71 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: ಸಂಪೂರ್ಣ ಪಟ್ಟಿ ಇಲ್ಲಿದೆ

71ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳ 71 ಮಂದಿ ಸಾಧಕರಿಗೆ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ. ಬಿ.ಸರೋಜಾದೇವಿ, ಡಾ.ವಿಷ್ಣುವರ್ಧನ್​ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದ್ದು, ನ.19ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

71 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: ಸಂಪೂರ್ಣ ಪಟ್ಟಿ ಇಲ್ಲಿದೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿ
Edited By:

Updated on: Oct 30, 2026 | 5:46 PM

ಬೆಂಗಳೂರು, ಅಕ್ಟೋಬರ್​​ 30: 71ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ 71 ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದಾರೆ. ಸಮಾಜಸೇವೆ 9, ಜಾನಪದ, ಸಂಕೀರ್ಣ ಕ್ಷೇತ್ರದಲ್ಲಿ ತಲಾ 7, ರಂಗಭೂಮಿ, ಸಾಹಿತ್ಯ ಕ್ಷೇತ್ದಲ್ಲಿ ತಲಾ 6, ಶಿಕ್ಷಣ 4, ಸಂಗೀತ, ಚಲನಚಿತ್ರ/ಕಿರುತೆರೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತಲಾ 3, ಶಿಲ್ಪಕಲೆ, ಕೃಷಿ, ವಿಜ್ಞಾನ/ತಂತ್ರಜ್ಞಾನ, ಮಾಧ್ಯಮ,ವೈದ್ಯಕೀಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತಲಾ 2, ನೃತ್ಯ, ಯಕ್ಷಗಾನ, ಬಯಲಾಟ, ಕರಕುಶಲ, ಪರಿಸರ, ಮಾಧ್ಯಮ/ಛಾಯಾಚಿತ್ರ, ಸಂಕೀರ್ಣ ವಾಸ್ತುಶಾಸ್ತ್ರ, ಎಂಜಿನಿಯರಿಂಗ್, ನ್ಯಾಯಾಂಗ, ಹೊರನಾಡು/ಹೊರದೇಶ​​ ಮತ್ತು ಚಿತ್ರಕಲೆ ಕ್ಕ್ಷತ್ರಗಳಲ್ಲಿ ತಲಾ 1 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸರೋಜಾದೇವಿ, ಡಾ.ವಿಷ್ಣುವರ್ಧನ್​ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ

ಬಿ.ಸರೋಜಾದೇವಿ, ಡಾ.ವಿಷ್ಣುವರ್ಧನ್​ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದ್ದು, ನ.19ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಆಹ್ವಾನಿಸಲು ಪ್ರಯತ್ನಿಸುತ್ತಿದ್ದೇವೆ. ವಿಷ್ಣುವರ್ಧನ್ ಜೊತೆ ನಟಿಸಿದವರನ್ನು ಕಾರ್ಯಕ್ರಮಕ್ಕೆ ಕರೆಸುತ್ತೇವೆ. ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರು ಇನ್ನೂ ಬಹಳಷ್ಟು ಜನರಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನೂ ಪರಿಗಣನೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ವಾಟಾಳ್ ನಾಗರಾಜ್​ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ನನಗೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ವಿವರ

