ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಸ್ಫೋಟಕ‌ ಸತ್ಯ ಬಾಯ್ಬಿಟ್ಟ ಬಂಧಿತ ಆರೋಪಿ ನಾಗೇಶ್, ಅಷ್ಟಕ್ಕೂ ಆತ ಹೇಳಿದ್ದೇನು?

ಅವನಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆ ಕೊಡಬೇಕು ಎಂದು ಆಸಿಡ್ ದಾಳಿಗೊಳಗಾದ ಯುವತಿ ಕನವರಿಸಿದ್ದಾಳೆ. ನಾನು ನೋವಿನಲ್ಲಿ ನರಳುವಂತೆ ಅವನು ನರಳಬೇಕು ಎಂದು ಆಸಿಡ್ ದಾಳಿಕೋರನ ವಿರುದ್ಧ ಯುವತಿ ಆಕ್ರೋಶ ಭರಿತ ಮಾತುಗಳನ್ನಾಡಿದ್ದಾಳೆ.

ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಸ್ಫೋಟಕ‌ ಸತ್ಯ ಬಾಯ್ಬಿಟ್ಟ ಬಂಧಿತ ಆರೋಪಿ ನಾಗೇಶ್, ಅಷ್ಟಕ್ಕೂ ಆತ ಹೇಳಿದ್ದೇನು?
ಬಂಧಿತ ಆರೋಪಿ ನಾಗೇಶ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:May 14, 2022 | 1:13 PM

ಬೆಂಗಳೂರು: ನಗರದಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ (Acide Attack Case) ಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ನಾಗೇಶ್​ ಸ್ಫೋಟಕ‌ ಸತ್ಯ ಬಾಯ್ಬಿಟ್ಟಿದ್ದಾನೆ. ಆ್ಯಸಿಡ್ ಯಾಕೆ ಹಾಕಿದ್ದು ಎಂದು ಪೊಲೀಸರು ಪ್ರಶ್ನಿಸಿದ್ದು, ಆ್ಯಸಿಡ್ ಹಾಕೋಕೆ ಯುವತಿಯೇ ಕಾರಣ ಎಂದು ನಾಗೇಶ್ ಹೇಳಿದ್ದಾನೆ. ಯುವತಿ ಮೇಲೆ ಆ್ಯಸಿಡ್ ಹಾಕಬಾರದೆಂದು ಯೋಚಿಸಿದ್ದೆ. ಘಟನೆ ಹಿಂದಿನ ದಿನ ಆ್ಯಸಿಡ್ ಹಾಕ್ತೀನಿ ಅಂತಾ ಹೆದರಿಸಿದ್ದೆ. ಆದರೆ ಯುವತಿ ಈ ವಿಷಯವನ್ನು ತನ್ನ ತಂದೆ ಬಳಿ ಹೇಳಿದ್ದಳು. ಬಳಿಕ ಯುವತಿ ತಂದೆ ನನ್ನ ಅಣ್ಣನಿಗೆ ಹೀಗೆ ಅಂತಾ ಹೇಳಿದ್ದರು. ಆ್ಯಸಿಡ್ ಹಾಕ್ತೀಯಾ ಅಂತಾ ನನ್ನ ಅಣ್ಣ ನನಗೆ ಸಾಕಷ್ಟು ಬೈದಿದ್ದ. ಇದರಿಂದ ಆ್ಯಸಿಡ್ ಹಾಕಿಯೇ ಬಿಡೋಣ ಎಂದು ನಿರ್ಧರಿಸಿದ್ದೆ. ಆ್ಯಸಿಡ್​ ಎರಚಿದ್ದ ಪಾಪಿ ನಾಗನನ್ನು ಪೊಲೀಸರು ಬಂಧಿಸಿದ್ದಾರೆ.

ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿ ನಾಗೇಶ್ ನಿರ್ಧಾರ ಮಾಡಿಬಿಟ್ಟಿದ್ನಂತೆ. ಆದ್ರೆ ಮನಸ್ಸು ಬದಲಿಸಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದಿದ್ದ. ಆ್ಯಸಿಡ್ ಎರಚಿದ ನಾಗ ಕೋರ್ಟ್ ಬಳಿ ಬಂದಿದ್ದ. ಅಲ್ಲಿ ಬೈಕ್ ಬಿಟ್ಟು ಆಟೊ ಹತ್ತಿದ್ದಾಗಿ‌ ನಾಗೇಶ್ ಹೇಳಿದ್ದಾನೆ. ಹೊಸಕೋಟೆವರೆಗೂ ಆಟೋದಲ್ಲಿ ತೆರಳಿದ್ದ. ಅಲ್ಲಿ ಒಂದು ಕೆರೆ ಕಂಡು ಹಾರಿ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದುಕೊಂಡಿದ್ದನಂತೆ. ಆದರೆ ಬೇಡ ತಿರುಪತಿಗೆ ಹೋಗೋಣ ಅಂತಾ ಮಾಲೂರು ಬಸ್ ಹತ್ತಿದ್ದ. ತಿರುಪತಿ ಬೇಡ ಎಂದನಿಸಿ ಮಾರ್ಗ ಮಧ್ಯೆ ಇಳಿದಿದ್ದ. ನಂತರ ಕೃಷ್ಣಗಿರಿ ಬಸ್ ಹತ್ತಿ ತಿರುವಣ್ಣಾಮಲೈಗೆ ಹೋಗಿದ್ದ. ತಿರುವಣ್ಣಾಮಲೈನಿಂದ ರಮಣಾಶ್ರಮ ಕಡೆಗೆ ಹೋಗಿದ್ದಾನೆ.

ಆಸಿಡ್ ದಾಳಿಕೋರನ ಬಗ್ಗೆ ನೊಂದ ಯುವತಿ ಆಕ್ರೋಶ ಹೊರಹಾಕಿದ್ದು, ನನ್ನ ಕಣ್ಣ ಮುಂದೆಯೇ ಅವನಿಗೆ ಶಿಕ್ಷೆ ಆಗಬೇಕು. ಅವನು ಅರೆಸ್ಟ್ ಆಗಿದ್ದಾನಲ್ವಾ! ಅವನಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆ ಕೊಡಬೇಕು ಎಂದು ಆಸಿಡ್ ದಾಳಿಗೊಳಗಾದ ಯುವತಿ ಕನವರಿಸಿದ್ದಾಳೆ. ನಾನು ನೋವಿನಲ್ಲಿ ನರಳುವಂತೆ ಅವನು ನರಳಬೇಕು ಎಂದು ಆಸಿಡ್ ದಾಳಿಕೋರನ ವಿರುದ್ಧ ಯುವತಿ ಆಕ್ರೋಶ ಭರಿತ ಮಾತುಗಳನ್ನಾಡಿದ್ದಾಳೆ. ಯುವತಿ ಆರೋಗ್ಯ ವಿಚಾರಿಸಲು ತೆರಳಿದ್ದ ಕಮಲ್ ಪಂತ್​ ಈ ವೇಳೆ ಪೊಲೀಸ್ ಕಮೀಷನರ್​ಗೂ ಮನವಿ ಮಾಡಿದ್ದಾಳೆ. ಈ ವೇಳೆ ಸರ್ ಅವನಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆ ಆಗಬೇಕು ಎಂದಿದ್ದ ಯುವತಿ, ಈ ವೇಳೆ ಆಯ್ತಾಮ್ಮ ನೀನು ಬೇಗ ರಿಕವರಿ ಆಗು ಎಲ್ಲಾ ಅಗುತ್ತೆ ಎಂದು ಕಮೀಷನರ್ ಸಮಾಧಾನ ಪಡಿಸಿದ್ದಾರೆ. ಕಮೀಷನರ್ ಅಲ್ಲದೆ, ಆರೋಗ್ಯ ಸಚಿವ ಸುಧಾಕರ್ ಹಾಗೂ ಮ್ಯಾಜಿಸ್ಟ್ರೇಟ್ ಮುಂದೆಯೂ ಇದೇ ರೀತಿ ಆಗ್ರಹಿಸಿದ್ದ ಯುವತಿ, ತನ್ನ ನೋವಿನಲ್ಲೂ ಆಸಿಡ್ ಹಾಕಿದ ಕಿರಾತಕನಿಗೆ ಶಿಕ್ಷೆ ಆಗಬೇಕು ಅಂತಾ ಯುವತಿ ಆಕ್ರೋಶಿಸುತ್ತಿದ್ದಾಳೆ. ಅಲ್ಲದೇ ಯುವತಿಗೆ ನಾಗೇಶ್ ಅರೆಸ್ಟ್ ಆಗಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ. ಪೋಷಕರ ಜೊತೆ ಆಗಾಗ ತನ್ನ ನೋವು ತೋಡಿಕೊಳ್ತಿದ್ದ ಯುವತಿ, ಆಸ್ಪತ್ರೆಯಲ್ಲಿ ಪೋಷಕರ ಜೊತೆ ಯುವತಿ ಮಾತನಾಡಿದ್ದಾಳೆ.

