ಬೆಂಗಳೂರಿನಲ್ಲಿ ಹೆಚ್ಚಾದ ಏರ್ ಪೊಲ್ಯೂಷನ್ ಡಿಸಾಡರ್; ವಾಯು ಮಾಲಿನ್ಯದಿಂದ ಜೀವಕ್ಕೆ ಆಪತ್ತು

ಬೆಂಗಳೂರಿನ ಏರ್ ಪೊಲ್ಯೂಷನ್ ಸದ್ದಿಲ್ಲದೆ ಜನರ ಜೀವಕ್ಕೆ ಕುತ್ತು ತರುತ್ತಿದೆ. ತಂಬಾಕು, ಮದ್ಯ ಸೇವನೆ ಮಾತ್ರವಲ್ಲ ಬೆಂಗಳೂರಿನ ಕಲುಷಿತ ಹವಾಮಾನ ಕೂಡ ಕ್ಯಾನ್ಸರ್, ಲಂಗ್ಸ್ ಡ್ಯಾಮೇಜ್ ನಂತಹ ರೋಗಗಳಿಗೆ ಕಾರಣವಾಗುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಏರ್ ಪೊಲ್ಯೂಷನ್​ನಿಂದಾಗಿ ಹೆಚ್ಚು ಜನರು ಆರೋಗ್ಯ ಸಮಸ್ಯೆಗಳನ್ನೆದುರಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚಾದ ಏರ್ ಪೊಲ್ಯೂಷನ್ ಡಿಸಾಡರ್; ವಾಯು ಮಾಲಿನ್ಯದಿಂದ ಜೀವಕ್ಕೆ ಆಪತ್ತು
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ಆಯೇಷಾ ಬಾನು

Updated on: Jan 08, 2024 | 12:18 PM

ಬೆಂಗಳೂರು, ಜ.08: ಮಹಿಳೆಯರಿಗೆ ಉಚಿತ ಬಸ್ ಸೇವೆ, ಮೆಟ್ರೋ ಫೀಡರ್ ಬಸ್​ಗಳು ಸೇರಿದಂತೆ ನಗರ ರಸ್ತೆ ಸಾರಿಗೆ ಸಂಚಾರಕ್ಕೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಆದರೂ ನಗರದಲ್ಲಿ ವಾಯು ಮಾಲಿನ್ಯ, ಟ್ರಾಫಿಕ್ ಕಡಿಮೆಯಾಗಿಲ್ಲ. ಇದೀಗ ವಾಯು ಮಾಲಿನ್ಯ ಜನರ ಜೀವಕ್ಕೆ ಕುತ್ತು ತಂದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಏರ್ ಪೊಲ್ಯೂಷನ್ ಡಿಸಾಡರ್ (Air Polution Disarder) ಸದ್ದಿಲ್ಲದೆ ಏರಿಕೆಯಾಗುತ್ತಿದೆ. ಏರ್ ಪೊಲ್ಯೂಷನ್ ಡಿಸಾಡರ್​​ಗೆ ಸಿಟಿ ಮಂದಿ (Bengaluru) ಬಲಿಯಾಗುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಏರ್ ಪೊಲ್ಯೂಷನ್ ಮಾರಕವಾಗುತ್ತಿದೆ. ಈ ಬಗ್ಗೆ ಅಧ್ಯಯನ ನಡೆಸಲು ರಾಜೀವ ಗಾಂಧಿ ಎದೆ ರೋಗಿಗಳ ಸಂಸ್ಥೆ ಮುಂದಾಗಿದೆ.

