ಬೆಂಗಳೂರು, ಸೆ.11: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ತಲೆಗೆ ಪೆಟ್ಟಾಗಿದ್ದ ಯುವಕನಿಗೆ ಫೋರ್ಟಿಸ್ ಆಸ್ಪತ್ರೆ (fortis hospital) ಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಹೀಗೆ ಹತ್ತು ಹಲವು ಕಾರ್ಯಗಳಿಂದ ಈ ಆಸ್ಪತ್ರೆ ಮೆಚ್ಚುಗೆ ಪಡೆದಿದೆ. ಆದರೀಗ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆ ಮೆಡಿಕಲ್ ಸ್ಟೋರ್ ವಿರುದ್ಧ ದೂರುವೊಂದು ಕೇಳಿಬಂದಿದೆ. ಹೌದು, ಇಲ್ಲೇ ಮಾತ್ರೆಗಳನ್ನ ಖರೀದಿಸಬೇಕೆಂದು ವಿವಿಐಪಿ ಭದ್ರತೆ ಡಿಸಿಪಿ ಮಂಜುನಾಥ್ ಎಂಬುವವರಿಗೆ ಧಮ್ಕಿ ಹಾಕಿದ ಆರೋಪದ ಮೇಲೆ ಡಿಸಿಪಿ ದೂರು ಆಧರಿಸಿ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಸ್ಪತ್ರೆ ಒಳರೋಗಿಯಾಗಿ ಸೆಪ್ಟೆಂಬರ್ 6ರಂದು ದಾಖಲಾಗಿದ್ದ ವಿವಿಐಪಿ ಭದ್ರತೆ ಡಿಸಿಪಿ ಮಂಜುನಾಥ್ ಅವರು ಚಿಕಿತ್ಸೆ ಪಡೆದು ಸೆ.10ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಈ ವೇಳೆ ವೈದ್ಯರು ಪ್ರಿಸ್ಕ್ರಿಪ್ಷನ್ನಲ್ಲಿ ಐದು ಮಾತ್ರೆ ಬರೆದಿದ್ದರು. ಅದರಂತೆ ಅದನ್ನು ಆಸ್ಪತ್ರೆ ಮೆಡಿಕಲ್ ಸ್ಟೋರ್ನಲ್ಲಿ ಕೇಳಿದ್ದಾಗ, 1 ಟ್ಯಾಬ್ಲೆಟ್ ಬೆಲೆ 350 ರೂ. ಒಂದು ಶೀಟ್ನಲ್ಲಿ 25 ಟ್ಯಾಬ್ಲೆಟ್ ಇದೆ. ಎಲ್ಲ ಮಾತ್ರೆಗಳು ಸಹ ತೆಗೆದುಕೊಳ್ಳಬೇಕೆಂದು ಸಿಬ್ಬಂದಿ ಸೂಚಿಸಿದ್ದಾನೆ.
ಇದನ್ನೂ ಓದಿ:ಫೋರ್ಟಿಸ್ ಆಸ್ಪತ್ರೆಯಲ್ಲಿ ನೈಜೀರಿಯಾದ ಬಾಲಕನಿಗೆ ಗುಪ್ತಾಂಗ ಮರುಜೋಡಣೆ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ
ಈ ಹಿನ್ನಲೆ ಡಿಸಿಪಿ ಮಂಜುನಾಥ್ ಅದನ್ನು ಕೊಳ್ಳಲು ನಿರಾಕರಿಸಿದ್ದಾರೆ. ಈ ವೇಳೆ ಸಿಬ್ಬಂದಿ ‘ನಮ್ಮ ವೈದ್ಯರು ಬರೆದಿರುವ ಮಾತ್ರೆ ಎಲ್ಲೂ ಸಿಗಲ್ಲ. ಇಲ್ಲೇ ಬಂದು ಮಾತ್ರೆ ಖರೀದಿಸಬೇಕು ಎಂದು ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ. ಎನ್ಸಿಆರ್ ದಾಖಲಿಸಿಕೊಂಡಿರುವ ಹೈಗ್ರೌಂಡ್ ಠಾಣೆಯ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