ಬೆಂಗಳೂರು: ನೆರೆಮನೆಯಲ್ಲಿ 7 ವರ್ಷದ ಬಾಲಕಿ ಅನುಮಾಸ್ಪದ ಸಾವು

ಬೆಂಗಳೂರಿನಲ್ಲಿ 7 ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ. ಮಗಳು ಹಠ ಮಾಡುತ್ತಾಳೆ ಬುದ್ದಿ ಹೇಳಿ ಎಂದು ಪಕ್ಕದ ಮನೆಗೆ ಕಳಿಸಿದ್ದಾಗ ಆಕೃತಿ ಎನ್ನುವ ಬಾಲಕಿ ಮೃತಪಟ್ಟಿದ್ದಾಳೆ. ಈ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಬೆಂಗಳೂರು: ನೆರೆಮನೆಯಲ್ಲಿ 7 ವರ್ಷದ ಬಾಲಕಿ ಅನುಮಾಸ್ಪದ ಸಾವು
ಮೃತ ಬಾಲಕಿ
ಬಿ ಮೂರ್ತಿ, ನೆಲಮಂಗಲ Edited By:

Updated on: Nov 19, 2023 | 4:13 PM

ಬೆಂಗಳೂರು, (ನವೆಂಬರ್ 19): ಮಗಳು ಹಠ ಮಾಡುತ್ತಾಳೆ ಬುದ್ದಿ ಹೇಳಿ ಎಂದುಪಕ್ಕದ ಮನೆಗೆ ಕಳಿಸಿದ್ದಾಗ 7 ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ. ಬೆಂಗಳೂರು (Bengaluru) ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಆಕೃತಿ (07) ಮೃತ ಬಾಲಕಿ. ವಿನೋದ್ ಮತ್ತು ನಳಿನ ದಂಪತಿಗಳ ಪುತ್ರಿ ಆಕೃತಿ ಎನ್ನುವ ಬಾಲಕಿ, ಆಕೃತಿ ಪಕ್ಕದ ಮನೆಯ ನಂಜುಂಡಪ್ಪ, ಪಲ್ಲವಿ ಮನೆಗೆ ಹೋದಾಗ ಮೃತಪಟ್ಟಿದ್ದಾಳೆ.

ಅದೇನಾಯ್ತೋ ಏನೋ ಪೋಷಕರಿಗೆ ಗಮನಕ್ಕೆ ಬಾರದೆ ನಂಜುನಂಡಪ್ಪ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಈ ಬಾಲಕಿ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಬೆಂಗಳೂರು: ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಾಣಂತಿ, ಹಸುಗೂಸು ದಾರುಣ ಸಾವು

ನಿನ್ನೆ ತಡರಾತ್ರಿ 2:10ರ ಸುಮಾರಿಗೆ ಮಗು ವಾಂತಿ ಮಾಡುತ್ತಿದೆ ಎಂದು ನಂಜುಂಡಪ್ಪ ಆಸ್ಪತ್ರೆಗೆ ಕರಕೊಂಡು ಹೋಗಿದ್ದಾರೆ. ಆದ್ರೆ, ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇದಕ್ಕೂ ಮೊದಲು ಎರಡು ಬಾಲಕಿ ಪೋಷಕರಿಗೆ ಎರಡು ಬಾರಿ ಫೋನ್ ಮಾಡಿದ್ದಾರೆ. ಆದ್ರೆ, ನಿದ್ರೆಯಲ್ಲಿದ್ದ ಬಾಲಕಿ ಪೋಷಕರು ಮನೆ ಬಾಗಿಲು ತೆಗೆದಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ FSL ತಂಡ ಪರಿಶೀಲನೆ ನಡೆಸಿದ ವೇಳೆ ಬಾಲಕಿಯ ಮೈಕೈ ಬಳಿ ರಕ್ತ ಹೆಪ್ಪುಗಟ್ಟಿದ ಗಾಯಗಳು ಕಂಡುಬಂದಿವೆ. ಮಗುವಿಗೆ ಭಯ ಹುಟ್ಟಿಸಲು ಯಾವುದೋ ವಸ್ತುವಿನಿಂದ ಹೊಡೆಯುವ ವೇಳೆ ಉಸಿರುಗಟ್ಟಿ ಸತ್ತಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ಈ ಬಗ್ಗೆ ಮೃತ ಬಾಲಕಿಯ ಪೋಷಕರು ಪಕ್ಕದ ಮನೆಯ ನಂಜುಂಡಪ್ಪ ವಿರುದ್ಧ ದೂರು ನೀಡಿದ್ದು, ಈ ದೂರಿನ ಮೇರೆಗೆ ನೆರೆಮನೆಯ ನಂಜುಂಡಪ್ಪ, ಪಲ್ಲವಿಯನ್ನ ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡದು ವಿಚಾರಣೆ ನಡೆಸಿದ್ದಾರೆ.

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Loading...
Unable to load recommendations.
Follow Us