ಇಸ್ತಾನ್‌ಬುಲ್‌ನಿಂದ ಬೆಂಗಳೂರಿಗೆ ಗನ್‌ಗಳ ಪಾರ್ಸೆಲ್, ಗನ್‌ ನೋಡಿ ಏರ್‌ಪೋರ್ಟ್ ಸಿಬ್ಬಂದಿಗೆ ಆತಂಕ: ಮುಂದೇನಾಯ್ತು?

ನಿನ್ನೆ ಕಾರ್ಗೋ ಟರ್ಮಿನಲ್​ಗೆ ಇಸ್ತಾನ್‌ಬುಲ್‌ನಿಂದ ಬಂದಿದ್ದ ಪಾರ್ಸೆಲ್​ ಅನ್ನು ಟ್ರಾನ್ಸಪರ್ ಮಾಡುವಾಗ ಅನುಮಾನವಾಗಿ ಸಿಬ್ಬಂದಿ ಪಾರ್ಸೆಲ್​ ಬಿಚ್ಚಿ ನೋಡಿದ್ದಾರೆ. ಒಪನ್ ಮಾಡಿ ನೋಡಿದಾಗ ಪಾರ್ಸಲ್ ಒಳಗಡೆ ಗನ್​ಗಳು ಪತ್ತೆಯಾಗಿವೆ. ಬಳಿಕ ಗನ್​ಗಳನ್ನು ತೆಗದು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಡಮ್ಮಿ ಗನ್ ಎನ್ನುವುದು ತಿಳಿದಿದೆ.

ಇಸ್ತಾನ್‌ಬುಲ್‌ನಿಂದ ಬೆಂಗಳೂರಿಗೆ ಗನ್‌ಗಳ ಪಾರ್ಸೆಲ್, ಗನ್‌ ನೋಡಿ ಏರ್‌ಪೋರ್ಟ್ ಸಿಬ್ಬಂದಿಗೆ ಆತಂಕ: ಮುಂದೇನಾಯ್ತು?
ಇಸ್ತಾನ್‌ಬುಲ್‌ನಿಂದ ಬೆಂಗಳೂರಿಗೆ ಗನ್‌ಗಳ ಪಾರ್ಸೆಲ್

