ಹೋಸಕೋಟೆ: ಪೊಲೀಸರು ಅರೆಸ್ಟ್ ಮಾಡಲು ತೆರಳಿದ್ದಾಗ ಸೈನೇಡ್ ತಿಂದು ಸಾವನಪ್ಪಿದ ಆರೋಪಿ ಸರಗಳ್ಳ

ಆರೋಪಿ ಕಳ್ಳತನ ಕೃತ್ಯಕ್ಕೂ ಮೊದಲು ದೇವಾಲಯಕ್ಕೆ ತೆರಳಿ ಕೈ ಮುಗಿದು ಬರ್ತಿದ್ದ. ಹೀಗಾಗಿ ದೇವಾಲಯದ ಬಳಿ ಪೊಲೀಸರು ಆರೋಪಿ ಅರೆಸ್ಟ್ ಮಾಡಲು ಮುಂದಾಗಿದ್ದರು. ಈ ವೇಳೆ ಜೇಬಿನಲ್ಲಿದ್ದ ಸೈನೇಡ್ ತಿಂದು ರಕ್ತ ಕಾರಿ ಶೇಖರ್ ಮೃತಪಟ್ಟಿದ್ದಾನೆ.

ಹೋಸಕೋಟೆ: ಪೊಲೀಸರು ಅರೆಸ್ಟ್ ಮಾಡಲು ತೆರಳಿದ್ದಾಗ ಸೈನೇಡ್ ತಿಂದು ಸಾವನಪ್ಪಿದ ಆರೋಪಿ ಸರಗಳ್ಳ
ಸಂಗ್ರಹ ಚಿತ್ರ
Edited By: ಆಯೇಷಾ ಬಾನು

Updated on: Jul 28, 2021 | 1:16 PM

ಬೆಂಗಳೂರು: ಪೊಲೀಸರು ಅರೆಸ್ಟ್ ಮಾಡಲು ತೆರಳಿದ್ದಾಗ ಸೈನೇಡ್ ತಿಂದು ಆರೋಪಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸರಗಳ್ಳತನ ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಸರಗಳ್ಳತನ ಮಾಡಿದ್ದ ಆರೋಪಿಯನ್ನು ಅರೆಸ್ಟ್ ಮಾಡಲು ತೆರಳಿದ್ದರು ಈ ವೇಳೆ ಆರೋಪಿ ಸೈನೇಡ್ ತಿಂದು ಸಾವನ್ನಪ್ಪಿದ್ದಾನೆ. ಆಂಧ್ರದ ಮದನಪ್ಲಿ ಮೂಲದ ಶಂಕರ್ ಮೃತ ಅರೋಪಿ.

ಶಂಕರ್ ವೈ.ಎಸ್.ಆರ್ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ. ಆಂಧ್ರದಿಂದ ಬೆಂಗಳೂರಿಗೆ ಬಂದು ಕಳ್ಳತನ ಮಾಡ್ತಿದ್ದ. ಶೇಖರ್ ಮತ್ತು ಚಂದ್ರಶೇಖರ್ ಎಂಬುವವರು ನಗರದಲ್ಲಿ ಸರಗಳ್ಳತನ ಮಾಡ್ತಿದ್ರು. ಆರೋಪಿಗಳ ಬೆನ್ನು ಹತ್ತಿದ್ದ ಕೆ.ಆರ್. ಪುರಂ ಪೊಲೀಸರು ಇಂದು ಬೆಳಗ್ಗೆ ಹೊಸಕೋಟೆ ಬಳಿಯ ಪಿಳಗುಂಪಾದ ದೇವಾಲಯಕ್ಕೆ ಬಂದಿದ್ದ ಆರೋಪಿಯನ್ನು ಸೆರೆ ಹಿಡಿಯಲು ಯತ್ನಿಸಿದಾಗ ಆರೋಪಿ ಸೈನೇಡ್ ತಿಂದು ಮೃತಪಟ್ಟಿದ್ದಾನೆ.

ಆರೋಪಿ ಕಳ್ಳತನ ಕೃತ್ಯಕ್ಕೂ ಮೊದಲು ದೇವಾಲಯಕ್ಕೆ ತೆರಳಿ ಕೈ ಮುಗಿದು ಬರ್ತಿದ್ದ. ಹೀಗಾಗಿ ದೇವಾಲಯದ ಬಳಿ ಪೊಲೀಸರು ಆರೋಪಿ ಅರೆಸ್ಟ್ ಮಾಡಲು ಮುಂದಾಗಿದ್ದರು. ಈ ವೇಳೆ ಜೇಬಿನಲ್ಲಿದ್ದ ಸೈನೇಡ್ ತಿಂದು ರಕ್ತ ಕಾರಿ ಶೇಖರ್ ಮೃತಪಟ್ಟಿದ್ದಾನೆ. ಅವನ ಜೊತೆಗಿದ್ದ ಮತ್ತೋರ್ವ ಅರೋಪಿ ಚಂದ್ರಶೇಖರ್ನನ್ನು ಪೊಲೀಸರು ಬಂಧಿಸಿದ್ದಾರೆ. ಹೋಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಇಸ್ತಾನ್‌ಬುಲ್‌ನಿಂದ ಬೆಂಗಳೂರಿಗೆ ಗನ್‌ಗಳ ಪಾರ್ಸೆಲ್, ಗನ್‌ ನೋಡಿ ಏರ್‌ಪೋರ್ಟ್ ಸಿಬ್ಬಂದಿಗೆ ಆತಂಕ: ಮುಂದೇನಾಯ್ತು?

Published On - 1:15 pm, Wed, 28 July 21

TV9 Web

TV9 Kannada

Read More
Loading...
Unable to load recommendations.
Follow Us