ರಸ್ತೆ ಅಪಘಾತದಲ್ಲಿ ತೀವ್ರವಾಗಿ ತಲೆಗೆ ಪೆಟ್ಟಾಗಿದ್ದ 19 ವರ್ಷದ ಯುವಕನಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ
ತೀವ್ರ ರಸ್ತೆ ಅಪಘಾತಕ್ಕೆ ಒಳಗಾಗಿ ಮೆದುಳಿನ ಕೋಶಗಳ ನಡುವೆ ರಕ್ತಸ್ರಾವ ಉಂಟಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 19 ವರ್ಷದ ಕಾಲೇಜು ಯುವಕನಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
ಬೆಂಗಳೂರು, ಆ.06: ರಸ್ತೆ ಅಪಘಾತದಲ್ಲಿ ತೀವ್ರವಾಗಿ ತಲೆಗೆ ಪೆಟ್ಟಾಗಿದ್ದ 19 ವರ್ಷದ ಯುವಕನಿಗೆ ಫೋರ್ಟಿಸ್ ಆಸ್ಪತ್ರೆ (fortis hospital) ಯಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ರಘುರಾಮ್ ಜಿ, ‘19 ವರ್ಷದ ರಾಜ್ ಎಂಬುವವರು ಹುಳಿಮಾವು ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಫುಟ್‌ಪಾತ್‌ಗೆ ಕಾರು ಡಿಕ್ಕಿಯಾದ ಪರಿಣಾಮ ಹಿಂಬದಿ ಕುಳಿತಿದ್ದ ಇವರ ತಲೆ, ಕೈಗೆ ತೀವ್ರವಾಗಿ ಪೆಟ್ಟಾಗಿತ್ತು. ಅಪಘಾತದ ತೀವ್ರತೆಯಿಂದಾಗಿ ಇವರ ಬಲಗೈ ಮೂಳೆ ಮುರಿದು, ತಲೆಗೆ ತೀವ್ರವಾಗಿ ಗಾಯವಾಗಿ ಕಿವಿಯಿಂದ ರಕ್ತಸ್ತ್ರಾವವಾಗಿತ್ತು. ಇದರಿಂದ ಅವರು ಪ್ರಜ್ಞೆಕಳೆದುಕೊಂಡಿದ್ದರು.
ಕೂಡಲೇ ಅವರನ್ನು ಫೋರ್ಟಿಸ್ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಕರೆತರಲಾಯಿತು. ತಕ್ಷಣ ನಮ್ಮ ವೈದ್ಯರ ತಂಡ ಅವರನ್ನು ಎಂಆರ್‌ಐಗೆ ಒಳಪಡಿಸಲಾಯಿತು. ಅವರಿಗೆ ಮೆದುಳಿನ ಕೋಶಗಳ ನಡುವೆ ಸಂಪರ್ಕ ಕಲ್ಪಿಸುವ ನರಗಳಲ್ಲಿ ರಕ್ತಸ್ರಾವ ಆಗಿರುವುದು ಕಂಡು ಬಂತು. ಇದನ್ನು ಆಕ್ಸಾನಲ್ ಗಾಯ ಎನ್ನಲಾಗುತ್ತದೆ. ಈ ಗಾಯದಿಂದ ಅವರು ಮಾತನಾಡುವ ಹಾಗೂ ಚಲಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಹೀಗಾಗಿ ಅವರಿಗೆ ಕೂಡಲೇ ತುರ್ತು ಚಿಕಿತ್ಸೆಯನ್ನು ನೀಡಲಾಯಿತು.
ಇದನ್ನೂ ಓದಿ:ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿ; ಸಿಟಿ ಸ್ಕ್ಯಾನ್ ನೋಡಿ ಬೆಚ್ಚಿಬಿದ್ದ ವೈದ್ಯರು
ನ್ಯೂರೋ ತಂಡವು ಅವರ ಮಾತಿನ ತೊಂದರೆ, ಮೆಮೊರಿ ಸಮಸ್ಯೆಯನ್ನು ಪರಿಸರಿಸುವ ನಿಟ್ಟಿನಲ್ಲಿ ಚಿಕಿತ್ಸೆ ನೀಡಿದರು. ಆರಂಭಿಕ ಚಿಕಿತ್ಸೆಯ ನಂತರ, ಫಿಸಿಯೋಥೆರಪಿ ಮತ್ತು ಸ್ಪೀಚ್ ಥೆರಪಿ ನೀಡಲಾಗುತ್ತಿದೆ ಎಂದರು. ಇದೇ ವೇಳೆ ಮಾತನಾಡಿದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ನಾರಾಯಣ್ ಹುಲ್ಸೆ, ‘ಅಪಘಾತದಿಂದ ರಾಜ್ ಅವರ ಬಲಗೈ ಮೇಲ್ಭಾಗದ ಮೂಳೆ ಮುರಿದ ಕಾರಣ, ತೆಳುವಾದ ತಂತಿಯನ್ನು ಬಳಸಿಕೊಂಡು, ಪ್ಲೇಟ್ ಹಾಗೂ ಸ್ಕ್ರೂಗಳಿಂದ ಬಲಗೊಳಿಸಲಾಗಿದೆ. ಜೊತೆಗೆ, ಮೊಣಕೈ ಕೀಲಿನ ಒಂದು ಭಾಗವನ್ನು ತೆಗೆದುಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