ಪ್ರೀತಿಸಿ ಮದ್ವೆ: ಹಸುಗೂಸು ಸೇರಿ 3 ಹೆಣ್ಮಕ್ಕಳನ್ನ ಪತ್ನಿ ಕೈಗಿಟ್ಟು ಪತಿ ಪರಾರಿ

ವ್ಯಕ್ತಿಯೋರ್ವ ತನ್ನ ಪ್ರೀತಿಯ ಬಲೆಗೆ ಸ್ಟಾಫ್ ನರ್ಸ್​​​​​ ಬೀಳಿಸಿಕೊಂಡಿದ್ದು, ಬಳಿಕ ಆಕೆಯ ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದ. ಹೊಸರಲ್ಲಿ ಎಲ್ಲವೂ ಚೆನ್ನಾಗಿತ್ತು. ಆದ್ರೆ, ಮೂರು ಮಕ್ಕಳು ಆಗುತ್ತಿದ್ದಂತೆಯೇ ಪತ್ನಿಗೆ ಕೈಕೊಟ್ಟು ಪರಾರಿಯಾಗಿದ್ದಾನೆ. ಸದ್ಯ ಪತ್ನಿ, ಹುಟ್ಟಿರುವ ಹಸುಗೂಸ ಜೊತೆ ಮೂರು ಮಕ್ಕಳನ್ನು ಸಾಕಲಾಗದೇ ಸಂಕಷ್ಟಕ್ಕೀಡಾಗಿದ್ದಾಳೆ.

ಪ್ರೀತಿಸಿ ಮದ್ವೆ: ಹಸುಗೂಸು ಸೇರಿ 3 ಹೆಣ್ಮಕ್ಕಳನ್ನ ಪತ್ನಿ ಕೈಗಿಟ್ಟು ಪತಿ ಪರಾರಿ
ಹರೀಶ್- ವರಲಕ್ಷ್ಮೀ
Edited By:

Updated on: Jan 04, 2026 | 5:21 PM

ಬೆಂಗಳೂರು, (ಜನವರಿ 04): ಮೂರೂ ಹೆಣ್ಣು ಮಕ್ಕಳು (Children) ಎಂದು ಪತ್ನಿಗೆ ಕೈಕೊಟ್ಟು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದ್ದು, ಈ ಸಂಬಂಧ ಈಶಾನ್ಯ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್, ಪತ್ನಿಗೆ ಕೈಕೊಟ್ಟು ಪರಾರಿಯಾದ ವ್ಯಕ್ತಿ. ಹರೀಶ್ ಮೂಲತಃ ರಾಜಸ್ಥಾನದವನಾಗಿದ್ದು, ಬೆಂಗಳೂರಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದಾನೆ. ಈತ ವರಲಕ್ಷ್ಮೀ ಎಂಬ ಸ್ಟಾಫ್ ನರ್ಸ್​ನ ಪ್ರೀತಿಸಿ ಮದುವೆ ಆಗಿದ್ದ. ಬಳಿಕ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಿದ್ದ. ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಈ ಜೋಡಿಗೆ ಹುಟ್ಟಿದ ಮೂವರು ಮಕ್ಕಳು ಕೂಡ ಹೆಣ್ಣು. ಇದರಿಂದ ಹರೀಶ್ ವರಲಕ್ಷ್ಮೀಗೆ ಕೈಕೊಟ್ಟು ನಾಪತ್ತೆಯಾಗಿದ್ದಾನೆ.

ಇದು ಹರೀಶ್​ನ ಅಸಮಾಧಾನಕ್ಕೆ ಕಾರಣವಾಗಿದೆ. ಮೊದಲ ಇಬ್ಬರು ಮಕ್ಕಳು ಹೆಣ್ಣು ಎಂದು ಗೊತ್ತಾದಾಗ ಮೂರನೇಯ ಬಾರಿಗೆ ಗಂಡು ಹುಟ್ಟಬಹುದು ಎಂಬ ಆಸೆಯಲ್ಲಿದ್ದ. ಇದೀಗ ಹರೀಶ್ ಪತ್ನಿ ವಿಜಯಲಕ್ಷ್ಮೀ, ಕಳೆದ ಒಂದೂವರೆ ತಿಂಗಳ ಹಿಂದೆ ಹಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ಒಂದೂವರೆ ತಿಂಗಳ ಹಸಗೂಸು ಹಾಗೂ ಇಬ್ಬರು ಮಕ್ಕಳನ್ನ ಪತ್ನಿಯ ಮಡಿಲಿಗೆ ಹಾಕಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಬೆಂಗಳೂರು, (ಪ್ರೀತಿಸಿದ ಹುಡುಗನ ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಗೆ ಲಕ್ಷ ಲಕ್ಷ ವಂಚನೆ!

ಪತಿ ಕೈಕೊಟ್ಟ ಬೆನ್ನಲ್ಲೇ ಪತ್ನಿ ವರಲಕ್ಷ್ಮೀ ಆತನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಮೂವರು ಹೆಣ್ಮಕ್ಕಳು ಎಂದು ನಮ್ಮನ್ನು ಬಿಟ್ಟು ಹೋಗಿ ಮತ್ತೊಂದು ಮಹಿಳೆ ಜೊತೆ ವಾಸವಿದ್ದಾನೆ. ಈಗ ನನಗೆ ಮೂವರು ಮಕ್ಕಳನ್ನು ಸಾಕೋದಕ್ಕೆ ಆಗುತ್ತಿಲ್ಲ. ಮಕ್ಕಳ ಶಾಲಾ ಫೀಸ್, ಮನೆ ಬಾಡಿಗೆ ಕಟ್ಟಲೂ ಕೂಡ ಆಗುತ್ತಿಲ್ಲ. ಇದೀಗ ಹುಟ್ಟಿರುವ ಹಸುಗೂಸನ್ನ ಆರೈಕೆ ಮಾಡೋದೇ ಕಷ್ಟವಾಗಿದೆ ಎಂದು ಆರೋಪಿಸಿ ಒಂದು ತಿಂಗಳ ಹಿಂದೆಯೇ ಈಶಾನ್ಯ ವಿಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದ್ರೆ ಪೊಲೀಸರು, ಹರೀಶನನ್ನು ಕರೆಸಿಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us