ಶಾಲಾ ಬ್ಯಾಗ್ ಹೊರೆ ಇಳಿಸಲು ಶಿಕ್ಷಣ ಇಲಾಖೆ ಹೊಸ ಪ್ಲಾನ್; ಭಾಗ-1, ಭಾಗ-2 ಪಠ್ಯಕ್ಕೆ ಚಿಂತನೆ
ಕಳೆದ ಕೆಲವು ವರ್ಷಗಳಿಂದ ಮಕ್ಕಳಿಗೆ ಶಾಲಾ ಬ್ಯಾಗ್ ನಿತ್ಯದ ಪರದಾಟವಾಗಿದೆ. ಕೋವಿಡ್ ಟೈಮ್ನಲ್ಲಿ ಆನ್ ಲೈನ್ ಕ್ಲಾಸ್ ನಿಂದಾಗಿ ಶಾಲಾ ಬ್ಯಾಗ್ ಹೊರೆಯಿಂದ ಮಕ್ಕಳಿಗೆ ರಿಲೀಫ್ ಸಿಕ್ಕಿತ್ತು. ಆದ್ರೀಗ ಮತ್ತದೇ ಬ್ಯಾಗ್ ಮೂಟೆಯಿಂದ ಚಿಣ್ಣರಿಗೆ ತುಂಬಾ ಅನಾರೋಗ್ಯಕ್ಕೆ ತುತ್ತಾಗ್ತಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆಗೆ ಸಾಕಷ್ಟು ಡಿಮ್ಯಾಂಡ್ ಒತ್ತಾಯ ಕೇಳಿ ಬರ್ತಿದೆ. ಶಿಕ್ಷಣ ಇಲಾಖೆ ಮಕ್ಕಳ ಶಾಲಾ ಬ್ಯಾಗ್ ಹೊರೆ ತಗ್ಗಿಸಲು ನಾನಾ ಪ್ಲಾನ್ ಮಾಡ್ತೀದೆ.
ಬೆಂಗಳೂರು, ಜ.08: ಕೋವಿಡ್ ಒಕ್ಕರಿಸಿದಾಗಿನಿಂದ ಅಂದ್ರೆ ಕಳೆದ 2 ವರ್ಷಗಳಿಂದ ಕೊರೊನಾ (Coronavirus) ಅಟ್ಟಹಾಸದಿಂದಾಗಿ ಶಿಕ್ಷಣವೆಲ್ಲವೂ ಆನ್ ಲೈನ್ ಮಯವಾಗಿತ್ತು. ಇದ್ರಿಂದಾಗಿ ಮಕ್ಕಳು ಮನೆಯಲ್ಲೇ ಕುಳಿತು ಮೊಬೈಲ್, ಕಂಪ್ಯೂಟರ್ ಮೂಲಕ ಎಜುಕೇಶನ್ ಪಡೆದ್ರು. ಇದೀಗ ಎಲ್ಲಾ ಟೆನ್ಷನ್ ಕ್ಲಿಯರ್ ಆಗಿರೋದ್ರಿಂದ ಮೊದಲಿನಂತೆ ಆಫ್ ಲೈನ್ ಕ್ಲಾಸ್ಗಳು ಆರಂಭವಾಗಿವೆ. ಈ ನಡುವೆ ಆನ್ ಲೈನ್ನಿಂದ ಆಫ್ ಲೈನ್ಗೆ ಹೊಂದಿಕೊಳ್ಳಲು ವಿದ್ಯಾರ್ಥಿಗಳು (Student) ಕಷ್ಟ ಪಡುತ್ತಿರುವ ಮಧ್ಯೆಯೇ ಮಕ್ಕಳಿಗೆ ಮತ್ತೊಂದು ಪ್ರಾಬ್ಲಮ್ ಶುರುವಾಗಿದೆ. ಹೆಣಭಾರದ ಸ್ಕೂಲ್ ಬ್ಯಾಗ್ (School Bag) ಹೊರೋ ನರಕ. ವಿದ್ಯಾರ್ಥಿಗಳು 10 ರಿಂದ 15 ಕೆಜಿ ತೂಕದ ಬುಕ್ಗಳನ್ನ ಮನೆಯಿಂದ ಶಾಲೆಗೆ ಹೆಗಲ ಮೇಲೆ ಹೊರಲು ಕಷ್ಟ ಪಡ್ತಿದ್ರು. ಇದರಿಂದ ಸಾಕಷ್ಟು ದೂರು ಕೇಳಿ ಬಂದಿದ್ವು ಹೀಗಾಗಿ ಇಲಾಖೆ ತಿಂಗಳಿನ ಪ್ರತಿ ಮೂರನೇ ಶನಿವಾರ ಬ್ಯಾಗ್ ಲೆಸ್ ಡೇ ಗೆ ಮುಂದಾಗಿದೆ. ಆದರೆ ಇದು ಅಷ್ಟಾಗಿ ವರ್ಕೌಟ್ ಆಗ್ತೀಲ್ಲ. ಹೀಗಾಗಿ ಶಾಲಾ ಶಿಕ್ಷಣ ಇಲಾಖೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ಬ್ಯಾಗ್ ಹೊರೆ ಇಳಿಸಲು ಹೊಸ ಪ್ಲಾನ್ಗೆ ಮುಂದಾಗಿದೆ.
