ಬಿಟ್​ಕಾಯಿನ್ ಅಂದ್ರೆ ಕನ್ನಡಿಯೊಳಗಿನ ಗಂಟು: ಗೃಹ ಸಚಿವ ಆರಗ ಜ್ಞಾನೇಂದ್ರ

TV9 Digital Desk

| Edited By: ganapathi bhat

Updated on: Nov 16, 2021 | 2:56 PM

ಕೈ ನಾಯಕರ ಮಕ್ಕಳು ಶ್ರೀಕಿ ಜತೆ ಹೋಟೆಲ್‌ನಲ್ಲಿದ್ದರು. ಶ್ರೀಕಿ ಜತೆ ಹೋಟೆಲ್‌ನಲ್ಲಿ ಇದ್ದಿದ್ದು ಏಕೆಂದು ಉತ್ತರಿಸಲಿ. ನಾವು ಅತ್ಯಂತ ಪಾರದರ್ಶಕವಾಗಿ ವಿಚಾರಣೆ ನಡೆಸಿದ್ದೇವೆ. ಬಿಟ್ ಕಾಯಿನ್ ಅಂದ್ರೆ ಕೇವಲ ಕನ್ನಡಿಯೊಳಗಿನ ಗಂಟು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬಿಟ್​ಕಾಯಿನ್ ಅಂದ್ರೆ ಕನ್ನಡಿಯೊಳಗಿನ ಗಂಟು: ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಬಿಟ್ ಕಾಯಿನ್‌ನಲ್ಲಿ ಯಾರೂ ಯಾಮಾರಿಸಲು ಸಾಧ್ಯವಿಲ್ಲ. ಅದಕ್ಕೆ ಪ್ರೈವೇಟ್ ಕೀ ಇರುತ್ತೆ. ಏನೇ ಆದ್ರೂ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಅವರು ಬಿಟ್ಟು ಕಳಿಸಿದ್ದ ಶ್ರೀಕಿಯನ್ನು ಬಂಧಿಸಿದ್ದು ನಾವು. ಶ್ರೀಕಿಯನ್ನ ಪಾರದರ್ಶಕವಾಗಿ ವಿಚಾರಣೆ ನಡೆಸಿದ್ದು ನಾವು. ಕೇಂದ್ರ ಸರ್ಕಾರ, ಇಂಟರ್‌ಪೋಲ್, ಇಡಿಗೆ ತಿಳಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು (ನವೆಂಬರ್ 16) ಹೇಳಿಕೆ ನೀಡಿದ್ದಾರೆ. ಶ್ರೀಕಿ ಜೊತೆಗೆ ಕಾಂಗ್ರೆಸ್‌ನವರ ಮಕ್ಕಳಿಗೆ ಏನು ವ್ಯವಹಾರ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಮಿತ್ರರು 1 ಸುಳ್ಳನ್ನು ನೂರು ಬಾರಿ ಹೇಳ್ತಿದ್ದಾರೆ. ಅದೇ ಸುಳ್ಳನ್ನು ಸತ್ಯ ಮಾಡಬಹುದು ಎಂದು ತಿಳಿದಿದ್ದಾರೆ. 2018ರಲ್ಲಿ ಅವರದೇ ನಾಯಕರ ಮಕ್ಕಳು ಶ್ರೀಕಿ ಜತೆಗಿದ್ದರು. ಆಗ ಶ್ರೀಕಿಯನ್ನು ಏಕೆ ವಿಚಾರಣೆಗೆ ಒಳಪಡಿಸಿಲ್ಲ. ಇದನ್ನು ರಾಜ್ಯದ ಜನರಿಗೆ ಕಾಂಗ್ರೆಸ್ ನಾಯಕರು ತಿಳಿಸಲಿ. ಕೈ ನಾಯಕರ ಮಕ್ಕಳು ಶ್ರೀಕಿ ಜತೆ ಹೋಟೆಲ್‌ನಲ್ಲಿದ್ದರು. ಶ್ರೀಕಿ ಜತೆ ಹೋಟೆಲ್‌ನಲ್ಲಿ ಇದ್ದಿದ್ದು ಏಕೆಂದು ಉತ್ತರಿಸಲಿ. ನಾವು ಅತ್ಯಂತ ಪಾರದರ್ಶಕವಾಗಿ ವಿಚಾರಣೆ ನಡೆಸಿದ್ದೇವೆ. ಬಿಟ್ ಕಾಯಿನ್ ಅಂದ್ರೆ ಕೇವಲ ಕನ್ನಡಿಯೊಳಗಿನ ಗಂಟು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಟ್ಯಾಂಗೋ ಆ್ಯಪ್ ಮೂಲಕ ಅಶ್ಲೀಲ ವ್ಯವಹಾರ ವಿಚಾರವಾಗಿ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಆನ್‌ಲೈನ್ ಗ್ಯಾಂಬ್ಲಿಂಗ್ ತಡೆಗೆ ಕಾನೂನು ತಂದಿದ್ದೇವೆ. ಅವರು ಕೋರ್ಟ್‌ನಲ್ಲಿ ವಾದ ಮಾಡುತ್ತಿದ್ದಾರೆ. ಅವುಗಳ ನಿಯಂತ್ರಣಕ್ಕೆ ಕೋರ್ಟ್, ಕಾನೂನು ಎಲ್ಲ ಇದೆ. ಈಗಿರುವ ಕಾಯ್ದೆ ಅಡಿ ನಿಯಂತ್ರಿಸಬಹುದಾ ನೋಡ್ತೇವೆ. ಅಗತ್ಯ ಬಿದ್ದರೆ ಹೊಸ ಕಾಯ್ದೆ ತರಲು ನಾವು ಸಿದ್ಧರಿದ್ದೇವೆ ಎಂದು ಜ್ಞಾನೇಂದ್ರ ತಿಳಿಸಿದ್ದಾರೆ.

