ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಕೊಟ್ಟೇ ಕೊಡ್ತಾರೆ: ರಾಜ್ಯಪಾಲರ ಭೇಟಿ ಬಳಿಕ ಅಬ್ರಾಹಂ ಸ್ಫೋಟಕ ಹೇಳಿಕೆ

ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಬ್ರಾಹಂ, ರಾಜ್ಯಪಾಲರಿಗೆ ದೂರು ನೀಡಿದ್ದು, ಇದೀಗ ಥಾವರ್ ಚೆಂದ್ ಗೆಹ್ಲೋಟ್​ ಅವರು ದೆಹಲಿಯಿಂದ ವಾಪಸ್ ಬರುತ್ತಿದ್ದಂತೆಯೇ ಅಬ್ರಾಹಂ ರಾಜ್ಯಪಾಲರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟೇ ಕೊಡುತ್ತಾರೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಕೊಟ್ಟೇ ಕೊಡ್ತಾರೆ: ರಾಜ್ಯಪಾಲರ ಭೇಟಿ ಬಳಿಕ ಅಬ್ರಾಹಂ ಸ್ಫೋಟಕ ಹೇಳಿಕೆ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Aug 06, 2024 | 5:21 PM

ಬೆಂಗಳೂರು, (ಆಗಸ್ಟ್​ 06): ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ಅಬ್ರಾಹಂ, ಇಂದು (ಆಗಸ್ಟ್​ 06) ಮತ್ತೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್​ ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿ ಪ್ರವಾಸದಿಂದ ಬೆಂಗಳೂರಿಗೆ ವಾಪಸ್ ಆದ ಬೆನ್ನಲ್ಲೇ ಅಬ್ರಾಹಂ ಭೇಟಿ ಮಾಡಿ ಪ್ರಕರಣ ಸಂಬಂಧ ಮತ್ತಷ್ಟು ವಿವರಣೆ ನೀಡಿದ್ದಾರೆ. ಇನ್ನು ರಾಜ್ಯಪಾಲರನ್ನು ಭೇಟಿ ಮಾಡಿ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಾಹಂ, ನನ್ನ ಬಳಿ ಮತ್ತಷ್ಟು ಕ್ಲಾರಿಪಿಕೇಷನ್ ಕೇಳಿದ್ದಾರೆ. ಕಳೆದ ಬಾರಿ ಕೇಳಿದ ದಾಖಲೆಗಳ ಬಗ್ಗೆ ಮತ್ತೆ ಮಾತಾಡಿದ್ದು, ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟೇ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಹಾಕಿದ ಪ್ರಾಸಿಕ್ಯೂಷನ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶೋಕಾಸ್​ ನೋಟಿಸ್ ಕೊಟ್ಟಿದ್ದರು. ಆದ್ರೆ, 3 ಗಂಟೆ ಕ್ಯಾಬಿನೆಟ್ ಸಭೆ ನಡೆಸಿ ಗರ್ವನರ್ ನೋಟಿಸ್ ಕೊಟ್ಟಿದ್ದು ತಪ್ಪು ಅಂತಾರೆ. ಟಿ. ಜೆ ಅಬ್ರಹಾಂ ಸರಿಯಿಲ್ಲ ಅಂತಾರೆ. ಸಿದ್ದರಾಮಯ್ಯ ಮೇಲೆ ಆರೋಪ ಸರಿಯಿದೆ, ಆದರೆ ಟಿ.ಜೆ ಅಬ್ರಹಂ ಸರಿಯಲ್ಲ ಅಂತಾರೆ. ನನ್ನ ಬಳಿ ಮತ್ತಷ್ಟು ಕ್ಲಾರಿಪಿಕೇಷನ್ ಕೇಳಿದ್ರು. ಕಳೆದ ಬಾರಿ ಕೇಳಿದ ದಾಖಲೆಗಳ ಬಗ್ಗೆ ಮತ್ತೆ ಚರ್ಚೆ ಮಾಡಿದ್ದು, ಪ್ರಾಸಿಕ್ಯೂಷನ್​ಗೆ ಕೊಟ್ಟೇ ಕೊಡುತ್ತಾರೆ ಎನ್ನುವ ವಿಶ್ವಾಸನ ನನಗೆ ಇದೆ ಎಂದು ಸ್ಫೋಟಕ ಹೇಳಿಕೆ ನೀಡಿದರು.

ಇದನ್ನೂ ಓದಿ: ರಾಜ್ಯಪಾಲರು ದೆಹಲಿಯಿಂದ ಬರುತ್ತಿದ್ದಂತೆಯೇ ರಾಜಭವಕ್ಕೆ ದೌಡಾಯಿಸಿದ ಟಿಜೆ ಅಬ್ರಾಹಂ

ಸಾಕಷ್ಟು ವಿವರಣೆ ಕೊಟ್ಟಿದ್ದೇನೆ. ಆದಷ್ಟು ಶೀಘ್ರದಲ್ಲಿ ರಾಜ್ಯಪಾಲರು ಉತ್ತರ ಕೊಡುತ್ತಾರೆ. ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ಎರಡನೇ ಶೋಕಾಸ್ ನೊಟೀಸ್ ಕೊಟ್ಟಿಲ್ಲ. ಇವತ್ತು ಹೆಚ್ಚುವರಿ ದಾಖಲೆ ಕೊಡಲಿಲ್ಲ. ನನ್ನ ಮೇಲೆ ಸರ್ಕಾರ ಮಾಡಿರುವ ಆಪಾದನೆಗೆ ರಾಜ್ಯಪಾಲರ ಬಳಿ ಸ್ಪಷ್ಟೀಕರಣ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

ರಾಜ್ಯಪಾಲರು ಸ್ಪಷ್ಟನೆ ಕೇಳುತ್ತಾರೆ ಅಂದರೆ ಅವರಿಗೆ ಇದನ್ನು ಮುಂದುವರೆಸಲು ಆಸಕ್ತಿ ಇದೆ ಎಂದರ್ಥ. ಕಳೆದ ಗುರುವಾರ ರಾಜ್ಯಪಾಲರ ಸಮಯ ಕೇಳಿದ್ದೆ. ಇವತ್ತು ಬರಲು ಹೇಳಿದ್ದರು. ಹೀಗಾಗಿ ಬಂದು ಸ್ಪಷ್ಟೀಕರಣ ಕೊಟ್ಟಿದ್ದೇನೆ. ನನ್ನ ವಿರುದ್ಧ ಯಾವ ದೂರೂ ಇಲ್ಲ. ನನ್ನ ವಿರುದ್ಧ ಕೇಸ್ ಹುಡುಕಿ, ಹುಡುಕಲು ಆಗದಿದ್ರೆ ಹೇಗೆ ಹುಡುಕಬೇಕು ಎಂದು ನನ್ನ ಕೇಳಿ ಎಂದು ಸರ್ಕಾರಕ್ಕೆ ನಾನು ನೇರ ಸವಾಲ್ ಹಾಕುತ್ತೇನೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್