ಮಾರ್ಪಡಿಸಿದ ಸೈಲೆನ್ಸರ್‌ಗಳಿಂದ ಶಬ್ದ ಮಾಲಿನ್ಯ ಹೆಚ್ಚುತ್ತಿದೆ, ಅಂತಹ ವಾಹನ ಮಾಲೀಕರ ವಿರುದ್ಧ ಕೈಗೊಂಡ ಕ್ರಮದ ವಿವರ ನೀಡಿ -ಹೈಕೋರ್ಟ್
ಮಸೀದಿಗಳಲ್ಲಿ ಕಡಿಮೆ ಡೆಸಿಬಲ್ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಲಾಗಿದೆಯೇ ಎಂಬ ಪ್ರಶ್ನೆಯನ್ನು ಹೈಕೋರ್ಟ್ ವಿಭಾಗೀಯ ಪೀಠವು ಮುಂದೊಡ್ಡಿತ್ತು. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಅನುಮತಿ ನೀಡಲಾಗಿದ್ಯಾ? ಯಾವ ಕಾನೂನಿನಡಿ ವಕ್ಫ್ ಮಂಡಳಿ ಅನುಮತಿ ನೀಡಿದೆ. ಈ ಬಗ್ಗೆಯೂ ಮಾಹಿತಿ ನೀಡಲು ಹೈಕೋರ್ಟ್ ಇದೇ ವೇಳೆ ಸೂಚಿಸಿತು.
ಬೆಂಗಳೂರು: ರಾಜ್ಯದಲ್ಲಿ ದ್ವಿಚಕ್ರ ವಾಹನ, ಕಾರುಗಳಿಂದ ಶಬ್ದ ಮಾಲಿನ್ಯವಾಗುತ್ತಿದ್ದು, ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ವಿಭಾಗೀಯ ಪೀಠವು ಆದೇಶ ನೀಡಿದೆ. ಮಾರ್ಪಡಿಸಿದ ಸೈಲೆನ್ಸರ್‌ಗಳಿಂದ ಶಬ್ದ ಮಾಲಿನ್ಯ ಹೆಚ್ಚುತ್ತಿದೆ. ಅಂತಹ ವಾಹನಗಳ ವಿರುದ್ಧ ಅಭಿಯಾನ ನಡೆಸಬೇಕು. ಮಾಲೀಕರ ವಿರುದ್ಧ ಕೈಗೊಂಡ ಕ್ರಮದ ವಿವರ ನೀಡಬೇಕು ಎಂದು ವಿಭಾಗೀಯ ಪೀಠ ಸೂಚಿಸಿದೆ.
ಇದೇ ವೇಳೆ, ಶಬ್ದ ಮಾಲಿನ್ಯ ಉಲ್ಲಂಘಿಸುವ ನೈಟ್ ಕ್ಲಬ್ಗಳ ವಿರುದ್ಧವೂ ಕ್ರಮಕೈಗೊಳ್ಳಲು ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ನಿಯಮಾವಳಿ ಪ್ರಕಾರ ಸೀಮಿತ ಬಳಕೆಗೆ ಮಾತ್ರ ಅನುಮತಿ ನೀಡಲಾಗಿದೆ. ಧ್ವನಿವರ್ಧಕ ಬಳಕೆಗೆ ಸೀಮಿತ ಅನುಮತಿ ನೀಡಬಹುದು. ಸಾರ್ವಜನಿಕ ಉತ್ಸವ, ಹಬ್ಬಗಳಿಗೆ ಅನುಮತಿ ನೀಡಬಹುದು. ವರ್ಷದ 15 ದಿನಗಳಷ್ಟೇ ಬಳಸಲು ಅನುಮತಿ ನೀಡಬಹುದು. ಈ ನಿಯಮಾವಳಿ ಉಲ್ಲಂಘಿಸದಂತೆ ಹೈಕೋರ್ಟ್ ತಾಕೀತು ಮಾಡಿದೆ.
ಇನ್ನು, ಮಸೀದಿಗಳಲ್ಲಿ ಕಡಿಮೆ ಡೆಸಿಬಲ್ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಲಾಗಿದೆಯೇ ಎಂಬ ಪ್ರಶ್ನೆಯನ್ನು ಹೈಕೋರ್ಟ್ ವಿಭಾಗೀಯ ಪೀಠವು ಮುಂದೊಡ್ಡಿತ್ತು. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಅನುಮತಿ ನೀಡಲಾಗಿದ್ಯಾ? ಯಾವ ಕಾನೂನಿನಡಿ ವಕ್ಫ್ ಮಂಡಳಿ ಅನುಮತಿ ನೀಡಿದೆ. ಈ ಬಗ್ಗೆಯೂ ಮಾಹಿತಿ ನೀಡಲು ಹೈಕೋರ್ಟ್ ಇದೇ ವೇಳೆ ಸೂಚಿಸಿತು.
Also Read: ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ: ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ
(changed silencer creating sound pollution take action against those vehicle owner orders high court)