ಜಾನಪದ ಕ್ಷೇತ್ರ
ಹೆಸರು ಸ್ಥಳ
ದಾವಲಸಾಬ ಅತ್ತಾರ ಕೊಪ್ಪಳ
ಗೌರಮ್ಮ ಚಾಮರಾಜನಗರ
ಪಾಂಡಪ್ಪ ದೇವಲಪ್ಪ ಲಮಾಣಿ ಗದಗ
ಎ.ಆರ್​​. ಸತ್ಯನಾರಾಯಣ ಬೆಂಗಳೂರು ದಕ್ಷಿಣ
ಈರಣ್ಣ ರುದ್ರಾಕ್ಷಿ ರಾಯಚೂರು
ಶಿವಲಿಂಗಪ್ಪ ಎಂ ಕೊಪ್ಪಳ
ಸಂಗೀತ ಕ್ಷೇತ್ರ
ಡಾ. ಸಿ.ಎ. ಶ್ರೀಧರ್​​ ಮೈಸೂರು
ಡಾ. ಎ. ನಾರಾಯಣಸ್ವಾಮಿ ಹಾಸನ
ವಿ. ಮುರಳಿ ಬೆಂಗಳೂರು ಗ್ರಾಮಾಂತರ
ನೃತ್ಯ ಕ್ಷೇತ್ರ
ಡಾ. ಸತ್ಯನಾರಾಯಣ ರಾಜು ಬೆಂಗಳೂರು ನಗರ
ಚಲನಚಿತ್ರ/ಕಿರುತೆರೆ ಕ್ಷೇತ್ರ
ಕೆ. ವೆಂಕಟರಮಣ ಧಾರವಾಡ
ಅಶೋಕ್​​ ಬೆಂಗಳೂರು ಗ್ರಾಮಾಂತರ
ಕೆ.ಎಸ್​​. ರವೀಂದ್ರನಾಥ್​​ ಬೆಂಗಳೂರು ನಗರ
ಯಕ್ಷಗಾನ ಕ್ಷೇತ್ರ
ಗೋಪಾಲ ಗಾಣಿಗ ಉಡುಪಿ
ಬಯಲಾಟ ಕ್ಷೇತ್ರ
ಹುಲಿಗೆಮ್ಮ ಬಳ್ಳಾರಿ
ರಂಗಭೂಮಿ ಕ್ಷೇತ್ರ
ಡಿ. ಕೆಂಪಣ್ಣ ಬೆಂಗಳೂರು ಗ್ರಾಮಾಂತರ
ಕೆ. ಜಯಲಕ್ಷ್ಮೀ ಪಾಟೀಲ್​​ ಧಾರವಾಡ
ಜಿ.ಡಿ ತಿಮ್ಮಯ್ಯ ಚಿತ್ರದುರ್ಗ
ಕೆ.ಆರ್​​. ಸುಮತಿ ಮೂಸೂರು
ಹೆಚ್​​.ವಿ. ಪುಟ್ಟವೀರಪ್ಪ ಬೆಂಗಳೂರು ದಕ್ಷಿಣ
ಹೊನ್ನ ನಾಯಕ ಮೈಸೂರು
ಶಿಲ್ಪಕಲೆ ಕ್ಷೇತ್ರ
ಜಿ.ಬಿ. ಹಂಸಾನಂದ ಆಚಾರ್ಯ ವಿಜಯನಗರ
ಕಾಡಪ್ಪ ಪರಶುರಾಮ ಗಾಡಿವಡ್ಡರ್​​ ಬೆಳಗಾವಿ
ಚಿತ್ರಕಲೆ ಕ್ಷೇತ್ರ
ಸಿ.ಬಿ. ಸೋಮಶೆಟ್ಟಿ ಬೀದರ್​
ಕರಕುಶಲ ಕ್ಷೇತ್ರ
ಶಾಂತಾಬಾಯಿ ಬೀದರ್​​
ಕೃಷಿ ಕ್ಷೇತ್ರ
ಹೆಚ್​​.ಕೆ. ಶ್ರೀಕಂಠು ಬೆಂಗಳೂರು ದಕ್ಷಿಣ
ಬಿ.ಎ. ಚನ್ನಪ್ಪಗೌಡ ಬೆಂಗಳೂರು
ಪರಿಸರ ಕ್ಷೇತ್ರ
ಡಾ.ಸ್ವಾಮಿ ಆನಂದ ಆರ್​​. ಮೈಸೂರು
ವಿಜ್ಞಾನ/ತಂತ್ರಜ್ಞಾನ ಕ್ಷೇತ್ರ
ಪ್ರೊ. ರಾಜಾಸಾಹೇಬ್​​ ಎ.ಹೆಚ್​​ ಕಲಬುರಗಿ
ಡಾ.ರಾಜಶೇಖರ ಮೂರ್ತಿ ಹೊರದೇಶ (ಕೆನಡಾ)
ಮಾಧ್ಯಮ ಕ್ಷೇತ್ರ
ಡಿ. ಉಮಾಪತಿ ಚಿತ್ರದುರ್ಗ
ಎಂ.ಪಿ. ಸುಶೀಲಾ ಬೆಂಗಳೂರು ನಗರ
ಮಾಧ್ಯಮ/ಛಾಯಾಚಿತ್ರ ಕ್ಷೇತ್ರ
ವಿಶ್ವನಾಥ ಸುವರ್ಣ ದಕ್ಷಿಣ ಕನ್ನಡ
ಸಂಕೀರ್ಣ ಕ್ಷೇತ್ರ
ರುಕ್ಮಿಣಿ ಬಾಯಿ ಬಾಗಲಕೋಟೆ
ಡಿ.ಎಸ್​​. ಚೌಗಲೆ ಬೆಳಗಾವಿ
ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ್​ ಬೆಂಗಳೂರು
ರವಿ ಪ್ರವೀಣ್​​ ನೊರ್ಹೋನಾ ಬೆಂಗಳೂರು
