ಪಟ್ಟು ಸಡಿಲಿಸದ ಆಶಾ ಕಾರ್ಯಕರ್ತೆಯರು: ಚಳಿಯಲ್ಲೂ ಅಹೋರಾತ್ರಿ ಧರಣಿ ಮುಂದುವರಿಸಲು ತೀರ್ಮಾನ

ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸಿರುವ ಅಹೋರಾತ್ರಿ ಧರಣಿ 4ನೇ ದಿನಕ್ಕೆ ಕಾಲಿಟ್ಟಿದೆ. ಸಿಎಂ ಸಂಧಾನಕ್ಕೂ ಮಣಿಯದ ಕಾರ್ಯಕರ್ತೆಯರು ಧರಣಿ ಮುಂದುವರಿಸಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಕೈಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಪಟ್ಟು ಸಡಿಲಿಸದ ಆಶಾ ಕಾರ್ಯಕರ್ತೆಯರು: ಚಳಿಯಲ್ಲೂ ಅಹೋರಾತ್ರಿ ಧರಣಿ ಮುಂದುವರಿಸಲು ತೀರ್ಮಾನ
ಆಶಾ ಕಾರ್ಯಕರ್ತೆಯರ ಪ್ರತಿಭಟನೆ
Edited By:

Updated on: Nov 20, 2026 | 4:33 PM

ಬೆಂಗಳೂರು, ನವೆಂಬರ್​​ 20: ಬಿಸಿಲು, ಚಳಿ ಎನ್ನದೇ ಆಶಾ ಕಾರ್ಯಕರ್ತೆಯರು ಫ್ರೀಡಂಪಾರ್ಕ್​ನಲ್ಲಿ ಸಮರ ಕಹಳೆ ಮೊಳಗಿಸಿದ್ದಾರೆ. ಸರ್ಕಾರ ನಮಗೆ 15 ಸಾವಿರ ಗೌರವಧನ ನೀಡಬೇಕು. ನಿವೃತ್ತಿ ಬಳಿಕ 5 ಲಕ್ಷ ಇಡಿಗಂಟು ಕೊಡಬೇಕು ಅಂತ ಪಟ್ಟು ಹಿಡಿದು ನಾಲ್ಕು ದಿನದಿಂದ ಧರಣಿ ಕೂತಿದ್ದಾರೆ. ಸರ್ಕಾರದ ಮನವೊಲಿಕೆಗೂ ಜಗ್ಗದೇ ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ. ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಮುಖ್ಯಮಂತ್ರಿಗಳು ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ಒತ್ತಾಯಿಸಿದ್ದಾರೆ.

ಜಾಹೀರಾತಿಗೆ 500 ಕೋಟಿ ರೂ ಖರ್ಚು ಮಾಡುವ ಸರ್ಕಾರಕ್ಕೆ ಗೌರವಧನ ನೀಡಲು ಹಣವಿಲ್ಲವೇ? ಆಶಾ ಕಾರ್ಯಕರ್ತೆಯರು ತಿರುಗೇಟು

ಆಶಾ ಕಾರ್ಯಕರ್ತೆಯರ ಬೇಡಿಕೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ಯೋಜನೆ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಹಣಕಾಸಿನ ಕೊರತೆ ಇದೆ ಎಂಬ ಸರ್ಕಾರದ ವಾದಕ್ಕೂ ಕಾರ್ಯಕರ್ತೆಯರು ತಿರುಗೇಟು ನೀಡಿದ್ದಾರೆ.

Loading...

ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಮುಖಂಡರ ಜೊತೆಗಿನ ಸಿಎಂ ಸಭೆ ವಿಫಲ: ಧರಣಿ ಮುಂದುವರಿಸಲು ತೀರ್ಮಾನ

