
ಬೆಂಗಳೂರು, (ಜುಲೈ 09): ಶಾಪಿಂಗ್ ಹೋಗಿದ್ದಕ್ಕೆ ಆಕ್ರೋಶಗೊಂಡ ಪತಿ ಹೆಂಡ್ತಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 29 ವರ್ಷದ ಪದ್ಮಜಾಳನ್ನು ಪತಿ ಹರೀಶ್ ಕಾಲಿನಿಂದ ತುಳಿದು ಉಸಿರುಗಟ್ಟಿಸಿ ಕೊಂದಿದ್ದಾನೆ. ಪೂಜಾ ಶಾಪಿಂಗ್ ಗೆ ಹೋಗಿದ್ದಕ್ಕೆ ಆಕ್ರೋಶಗೊಂಡಿದ್ದ ಹರೀಶ್, ಜಗಳ ತೆಗೆದು ಆಕೆಗೆ ಹೊಡೆದು ಕೆಳಗೆ ಬೀಳಿಸಿದ್ದಾನೆ. ಬಳಿಕ ಕಾಲಿನಿಂದ ಪೂಜಾಳ ಕತ್ತನ್ನು ತುಳಿದು ಉಸಿರುಗಟ್ಟಿಸಿ ಭೀಕರವಾಗಿ ಹತ್ಯೆಗೈದಿದ್ದಾನೆ.
ಕೋಲಾರ ಮೂಲದ ದಂಪತಿ ಬಿಇ ಪದದೀಧರರು. ಇಬ್ಬರೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ಕೆಲ ತಿಂಗಳ ಹಿಂದಷ್ಟೇ ಪತಿ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದ. ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕೆ ಆಗಾಗ ಜಗಳ ಮಾಡುತ್ತಿದ್ದ. ಹೀಗಿರುವಾಗ ಪತ್ ಪೂಜಾ ಶಾಪಿಂಗ್ ಗೆ ಹೋಗಿದ್ದಕ್ಕೆ ಹರೀಶ್ ಆಕ್ರೋಶಗೊಂಡಿದ್ದು, ಪೂಜಾ ಶಾಪಿಂಗ್ ಮುಗಿಸಿಕೊಂಡು ಮನೆ ಬರುತ್ತಿದ್ದಂತೆಯೇ ಆಕೆಯೊಂದಿಗೆ ಜಗಳಕ್ಕೆ ಬಿದ್ದಿದ್ದಾನೆ. ಈ ವೇಳೆ ಆಕೆಗೆ ಹೊಡೆದು ಕೆಳಗೆ ಬೀಳಿಸಿ ಬಳಿಕ ಕತ್ತು ತುಳಿದು ಸಾಯಿಸಿದ್ದಾನೆ.
ಈ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ಹರೀಶ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಮತ್ತೊಂದೆಡೆ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆಯಲ್ಲಿ 14 ವರ್ಷದ ಬಾಲಕಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ. ತಂದೆ, ತಾಯಿ ಕೆಲಸಕ್ಕೆ ಹೋಗಿದ್ದಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ಅರುಣ(14) ಎನ್ನುವ ಬಾಲಕಿಯನ್ನು ಹತ್ಯೆಗೈದಿದ್ದಾರೆ. ಆದ್ರೆ, ಕೊಲೆಗೆ ಕಾರಣ ತಿಳಿದುಬಂದಿಲ್ಲ.
Published On - 4:14 pm, Wed, 9 July 25