ಎಂ.ಆರ್​​. ಜಯಶಂಕರ್​​ ಚಿಕ್ಕಮಗಳೂರು
ಪ್ರಸಾದ್​​ ಬಿಡ್ಡಪ್ಪ ಕೊಡಗು
ವಾಸಪ್ಪ ಯಲ್ಲಪ್ಪ ಕುಸಗೂರ ಹಾವೇರಿ
ಸಂಕೀರ್ಣ (ವಾಸ್ತುಶಿಲ್ಪ) ಕ್ಷೇತ್ರ
ಬಿ.ಪಿ. ಅರಾಧ್ಯ ಬೆಂಗಳೂರು ದಕ್ಷಿಣ
ಸಮಾಜ ಸೇವೆ ಕ್ಷೇತ್ರ
ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳು ಗದಗ
ಬಸವರಾಜು ಮಂಡ್ಯ
ಕಾಗೋಡು ತಿಮ್ಮಪ್ಪ ಶಿವಮೊಗ್ಗ
ಡಾ.ಎಸ್.ಎಂ. ಎಲಿ ದಾವಣಗೆರೆ
ಡಾ. ಜಿ.ಎಸ್. ಚಂದ್ರಶೇಖರ್ ಉತ್ತರ ಕನ್ನಡ
ಡಾ. ಶಿವಾನಂದ ಮಹಾಸ್ವಾಮಿ ಕಲಬುರಗಿ
ಕೃಷ್ಠೇಗೌಡ ಬಿನ್ ವೆಂಕಟರಾಯಪ್ಪ ಚಿಕ್ಕಬಳ್ಳಾಪುರ
ಎ.ಸಿ ಭಂಡಾರಿ ದಕ್ಷಿಣ ಕನ್ನಡ
ಗುರುಮ್ಮ ಹಂಪಯ್ಯ ಸಂಕಿನಮಠ ಬಾಗಲಕೋಟೆ
ವೈದ್ಯಕೀಯ ಕ್ಷೇತ್ರ
ಡಾ. ವಿಜಯೇಂದ್ರ ಹೊನ್ನೂರಪ್ಪ ಬೆಂಗಳೂರು
ಡಾ. ವಿಜಯೇಂದ್ರ ಹೊನ್ನೂರ್‌ಪ್ಪ ಬೆಳಗಾವಿ
ಆಡಳಿತ ಕ್ಷೇತ್ರ
ತೆರೇಸಾ ಭಟ್ಟಾಚಾರ್ಯ ಬೆಂಗಳೂರು ನಗರ
ಡಾ. ಕೆ.ಎಸ್. ಸೋಮಶೇಖರ್ ನವದೆಹಲಿ
ಎಂಜಿನಿಯರಿಂಗ್​​ ಕ್ಷೇತ್ರ
ಡಾ. ಕೆ.ಎನ್. ವೆಂಕಟ್ ಕೃಷ್ಣಾರಾವ್ ಚಿಕ್ಕಬಳ್ಳಾಪುರ
ಸಾಹಿತ್ಯ ಕ್ಷೇತ್ರ
ಡಾ. ಈಂದಿರಾ ಹೆಗಡೆ ದಕ್ಷಿಣ ಕನ್ನಡ
ವೀರಹನುಮಾನ್ ರಾಯಚೂರು
ನಾರಾಯಣಘಟ್ಟೆ (ನಾಹೋಗ) ತುಮಕೂರು
ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ ಚಿಕ್ಕಮಗಳೂರು
ಡಾ. ಕರಿಗೌಡ ಬೀಚನಹಳ್ಳಿ ತುಮಕೂರು
ಡಾ. ಸಿದ್ಧರಾಮ ಹೊನ್ನೂಲ್ ಯಾದಗಿರಿ
ಶಿಕ್ಷಣ ಕ್ಷೇತ್ರ
ಡಾ. ಫಾ|| ಜೋಸೆಫ್. ಸಿ. ಸಿ ಬೆಂಗಳೂರು ನಗರ
ಶಾಂತಪ್ಪ ಪರಿ ದಶವಂತ ವಿಜಯಪುರ
ಸಂಗೀತಾ ಎನ್. ಕಟ್ಟಿಮನಿ ಕಲಬುರಗಿ
ಪ್ರೊ. ಎನ್.ಎಸ್. ರಂಗರಾಜು ಮೈಸೂರು
ನ್ಯಾಯಾಂಗ ಕ್ಷೇತ್ರ
ಬಿ.ವಿ. ಆಚಾರ್ಯ ಉಡುಪಿ
ಹೊರನಾಡು / ಹೊರದೇಶ ಕ್ಷೇತ್ರ
ರಮೇಶ್ ಆರ್ ಗೌಡ ಅಮೆರಿಕ
ಕ್ರೀಡಾ ಕ್ಷೇತ್ರ
ಎ.ವಿ. ರವಿ (ಜಿಮ್​​ ರವಿ) ಕೋಲಾರ
ಡಾ.ಎ.ಬಿ. ಸುಬ್ಬಯ್ಯ ಕೊಡಗು
ಎಂ.ಗಿರೀಶ್​​ ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

​

Published On - 5:42 pm, Fri, 30 October 26

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us