ಯುವತಿಯ ತಂದೆ ರಾಜಣ್ಣ ಮಾತನಾಡಿದ್ದು, ಒಂದು ಕಾಲಿಗೆ ಗುಂಡು ಹೊಡೆದಿದ್ದು ನಮಗೆ ಸಮಾಧಾನ ಇಲ್ಲ. ಎರಡು ಕಾಲಿಗೆ ಕಾಲಿಗೆ ಗುಂಡು ಹಾರಿಸಿದ್ರೆ ಸಮಾಧಾನ ಆಗ್ತಿತ್ತು. ರೋಡಲ್ಲಿ ಬಿಡಬೇಕು ಆವಾಗ ಜನ ಏನ್ ಮಾಡ್ತಾರೆ ಅಂತ ಗೊತ್ತಾಗುತ್ತದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿದ್ದಾರೆ ಅಂದ್ರೆ ಅವನು ಎಷ್ಟು ಕ್ರಿಮಿನಲ್ ಇದ್ದಾನೆ ಯೋಚನೆ ಮಾಡಿ. ಅವನಿಗೆ ಜೈಲ್​ಗೆ ಹಾಕಿ ಊಟ ಹಾಕಿದ್ರೆ ಯಾವುದೇ ಪ್ರಯೋಜನ ಇಲ್ಲ. ಇಲ್ಲೇ ಶೂಟ್ ಮಾಡಬೇಕಿತ್ತು ಅವನನ್ನು. ನಮ್ಮ ಮಗಳು ಕೇಳ್ತಿದ್ದಾಳೆ ಡ್ಯಾಡಿ ಏನು ಶಿಕ್ಷೆ ಕೊಡಿಸ್ತಿರಾ ಅವನಿಗೆ ಅಂತ. ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ಬಿಟ್ಟಿದ್ದೀನಿ ಏನ್ ಶಿಕ್ಷೆ ಕೊಡಿಸ್ತಾರೆ ಅಂತ ನೋಡ್ತಿನಿ. ಮುಂದೆ ಯಾವುದೇ ಹೆಣ್ಣು ಮಗಳಿಗೆ ಹೀಗೆ ಆಗಬಾರದು ಅಷ್ಟೇ ಎಂದು ಹೇಳಿದ್ದಾರೆ.

