ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಖಾಲಿ ಆಗಿರುವ ಸಚಿವ ಸ್ಥಾನ ಯಾರ ಪಾಲು? ಕಾಂಗ್ರೆಸ್​​ ಲೆಕ್ಕಾಚಾರಗಳೇನು?

ಬಿ. ನಾಗೇಂದ್ರ ರಾಜೀನಾಮೆಯಿಂದ ಖಾಲಿಯಾದ ಸಚಿವ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಎಸ್ಟಿ ಕೋಟಾ, ಮಹಿಳಾ ಪ್ರಾತಿನಿಧ್ಯ ಹಾಗೂ ಸಿದ್ದರಾಮಯ್ಯ ಬೆಂಬಲಿಗರನ್ನು ಸರಿದೂಗಿಸಲು ಹೈಕಮಾಂಡ್ ವಿಭಿನ್ನ ಲೆಕ್ಕಾಚಾರಗಳನ್ನು ನಡೆಸುತ್ತಿದೆ. ಹೀಗಿದ್ದರೂ ಫೈನಲ್​​ ಆಗಿ ಮಂತ್ರಿಗಿರಿ ಯಾರ ಪಾಲಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ಖಾಲಿ ಆಗಿರುವ ಸಚಿವ ಸ್ಥಾನ ಯಾರ ಪಾಲು? ಕಾಂಗ್ರೆಸ್​​ ಲೆಕ್ಕಾಚಾರಗಳೇನು?
ಬಿ. ನಾಗೇಂದ್ರ
Image Credit source: PTI
Edited By:

Updated on: Aug 30, 2026 | 6:58 AM

ಬೆಂಗಳೂರು, ಆಗಸ್ಟ್​ 30: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ 25 ದಿನಗಳಲ್ಲೇ ವಾಲ್ಮೀಕಿ ನಿಗಮದ ಹಗರಣ ಸಂಬಂಧ ಮಂತ್ರಿಗಿರಿಗೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಅವರು ಹುದ್ದೆ ತೊರೆದ ಬೆನ್ನಲ್ಲೇ ಆ ಸ್ಥಾನಕ್ಕಾಗಿ ಕಾಂಗ್ರೆಸ್​​ನಲ್ಲಿ ಪೈಪೋಟಿ ಶುರುವಾಗಿದೆ. ಈ ಅವಕಾಶವನ್ನ ಬಳಸಿಕೊಂಡು ಕಾಂಗ್ರೆಸಿಗರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮುನಿಸು ತಣಿಸುತ್ತಾರಾ? ಅಥವಾ ಡಿಕೆಶಿ ಸಚಿವ ಸಂಪುಟದಲ್ಲಿ ಓರ್ವ ಮಹಿಳಾ ಸಚಿವರೂ ಇಲ್ಲ ಎಂಬ ದೂರಿನ ಕಾರಣ ಆ ಬಗ್ಗೆ ಗಮನ ಹರಿಸುತ್ತಾರಾ? ಹೀಗೆ ಹಲವು ಪ್ರಶ್ನೆ ಮತ್ತು ಲೆಕ್ಕಾಚಾರಗಳು ಕಾಂಗ್ರೆಸ್​​ ಪಾಳಯದಲ್ಲಿ ಶುರುವಾಗಿವೆ.