ಬೆಂಗಳೂರಿನ ಏರ್ ಪೊಲ್ಯೂಷನ್ ಸದ್ದಿಲ್ಲದೆ ಜನರ ಜೀವಕ್ಕೆ ಕುತ್ತು ತರುತ್ತಿದೆ. ತಂಬಾಕು, ಮದ್ಯ ಸೇವನೆ ಮಾತ್ರವಲ್ಲ ಬೆಂಗಳೂರಿನ ಕಲುಷಿತ ಹವಾಮಾನ ಕೂಡ ಕ್ಯಾನ್ಸರ್, ಲಂಗ್ಸ್ ಡ್ಯಾಮೇಜ್ ನಂತಹ ರೋಗಗಳಿಗೆ ಕಾರಣವಾಗುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಏರ್ ಪೊಲ್ಯೂಷನ್​ನಿಂದಾಗಿ ಹೆಚ್ಚು ಜನರು ಆರೋಗ್ಯ ಸಮಸ್ಯೆಗಳನ್ನೆದುರಿಸುತ್ತಿದ್ದಾರೆ. ಟ್ರಾಫಿಕ್​ನಲ್ಲಿ ನಿಂತು ನಿರಂತರ ಕೆಲಸ ನಿರ್ವಹಿಸುವ ಟ್ರಾಫಿಕ್ ಪೊಲೀಸರು, ಬಿಎಂಟಿಸಿ ಚಾಲಕ, ನಿರ್ವಾಹಕರು ಏರ್ ಪೊಲ್ಯೂಷನ್ ಡಿಸಾಡರ್​ಗೆ ತುತ್ತಾಗುತ್ತಿದ್ದಾರೆ.

ಇದನ್ನೂ ಓದಿ: ಮದುವೆ, ಪ್ರವಾಸಕ್ಕೂ ಬಿಎಂಟಿಸಿ ಬಸ್: ಯಾವ ಬಸ್​​​ಗೆ ಎಷ್ಟು ಬಾಡಿಗೆ? ಇಲ್ಲಿದೆ ವಿವರ

ಏರ್ ಪೊಲ್ಯೂಷನ್ ಡಿಸಾಡರ್, ಲಂಗ್ಸ್ ಕ್ಯಾನ್ಸರ್, ಬ್ರಾಕಂಟಿಸ್, ಹೃದಯಘಾತ ಹೆಚ್ಚಳಕ್ಕೂ ಕಾರಣವಾಗಿದೆ. ಈ ಹಿನ್ನಲೆ ಏರ್ ಪೊಲ್ಯೂಷನ್ ಡಿಸಾಡರ್ ಅಧ್ಯಯನಕ್ಕೆ ರಾಜೀವ್ ಗಾಂಧಿ ಎದೆ ರೋಗಿಗಳ ಸಂಸ್ಥೆ ಮುಂದಾಗಿದೆ. ಪ್ರಾಥಮಿಕ ಹಂತದಲ್ಲಿ ಟ್ರಾಫಿಕ್ ಪೊಲೀಸರು ಹಾಗು ಬಿಎಂಟಿಸಿ ಡ್ರೈವರ್, ಕಂಡಕ್ಟರ್​ಗಳ ಮೇಲೆ ಅಧ್ಯಯನ ನಡೆಸಲಾಗುತ್ತೆ. ಬೆಂಗಳೂರಿನ ಕೆಲವು ಪೊಲೀಸ್ ಠಾಣೆಯ ಟ್ರಾಫಿಕ್ ಪೊಲೀಸರು ಹಾಗೂ ಬಿಎಂಟಿಸಿ ಚಾಲಕ ನಿರ್ವಹಕರನ್ನ ಅಧ್ಯಯನಕ್ಕೆ ಒಳಪಡಿಸಿ ಸರ್ಕಾರಕ್ಕೆ ವರದಿ ನೀಡಲು ರಾಜೀವ್ ಗಾಂಧಿ ಎದೆ ರೋಗಿಗಳ ಸಂಸ್ಥೆ ಮುಂದಾಗಿದೆ. ಸರ್ಕಾರಕ್ಕೆ ಏರ್ ಪೊಲ್ಯೂಷನ್ ಸಮಸ್ಯೆಗಳು ಹಾಗೂ ಕ್ರಮಗಳ ಬಗ್ಗೆ ವರದಿ ನೀಡಲಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