ಮಕ್ಕಳಿಗೆ ಮತಷ್ಟು ಶಾಲಾ ಬ್ಯಾಗ್ ಹೊರೆ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಪ್ರತಿದಿನದ ಮಕ್ಕಳ ಶಾಲಾ ಬ್ಯಾಗ್ ಹೊರೆ ತಪ್ಪಿಸಲು ಶಾಲೆಯಲ್ಲಿಯೇ ದೈನಂದಿನ ಅಗತ್ಯ ಪಠ್ಯ ಪುಸ್ತಕ ಇಡುವ ವ್ಯವಸ್ಥೆ ಬಗ್ಗೆ ಕೂಡಾ ಚಿತಂನೆ ಮಾಡಿದೆ. ಕೆಲವು ರಾಜ್ಯಗಳಲ್ಲಿ ಈ ರೀತಿಯ ವ್ಯವಸ್ಥೆ ಈಗಾಗಲೇ ಇದೆ. ಮಕ್ಕಳು ಶಾಲೆಯಲ್ಲಿಯೇ ತಮ್ಮ ದೈನಂದಿನ ಬಳಕೆಯ ಪಠ್ಯ ವಸ್ತುಗಳನ್ನ ಇಟ್ಟು ಬರಬಹುದು. ಅಗತ್ಯ ಹೋಮ್ ವರ್ಕ್ ಅವಶ್ಯವಾಗುವ ಪುಸ್ತಕ ನೊಟ್ಸ್ ಮಾತ್ರ ಮನಗೆ ತರುವ ಸೌಲಭ್ಯ ಇದೆ. ಇದೇ ಮಾದರಿಯ ಬಗ್ಗೆ ಕೂಡಾ ಶಾಲಾ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಪೋಷಕರು ಇಂತಹ ಮಾಡಲ್ ಜಾರಿಯ ಬಗ್ಗೆ ಒತ್ತಾಯ ಶುರು ಮಾಡಿದ್ದಾರೆ.
ಭಾಗ-1, ಭಾಗ-2 ಪಠ್ಯಕ್ಕೆ ಚಿಂತನೆ
ಇನ್ನು ಈಗಾಗಲೇ ಪಠ್ಯ ಹೊರ ಕಡಿಮೆಗೆ ಮತ್ತೊಂದು ನಿರ್ಧಾರಕ್ಕೆ ಮುಂದಾಗಿರುವ ಇಲಾಖೆ ಅರ್ಧಕ್ಕರ್ಧ ಪುಸ್ತಕದ ಭಾರ ಇಳಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಪ್ರಸಕ್ತ ವರ್ಷದಿಂದ ಪಠ್ಯಪುಸ್ತಕಗಳು ಭಾಗ-1 ಮತ್ತು ಭಾಗ-2 ಎಂದು ಎರಡು ವಿಭಾಗಗಳಾಗಿ ವಿಂಗಡನೆ ಮಾಡಲು ಮುಂದಾಗಿದೆ. ಅಂದರೆ ಎಸ್‌ಎ-1 ಹಾಗೂ ಎಸ್‌ಎ-2ಗಳಾಗಿ ವಿಂಗಡಿಸಿ ಪಠ್ಯಪುಸ್ತಕಗಳ್ನ ಮುದ್ರಿಸಿ ಸರಬರಾಜು ಮಾಡಲು ಇಲಾಖೆ ತೀರ್ಮಾನ ಮಾಡಿದೆ ಇದರಿಂದ ಮಕ್ಕಳ ಬ್ಯಾಗ್ ಹೊರೆ ಕಡಿಮೆಯಾಗಲಿದೆ. ಇದರಿಂದ ಮಕ್ಕಳು ಅರ್ಧವಾರ್ಷಿಕ ಪರೀಕ್ಷೆ ವರೆಗೆ ಒಂದು ಪಠ್ಯಪುಸ್ತಕ (ಭಾಗ-1) ದಸರಾ ರಜೆ ಬಳಿಕ ವಾರ್ಷಿಕ ಪರೀಕ್ಷೆವರೆಗೆ ಇನ್ನೊಂದು ಪಠ್ಯಪುಸ್ತಕ (ಭಾಗ-2) ಬಳಸುವ ಮೂಲಕ ಶಾಲಾ ಬ್ಯಾಗ್‌ನ ಹೊರೆ ಕಡಿಮೆ ಮಾಡಬಹುದಾಗಿದೆ. ಇದರ ಜೊತೆಗೆ ಮಕ್ಕಳ ನೋಟ್ಸ್ ಹಾಗೂ ಕೆಲವು ಅನಗತ್ಯ ಶಾಲಾ ಪುಸ್ತಕಗಳನ್ನ ಶಾಲೆಯಲ್ಲಿಯೇ ಇಡಲು ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚೆ ಮಾಡ್ತೀದೆ.
ಒಟ್ನಲ್ಲಿ ಮಕ್ಕಳ ಆರೋಗ್ಯವನ್ನು ಹಿಂಡಿ ಹಿಪ್ಪೆಮಾಡಿ ದೈಹಿಕವಾಗಿ ಕುಗ್ಗಿಸುತ್ತಿರುವ ಹೆಣಭಾರದ ಸ್ಕೂಲ್ ಪ್ರಾಬ್ಲಮ್ ಗೆ ಶಾಲಾ ಶಿಕ್ಷಣ ಇಲಾಖೆ ನಾನಾ ಪ್ಲಾನ್ ಗಳ ಮೂಲಕ ರಿಲೀಫ್ ನೀಡಲು ಮುಂದಾಗಿದ್ದು ಇದು ಎಷ್ಟರ ಮಟ್ಟಿಗೆ ಜಾರಿಯಾಗುತ್ತೆ ಅಂತಾ ಕಾದು ನೋಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