ಜಾಹೀರಾತುಗಳಿಗೆ 500 ಕೋಟಿ ರೂ ಖರ್ಚು ಮಾಡುವ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡಲು ಹಣವಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸುರಂಗ ಮಾರ್ಗ ಯೋಜನೆಗೆ 17 ಸಾವಿರದಿಂದ 20 ಸಾವಿರ ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ಸಂಸದರಿಗೆ 30 ಲಕ್ಷ ರೂ ಮೌಲ್ಯದ ವಾಹನಗಳನ್ನು ಖರೀದಿಸಿಕೊಡುವ ಸರ್ಕಾರ, ಪ್ರತಿ ವಾರ ಸಾವಿರಾರು ಕೋಟಿ ರೂ ಮೊತ್ತದ ಯೋಜನೆಗಳನ್ನು ಘೋಷಿಸುತ್ತಿದೆ. ಆದರೆ ಆಶಾ ಕಾರ್ಯಕರ್ತೆಯರ ವಿಚಾರ ಬಂದಾಗ ಮಾತ್ರ ಹಣದ ಕೊರತೆಯ ನೆಪ ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೌಕರರಂತೆ ದುಡಿದರೂ ನೌಕರರ ಸ್ಥಾನಮಾನವಿಲ್ಲ

ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ ಹಣ ರಾಜ್ಯದ ತೆರಿಗೆ ಹಣವಾಗಿದ್ದು, ಅದನ್ನು ಸಮಾನವಾಗಿ ಹಂಚಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ನೌಕರರಂತೆ ದುಡಿಯುತ್ತಿದ್ದರೂ ತಮಗೆ ನೌಕರರ ಸ್ಥಾನಮಾನ ನೀಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಸಿಎಂ ಸಂಧಾನದ ನಂತರವೂ 4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ!

ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಸಿಬ್ಬಂದಿ ಹಾಗೂ ಅತಿಥಿ ಶಿಕ್ಷಕರು ಸೇರಿದಂತೆ ವಿವಿಧ ವರ್ಗಗಳ ಹೋರಾಟದ ಉದಾಹರಣೆಯನ್ನು ಸರ್ಕಾರ ನೀಡುತ್ತಿದೆ. ಈ ಮೂಲಕ ವಿವಿಧ ವರ್ಗಗಳ ಸಿಬ್ಬಂದಿಯ ಹೋರಾಟವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ಸಿಎಂ ಡಿಕೆ ಶಿವಕುಮಾರ್​ ಹೇಳಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು

ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲಿ ಎಂಬ ಸಿಎಂ ಡಿಕೆ ಶಿವಕುಮಾರ್​​ ಹೇಳಿಕೆ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ‘ಎಲ್ಲದ್ದಕ್ಕೂ ಕೇಂದ್ರ ಸರ್ಕಾರ ಅಂತಾ ಹೇಳುವುದರಲ್ಲಿ ಅರ್ಥ ಏನಿದೆ. ರಾಜ್ಯ ಸರ್ಕಾರ ಇರೋದು ಯಾಕೆ ಎಂದು ಅವರು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಹೆಚ್ಚಿಸಿಲ್ಲ, ರಾಜ್ಯ ಸರ್ಕಾರ ಏಕೆ ಹೆಚ್ಚಿಸಬಾರದು. ಅವರು ಕೆಲಸ ಮಾಡುತ್ತಿರುವುದು ನಾಡಿನ ಜನತೆಗೆ, ಹಳ್ಳಿ ಜನರಿಗೆ ಕೇಂದ್ರ ಸರ್ಕಾರ ಗೌರವಧನ ಹೆಚ್ಚಿಸಲಿ ಅಂತಾ ಏಕೆ ಹೇಳಬೇಕು? ಎಲ್ಲದ್ದಕ್ಕೂ ಕೇಂದ್ರ ಸರ್ಕಾರ ಅಂದರೆ ಏನು ಮಾಡಲು ಆಗುತ್ತದೆ. ನನ್ನ ಕೆಲಸ ಒಂದು ಪರಿಮಿತಿಯಲ್ಲಿ ಇದೆ, ನಾನೇನು ಮಾಡಲು ಆಗಲ್ಲ. ಇಲ್ಲಿ ನಾನು ಇದ್ದಾಗ ಅನೇಕ ಬಾರಿ ಹಲವು ತೀರ್ಮಾನ ಮಾಡಿದ್ದೇನೆ. ಈ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಏನಾದ್ರೂ ತೀರ್ಮಾನಿಸಲಿ’ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:29 pm, Fri, 20 November 26

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us