ಕಾಮಾಕ್ಷಿ ಪಾಳ್ಯ ಪೋಲಿಸರಿಗೆ ಧನ್ಯವಾದಗಳು ಹೇಳ್ತಿವಿ. ಕಾಲಿಗೆ ಗುಂಡು ಹೊಡಿದಿದ್ದು ನಮಗೆ ಸಮಾಧಾನ ಇಲ್ಲ. ಡೈರೆಕ್ಟ್ ಆಗಿ ಎದೆಗೆ ಗುಂಡು ಹೊಡೆಯಬೇಕಿತ್ತು. ಅವಳು ಮೈಮೇಲೆ ಆ್ಯಸಿಡ್ ಹಾರಿಸಿಕೊಂಡು ತುಂಬಾ ನೋವು ಅನುಭವಿಸ್ತಿದ್ದಾಳೆ. ಅವನಿಗೆ ನೀಡಿರೋ ಶಿಕ್ಷೆ ತುಂಬಾ ಸಣ್ಣದು. ಅವನು ಸತ್ತೋಗಿದ್ರೆ ನಮಗೆ ಬಹಳ ಖುಷಿ ಆಗ್ತಿತ್ತು. ಕೋರ್ಟ್ ಗೆ ಕರೆದುಕೊಂಡು ಹೋಗಿ ಶಿಕ್ಷೆ ನೀಡುವ ಬದಲು, ಅವನನ್ನು ಎನ್ ಕೌಂಟರ್ ಮಾಡಿದ್ರೆ ಕರ್ನಾಟಕದ ಕಾನೂನಿನ ಮೇಲೆ ಭಯ ಆಗ್ತಿತ್ತು. ನಾವು ಒಂದು ಹಿಂದೆಯೇ ಅವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಅಂತ ಹೇಳಿದ್ದಿವಿ. ಅವನು ತುಂಬಾ ನೋವು ಅನುಭವಿಸಬೇಕು. ಜಡ್ಜ್ ಏನು ಶಿಕ್ಷೆ ಕೊಡ್ತಾರೆ ಅಂತ ನಾವು ಕಾದು ನೋಡ್ತಿವಿ. ಆಂಧ್ರಪ್ರದೇಶದಲ್ಲಿ ಡಾಕ್ಟರ್ ಮೇಲೆ ಅತ್ಯಾಚಾರ ಮಾಡಿದವರನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ರು ಇಡೀ ದೇಶವೇ ಹೆಮ್ಮೆ ಪಟ್ಟುಕೊಳ್ತು. ಹಾಗೆ ಇವನನ್ನು ಶೂಟ್ ಮಾಡಿ ಸಾಯಿಸಬೇಕಿತ್ತು ಎಂದು ಯುವತಿಯ ದೊಡ್ಡಪ ಶಂಕರಣ್ಣ ಹೇಳಿದ್ದಾರೆ.

ಆಸಿಡ್ ಸಂತ್ರಸ್ತೆ ತಾಯಿ ಲಕ್ಷ್ಮಮ್ಮ ಹೇಳಿಕೆ ನೀಡಿದ್ದು, ಅವನಿಗೆ ಗುಂಡು ಹೊಡೆದಿದ್ದು ನಮಗೆ ಸಮಾಧಾನ ತಂದಿಲ್ಲ. ಮಗಳಿಗೆ ಮೂರು ಸರ್ಜರಿ ಆಗಿದೆ. ಇವತ್ತು ನಾಲ್ಕನೇ ಸರ್ಜರಿಗೆ ಕರೆದುಕೊಂಡು ಹೋಗ್ತಿದ್ದಾರೆ. ನನ್ನ ಮಗಳು ನೋವು ತಿಂದಂತೆ ಅವನು ನೋವು ತಿನ್ನಬೇಕು. ಮಗಳಿಗೆ ಅವತ್ತೇ ಸಿಕ್ಕಿದ್ದಾನೆ ಅಂತ ಹೇಳಿದ್ವಿ. ಈಗ ಸಿಕ್ಕಿದ್ದಾನೆ ಅಂತ ಹೇಳಿದ್ರೆ ಅವಳಿಗೆ ನೋವಾಗುತ್ತೆ. ಅದಕ್ಕೆ ನಾವು ಏನೂ ಹೇಳಿಲ್ಲ. ಈ ರೀತಿ ಪ್ರಕರಣಗಳು ನನ್ನ ಮಗಳಿಗೆ ಈ ರೀತಿ ಕೊನೆ ಆಗಬೇಕು. ಪೈಪ್ ಅಳವಡಿಸಿ ಆಹಾರ ನೀಡ್ತಿದ್ದಾರೆ. ಇವತ್ತು ಸರ್ಜರಿ ಮಾಡಿದ ಬಳಿಕ ನೋಡಬೇಕು. ಅವನು ದೇವರ ಜಪ ಮಾಡೋಕೆ ಹೋಗಿದ್ದ ಅನ್ಸತ್ತೆ. ದೇವರು ಮೋಸ ಮಾಡಲ್ಲ. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ಅವನು ನನ್ನ ಮಗಳು ಹೇಗೆ ನೋವು ಅಂತ ನರಳುತ್ತಿದ್ದಾಳೋ ಅವನೂ ನರಳಬೇಕು ಅಷ್ಟೇ ನಾವು ಕೇಳಿಕೊಳ್ಳುವುದು ಎಂದಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

Published On - 9:50 am, Sat, 14 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್