ಹೈಕಮಾಂಡ್​​ ಮುಂದಿದೆ ಹಲವು ಲೆಕ್ಕಾಚಾರ

ನಾಗೇಂದ್ರ ಎಸ್ಟಿ ಸಮುದಾಯಕ್ಕೆ ಸೇರಿದವರಾಗಿರುವ ಕಾರಣ ತೆರವಾಗಿರುವ ಸ್ಥಾನವನ್ನು ಅದೇ ಸಮುದಾಯಕ್ಕೆ ನೀಡಬೇಕು ಎಂಬ ಒತ್ತಾಯ ಸಮುದಾಯದ ಹಿರಿಯ ನಾಯಕರಿಂದ ಕೇಳಿಬರುತ್ತಿದೆ. ಇನ್ನೊಂದೆಡೆ ಮಹಿಳಾ ಕೋಟಾದಲ್ಲೂ ಒಂದು ಸ್ಥಾನ ಖಾಲಿಯಿದೆ. ಹೀಗಾಗಿ ಎಸ್ಟಿ ಸಮುದಾಯದ ಜೊತೆಗೆ ಮಹಿಳಾ ಪ್ರಾತಿನಿಧ್ಯವನ್ನೂ ಸರಿದೂಗಿಸುವ ರೀತಿಯಲ್ಲಿ ನೇಮಕ ಮಾಡುವ ಚರ್ಚೆಯೂ ಕಾಂಗ್ರೆಸ್‌ನಲ್ಲಿ ಶುರುವಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್​​ಗೆ ಸಚಿವ ಸ್ಥಾನ ನೀಡುವಂತೆ ಸಿದ್ದರಾಮಯ್ಯ ಬಿಗಿಪಟ್ಟು ಮುಂದುವರಿಸಿದ್ದಾರೆ. ಹೀಗಾಗಿ ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬಸವರಾಜ ಶಿವಣ್ಣನವರ್‌ರನ್ನು ಸೇರ್ಪಡೆ ಮಾಡಿಕೊಂಡ್ರೆ ಸಿದ್ದರಾಮಯ್ಯರ ಅಸಮಾಧಾನವನ್ನ ಸ್ವಲ್ಪ ಮಟ್ಟಿಗೆ ತಣಿಸಬಹುದು ಎಂಬ ಮಾತುಗಳೂ ಕೇಳಿಬಂದಿವೆ. ಆದ್ರೆ ಮಹಿಳಾ ಕೋಟಾ, ಎಸ್ಟಿ ಕೋಟಾ ಮತ್ತು ಬಳ್ಳಾರಿ ಪ್ರಾತಿನಿಧ್ಯ ಈ ಮೂರನ್ನೂ ಒಂದೇ ಬಾರಿ ಸರಿದೂಗಿಸೋಕೆ ಸಾಧ್ಯವಾಗುತ್ತಾ ಅನ್ನೋದು ಮತ್ತೊಂದು ಪ್ರಶ್ನೆ.

ಇದನ್ನೂ ಓದಿ: ಬಾಲ್ಯದ ಗೆಳೆಯನಿಗೆ ಡಿಕೆಶಿ ‘ಉಡುಗೊರೆ’: ರಾಜಕೀಯಕ್ಕೆ ರವಿಚಂದ್ರನ್?

ಹೀಗಾಗಿಯೇ ಕಾಂಗ್ರೆಸ್ ವಲಯದಲ್ಲಿ ಮಗದೊಂದು ಹೆಸರು ಚರ್ಚೆಗೆ ಬಂದಿದ್ದು, ಮಹಿಳಾ ಕೋಟಾದಡಿ ಅನ್ನಪೂರ್ಣಾ ತುಕಾರಾಂಗೆ ಅವಕಾಶ ನೀಡಿದ್ರೆ ಹೇಗೆಂಬ ಮಾತುಗಳು ಕೇಳಿಬಂದಿವೆಯಂತೆ. ಅನ್ನಪೂರ್ಣಾ ತುಕಾರಾಂಗೆ ಅವಕಾಶ ನೀಡಿದ್ರೆ ಮಹಿಳಾ ಪ್ರಾತಿನಿಧ್ಯವೂ ಭರ್ತಿಯಾಗುತ್ತೆ, ಎಸ್ಟಿ ಸಮುದಾಯಕ್ಕೂ ಅವಕಾಶ ಸಿಕ್ಕಂತಾಗುತ್ತೆ. ಬಳ್ಳಾರಿ ಪ್ರಾತಿನಿಧ್ಯದ ಪ್ರಶ್ನೆಗೂ ಉತ್ತರ ಸಿಗುತ್ತೆ. ಹೀಗಾಗಿ ನಾಗೇಂದ್ರ ರಾಜೀನಾಮೆಯ ನಂತರ ಕಾಂಗ್ರೆಸ್ ಮುಂದೆ ಹಲವು ಆಯ್ಕೆಗಳು ತೆರೆದುಕೊಂಡಿವೆ. ಮತ್ತೊಂದೆಡೆ ಮುನಿಸು ಮುಂದುವರಿಸಿರುವ ಎಂ.ಕೃಷ್ಣಪ್ಪ ಅವರ ಹೆಸರೂ ಮುಂಚೂಣಿಯಲ್ಲಿದ್ದು, ಫೈನಲ್​​ ಆಗಿ ಮಂತ್ರಿಗಿರಿ ಯಾರ ಪಾಲಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:56 am, Sun, 30 August 26

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us