ಬೈಯ್ಯಪ್ಪನಹಳ್ಳಿ ರೈಲ್ವೆ ಟರ್ಮಿನಲ್​ಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭೇಟಿ

Indian Railways: ಬೈಯ್ಯಪ್ಪನಹಳ್ಳಿಯಲ್ಲಿ ನಿರ್ಮಾಣವಾಗಿರೋ ಹವಾನಿಯಂತ್ರಿತ ರೈಲ್ವೆ ನಿಲ್ದಾಣವನ್ನು ಅಶ್ವಿನಿ ವೈಷ್ಣವ್ ಪರಿಶೀಲಿಸಿದ್ದಾರೆ. ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.

ಬೈಯ್ಯಪ್ಪನಹಳ್ಳಿ ರೈಲ್ವೆ ಟರ್ಮಿನಲ್​ಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭೇಟಿ
ಅಶ್ವಿನಿ ವೈಷ್ಣವ್ (ಸಂಗ್ರಹ ಚಿತ್ರ)

ಬೆಂಗಳೂರು: ಬೈಯ್ಯಪ್ಪನಹಳ್ಳಿ ರೈಲ್ವೆ ಟರ್ಮಿನಲ್​ಗೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿಯ ವೈಷ್ಣವ್ ಭೇಟಿ ನೀಡಿದ್ದಾರೆ. ರೈಲ್ವೇ ಟರ್ಮಿನಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿನ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್​ಗೆ ಭೇಟಿ ಕೊಟ್ಟಿದ್ದಾರೆ. ದೇಶದ ವಿನೂತನ ರೈಲ್ವೆ ಟರ್ಮಿನಲ್ ವೀಕ್ಷಿಸಿದ್ದಾರೆ. ಈ ರೈಲ್ವೇ ಟರ್ಮಿನಲ್​ನ್ನು ಏರ್​ಪೋರ್ಟ್​​ ಮಾದರಿಯಲ್ಲಿ ನಿರ್ಮಿಸಿರಲಾಗಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ ನೋಡಿ ಕೇಂದ್ರ ಸಚಿವರು ಸಂತಸಗೊಂಡಿದ್ದಾರೆ. ಬೈಯ್ಯಪ್ಪನಹಳ್ಳಿಯಲ್ಲಿ ನಿರ್ಮಾಣವಾಗಿರೋ ಹವಾನಿಯಂತ್ರಿತ ರೈಲ್ವೆ ನಿಲ್ದಾಣವನ್ನು ಅಶ್ವಿನಿ ವೈಷ್ಣವ್ ಪರಿಶೀಲಿಸಿದ್ದಾರೆ. ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.

ಇದು ಇಡೀ ದೇಶಕ್ಕೆ ಮಾದರಿಯಾದ ರೈಲ್ವೆ ಟರ್ಮಿನಲ್​. ಅತಿ ಶೀಘ್ರದಲ್ಲೇ ಈ ರೈಲ್ವೆ ಟರ್ಮಿನಲ್​ ಓಪನ್ ಆಗಲಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಟರ್ಮಿನಲ್​ಗೆ ಕನೆಕ್ಟಿವಿಟಿ ಸಮಸ್ಯೆ ಇದೆ. ಇದಕ್ಕೆ ಬಿಬಿಎಂಪಿ ಕಮಿಷನರ್ ಪರಿಹಾರವನ್ನೂ ನೀಡಿದ್ದಾರೆ. ಆದಷ್ಟು ಶೀಘ್ರ ಎಲ್ಲಾ ಸಮಸ್ಯೆ ನಿವಾರಿಸಿ ಟರ್ಮಿನಲ್ ಉದ್ಘಾಟನೆ ಮಾಡಲಾಗುತ್ತೆ ಎಂದು ರೈಲ್ವೆ ಟರ್ಮಿನಲ್ ಪರಿಶೀಲನೆ ಬಳಿಕೆ ಸಚಿವ ವೈಷ್ಣವ್ ಹೇಳಿಕೆ ನೀಡಿದ್ದಾರೆ.

ಇತ್ತ ಬೆಂಗಳೂರಿನಲ್ಲಿ ಭಾರತ್ ಫಸ್ಟ್ ಕ್ರೀಡಾ ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಇಲಾಖೆ ಸಚಿವ ಅನುರಾಗ್ ಠಾಕೂರ್, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ, ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ ಭಾಗವಹಿಸಿದ್ದಾರೆ. ಯುವ ಕ್ರೀಡಾಪಟುಗಳ ಜೊತೆ ಠಾಕೂರ್ ಸಂವಾದ ನಡೆಸಿದ್ದಾರೆ. ಜಯನಗರದ ಚೆನ್ನಮ್ಮ ಮೈದಾನದಲ್ಲಿ ಕಾರ್ಯಕ್ರಮ ನಡೆದಿದೆ.

ಬೆಂಗಳೂರಿನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣಕ್ಕೆ ಕೇಂದ್ರ ಕ್ರೀಡಾ ಸಚಿವ ಅನುರಾಗ್​​ ಠಾಕೂರ್ ಭೇಟಿ ನೀಡಿದ್ದಾರೆ. ಕ್ರೀಡಾಂಗಣ ಪರಿಶೀಲಿಸಿದ್ದಾರೆ. ಟೋಕಿಯೋ ಪ್ಯಾರಾ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಸಚಿವ ಅಭಿನಂದನೆ ಸಲ್ಲಿಸಿದ್ದಾರೆ. ಭಾರತಕ್ಕೆ ಇಂದು ದೊಡ್ಡ ದಿನ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಇಂದು ಟೋಕಿಯೋ ಪ್ಯಾರಾಲಿಂಪಿಕ್ಸ್​​​ನಲ್ಲಿ 19 ಪದಕಗಳು ಲಭಿಸಿವೆ. ಪ್ಯಾರಾಲಿಂಪಿಕ್ಸ್​​​ನಲ್ಲಿಂದು ಭಾರತ 19 ಪದಕಗಳನ್ನ ಗೆದ್ದಿದೆ. ಪದಕಗಳ ಪಟ್ಟಿಯಲ್ಲಿ ಭಾರತ ದೇಶ 24ನೇ ಸ್ಥಾನದಲ್ಲಿದೆ ಎಂದು ಬೆಂಗಳೂರಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಾನೂ ನಿಮ್ಮಂತೆ ಸಾಮಾನ್ಯ ನಾಗರಿಕ; ರೈಲು ಪ್ರಯಾಣ ಮಾಡಿ ಅಭಿಪ್ರಾಯ ಸಂಗ್ರಹಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

ಇದನ್ನೂ ಓದಿ: ‘ಹೆಮ್ಮೆಯ ಕ್ಷಣ’: ಪುನರ್​ನಿರ್ಮಾಣಗೊಂಡ ಗುಜರಾತ್ ರೈಲ್ವೇ ನಿಲ್ದಾಣದಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡ ಅಶ್ವಿನಿ ವೈಷ್ಣವ್

Click on your DTH Provider to Add TV9 Kannada