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಗನ್​ಗಳ ಪಾರ್ಸೆಲ್ ಬಂದಿದ್ದು, ಕಾರ್ಗೋ ಟರ್ಮಿನಲ್​ನಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತು. ಇಸ್ತಾನ್‌ಬುಲ್‌ನಿಂದ ಬೆಂಗಳೂರಿಗೆ ಗನ್‌ಗಳನ್ನು ಪಾರ್ಸೆಲ್ ಮಾಡಲಾಗಿದ್ದು, ಪರಿಶೀಲನೆಯ ವೇಳೆ ಡಮ್ಮಿ ಗನ್‌ಗಳು ಎಂಬುವುದು ಪತ್ತೆಯಾಗಿದೆ. ಪ್ರಾರಂಭದಲ್ಲಿ ಕಾರ್ಗೋ ಟರ್ಮಿನಲ್ ಸಿಬ್ಬಂದಿ ಗನ್​ಗಳ (Gun) ರಾಶಿ ಕಂಡು ಆತಂಕಗೊಂಡಿದ್ದರು. ಬಳಿಕ ಸತ್ಯಾಂಶ ಬೆಳಕಿಗೆ ಬಂದಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ನಿನ್ನೆ ಕಾರ್ಗೋ ಟರ್ಮಿನಲ್​ಗೆ ಇಸ್ತಾನ್‌ಬುಲ್‌ನಿಂದ ಬಂದಿದ್ದ ಪಾರ್ಸೆಲ್​ ಅನ್ನು ಟ್ರಾನ್ಸಪರ್ ಮಾಡುವಾಗ ಅನುಮಾನವಾಗಿ ಸಿಬ್ಬಂದಿ ಪಾರ್ಸೆಲ್​ ಬಿಚ್ಚಿ ನೋಡಿದ್ದಾರೆ. ಒಪನ್ ಮಾಡಿ ನೋಡಿದಾಗ ಪಾರ್ಸಲ್ ಒಳಗಡೆ ಗನ್​ಗಳು ಪತ್ತೆಯಾಗಿವೆ. ಬಳಿಕ ಗನ್​ಗಳನ್ನು ತೆಗದು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಡಮ್ಮಿ ಗನ್ ಎನ್ನುವುದು ತಿಳಿದಿದೆ. ಸದ್ಯ ಪಾರ್ಸೆಲ್​ ಬಗ್ಗೆ ಏರ್ಪೋಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೆಹಲಿ, ಜಮ್ಮು-ಕಾಶ್ಮೀರದ 40 ಪ್ರದೇಶಗಳಲ್ಲಿ ಸಿಬಿಐ ದಾಳಿ
ಜಮ್ಮು-ಕಾಶ್ಮೀರ ಮತ್ತು ದೆಹಲಿ ಸೇರಿ ಒಟ್ಟು 40 ಪ್ರದೇಶಗಳಲ್ಲಿ ಇಂದು ಸಿಬಿಐ ತನಿಖಾ ದಳ ದಾಳಿ ನಡೆಸಿದೆ. ಬಂದೂಕು ಪರವಾನಗಿ  ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ರೇಡ್​ ನಡೆದಿದ್ದು, ಜಮ್ಮು-ಕಾಶ್ಮೀರದ ಹಿರಿಯ ಐಎಎಸ್​ ಅಧಿಕಾರಿ ಶಾಹೀದ್ ಇಕ್ಬಾಲ್​ ಚೌಧರಿ ಅವರ ಶ್ರೀನಗರದಲ್ಲಿರುವ ನಿವಾಸ ಸೇರಿ, ಉದ್ಧಾಂಪುರ, ರಾಜೌರಿ, ಅನಂತನಾಗ್​ ಮತ್ತು ಬಾರಾಮುಲ್ಲಾ ಸೇರಿ ಹಲವು ಪ್ರದೇಶಗಳಲ್ಲಿ ಸಿಬಿಐ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

ಇಕ್ಬಾಲ್​ ಚೌಧರಿಯವರು ಸದ್ಯ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿಯಾಗಿದ್ದಾರೆ ಮತ್ತು ಜಮ್ಮು-ಕಾಶ್ಮೀರದ ಮಿಷನ್ ಯೂತ್​ನ ಸಿಇಒನೂ ಹೌದು. ಈ ಹಿಂದೆ ಕಥುರಾ, ಕಥುವಾ, ರಿಯಾಸಿ, ರಾಜೌರಿಯಂಡ್ ಉಧಂಪುರ್ ಜಿಲ್ಲೆಗಳ ಜಿಲ್ಲಾಧಿಕಾರಿಯೂ ಆಗಿದ್ದರು. ಇವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೇರೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸಾವಿರಾರು ಬಂದೂರು ಪರವಾನಗಿಗಳನ್ನು ನಕಲಿ ಹೆಸರುಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೇವಲ ಇವರೊಬ್ಬರೇ ಅಲ್ಲದೆ, ಪ್ರಸ್ತುತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು ಎಂಟು ಮಂದಿ ಜಿಲ್ಲಾಧಿಕಾರಿಗಳ ಮೇಲೆ ಸಿಬಿಐ ಕಣ್ಣಿಟ್ಟಿದ್ದು, ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಪೋಟ; 6 ಮಂದಿಗೆ ಗಾಯ

ಗನ್​ ತೋರಿಸಿ ಡಾನ್​ ಆಗ್ತೇನೆ ಎಂದು ಪೋಸ್​ ಕೊಟ್ಟವನು ಅರೆಸ್ಟ್​! ಬಿಲ್ಡಪ್​ ಕೊಟ್ಟು ಪೊಲೀಸರಿಗೆ ಅಥಿತಿಯಾದ

 

Click on your DTH Provider to Add TV9 Kannada