಪಿ ಹಾಗೂ ಶಂಕಿತ ಉಗ್ರ (suspected terrorist)  ಸಾವನ್ನಪ್ಪಿದ್ದಾನೆ. ಅಬ್ದುಲ್ ಖಾದರ್ (60) ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ 2010ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ((Parappana Agrahara Central Jail) ನ್ಯಾಯಾಂಗ ಬಂಧನದಲ್ಲಿದ್ದ ಅಬ್ದುಲ್ ಖಾದರ್‌ಗೆ ಇಂದು (ಜೂನ್ 12) ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅಬ್ದುಲ್​ನನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದ್ರೆ, ಮಾರ್ಗಮಧ್ಯೆ ಹೃದಯಾಘಾತದಿಂದ ಅಬ್ದುಲ್ ಖಾದರ್ ಮೃತಪಟ್ಟಿದ್ದಾನೆ.

ಮುಖ್ಯಾಂಶಗಳು

  • ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಶಂಕಿತ ಉಗ್ರ ಸಾವು
  • ಶಂಕಿತ ಭಯೋತ್ಪಾದಕ ಅಬ್ದುಲ್ ಖಾದರ್(60) ಅನಾರೋಗ್ಯದಿಂದ ಸಾವು
  • 2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ
  • 2010ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಅಬ್ದುಲ್ ಖಾದರ್

ಅಬ್ದುಲ್ ಖಾದರ್​​​ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಕ್ಷಣ ಜೈಲು ಅಧಿಕಾರಿಗಳು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರಿಗೆ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಬ್ದುಲ್ ಖಾದರ್ ವಿರುದ್ಧದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಅಂತಿಮ ಹಂತದಲ್ಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ತೀರ್ಪು ಪ್ರಕಟವಾಗುವ ಸಾಧ್ಯತೆ ಇತ್ತು. ಆದರೆ ನ್ಯಾಯಾಲಯದ ತೀರ್ಪು ಹೊರಬೀಳುವ ಮುನ್ನವೇ ಅಬ್ದುಲ್ ಖಾದರ್ ಕೊನೆಯುಸಿರೆಳೆದಿದ್ದಾನೆ.

ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ನಿವಾಸಿಯಾಗಿದ್ದ ಅಬ್ದುಲ್ ಖಾದರ್, 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ. ಈ ಸಂಬಂಧ ರಾಷ್ಟ್ರೀಯ ತನಿಖಾ ದಳ (NIA) ಅಬ್ದುಲ್ ಖಾದರ್ ನನ್ನು ಬಂಧಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಹಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ
ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ
ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಕುಸಿದು ಬೀಳುತ್ತಿರುವ ಬಂಡೆಗಲ್ಲುಗಳು
ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಕುಸಿದು ಬೀಳುತ್ತಿರುವ ಬಂಡೆಗಲ್ಲುಗಳು