ಬೊಮ್ಮಾಯಿ ಸರ್ಕಾರದ ಬಗ್ಗೆ ಜನ ಸಂತೋಷಗೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ನವರು ಕಳೆದುಹೋಗಿದ್ದಾರೆ. ಕಾಂಗ್ರೆಸ್‌ನವರಿಗೆ ಹೇಳಲು ವಿಷಯಗಳೇ ಇಲ್ಲದ ಹಿನ್ನೆಲೆ, ಇಲ್ಲದಿರುವ ವಿಚಾರ ದೊಡ್ಡದು ಮಾಡಿ ಪೋಸ್ ಕೊಡ್ತಿದ್ದಾರೆ. ಶ್ರೀಕಿಗೆ ಪ್ರಾಣ ಬೆದರಿಕೆ ಇದೆ ಅಂತ ಪದೇಪದೆ ಹೇಳ್ತಿದ್ದಾರೆ. ಕಾಂಗ್ರೆಸ್‌ನವರ ಹೇಳಿಕೆಯಿಂದ ಅನುಮಾನ ಮೂಡುತ್ತಿದೆ. ಕಾಂಗ್ರೆಸ್‌ನವರೇ ಆರೋಪಿ ಶ್ರೀಕಿಗೆ ಏನಾದ್ರೂ ಮಾಡಿ, ಸರ್ಕಾರದ ತಲೆಗೆ ಕಟ್ಟುತ್ತಾರಾ ಎಂಬ ಅನುಮಾನ ಇದೆ. ಶ್ರೀಕಿಗೆ ಪ್ರಾಣ ಬೆದರಿಕೆ ಬಗ್ಗೆ ಸಿಎಂ ಜತೆ ಮಾತನಾಡ್ತೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಿಟ್​ಕಾಯಿನ್ ಪ್ರಕರಣ: ದಾಖಲೆ ಕೊಟ್ಟ 1 ಗಂಟೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ: ಕಾಂಗ್ರೆಸ್​ ಆರೋಪಕ್ಕೆ ಆರ್ ಅಶೋಕ್ ಸವಾಲ್

ಇದನ್ನೂ ಓದಿ: ಡ್ರಗ್ಸ್​ ತನಿಖೆ ದಾರಿ ತಪ್ಪಿಸಲೆಂದೇ ಬಿಟ್​ ಕಾಯಿನ್ ಮುನ್ನೆಲೆಗೆ ತಂದ ಕಾಂಗ್ರೆಸ್: ಬಿಜೆಪಿ ನಾಯಕ ಗಂಭೀರ ಆರೋಪ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada