AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಘೋರ ದುರಂತ: ನೀರಿನಿಂದ 8 ವರ್ಷದ ಬಾಲಕ ಸಾವು

ಕನಕಪುರ ರಸ್ತೆ ಅಪಾರ್ಟ್‌ಮೆಂಟ್‌ನಲ್ಲಿ 8 ವರ್ಷದ ಬಾಲಕ ಅತಿಸಾರದಿಂದ ಸಾವನ್ನಪ್ಪಿದ್ದಾನೆ. ಕಲುಷಿತ ನೀರಿನ ಪೂರೈಕೆಯೇ ಕಾರಣವೆಂದು ನಿವಾಸಿಗಳು ಶಂಕಿಸಿದ್ದಾರೆ, ಹಲವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಬಿಬಿಎಂಪಿ ಅಧಿಕಾರಿಗಳು ಮಗುವಿನ ಸಾವಿಗೆ ನೀರು ಕಾರಣವಲ್ಲ, ಬೇರೆ ಆರೋಗ್ಯ ಸಮಸ್ಯೆಗಳು ಇವೆ ಎಂದಿದ್ದಾರೆ. ಆದರೆ ನೀರಿನ ಗುಣಮಟ್ಟ ಪರಿಶೀಲನೆಗೆ ಸಮಿತಿ ರಚಿಸಲಾಗಿದೆ. ಅಪಾರ್ಟ್‌ಮೆಂಟ್ ನೀರಿನ ಟ್ಯಾಂಕ್‌ನಲ್ಲಿ ಸ್ವಲ್ಪ ಮಾಲಿನ್ಯ ಪತ್ತೆಯಾಗಿದೆ.

ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಘೋರ ದುರಂತ: ನೀರಿನಿಂದ 8 ವರ್ಷದ ಬಾಲಕ ಸಾವು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Nov 28, 2025 | 4:52 PM

Share

ಬೆಂಗಳೂರು, ನ.28: ಬೆಂಗಳೂರಿನ ಕನಕಪುರ ಮುಖ್ಯ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್​​​​ನಲ್ಲಿ ವಾಸಿಸುತ್ತಿದ್ದ ಎಂಟು ವರ್ಷದ ಬಾಲಕನೊಬ್ಬ ತೀವ್ರ ಅತಿಸಾರದಿಂದ (Bangalore water contamination) ಆಸ್ಪತ್ರೆಗೆ ದಾಖಲಾಗದ ಮೂರು ದಿನಗಳ ನಂತರ ಅಂದರೆ ಗುರುವಾರ ಸಾವನ್ನಪ್ಪಿದ್ದಾನೆ. ಇದೀಗ ಈ ಬಾಲಕನ ಸಾವು ಅಲ್ಲಿನ ಜನರಿಗೆ ಆತಂಕ ಹೆಚ್ಚಿಸಿದೆ. ಈ ಅಪಾರ್ಟ್‌ಮೆಂಟ್​​​​ನಲ್ಲಿ ವಾಸಿಸುವ ಅನೇಕ ಜನ ಒಂದು ತಿಂಗಳಿಗೂ ಹೆಚ್ಚು ಕಾಲ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೀಗ ಅಪಾರ್ಟ್‌ಮೆಂಟ್​​​ಗೆ ಕಲುಷಿತ ನೀರು ಪೂರೈಕೆ ಆಗುತ್ತಿರಬಹುದು ಎಂದು ಹೇಳಿದ್ದಾರೆ. ಬಾಲಕನ ಸಾವಿಗೆ ನೀರಿನ ಗುಣಮಟ್ಟದ ಸಮಸ್ಯೆಗಳೇ ಕಾರಣ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ. ಇನ್ನು ಬಾಲಕನ ಸಾವಿಗೆ ಕಾರಣ ಏನು ಎಂಬುದನ್ನು ಇಲ್ಲಿಯವರೆಗೂ ಪತ್ತೆಯಾಗಿಲ್ಲ. ಬಿಬಿಎಂಪಿ ಅಧಿಕಾರಿಗಳು ಹೇಳಿರುವ ಪ್ರಕಾರ, ಬಾಲಕನಿಗೆ ಇತರ ಆರೋಗ್ಯ ಸಮಸ್ಯೆಗಳು ಇದೆ ಎಂದು ಹೇಳಿದ್ದಾರೆ.

ಮೈಗೇಟ್‌ನಲ್ಲಿರುವ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕಳುಹಿಸಲಾದ ಸಂದೇಶದಲ್ಲಿ “ಬೆಂಗಳೂರು ದಕ್ಷಿಣದ ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ಬಾಲ ಸುಂದರಂ ಅವರ ಪ್ರಕಾರ, ಮಗು ನೀರಿನಿಂದ ಸಾವನ್ನಪ್ಪಿಲ್ಲ, ಬದಲಾಗಿ ಆ ಮಗುವಿಗೆ ಇತರ ಬೇರೆ ಬೇರೆ ಕಾಯಿಲೆಗಳು ಇತ್ತು ಎಂದು ಸ್ಪಷ್ಟಪಡಿಸಲಾಗಿದೆ ಎಂದು ಸಂದೇಶದಲ್ಲಿ ಹೇಳಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರೊಂದಿಗೆ ಸಮಾಲೋಚಿಸಿ ಈ ಸಂದೇಶವನ್ನು ಕಳುಹಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಮಗು ಸುಮಾರು ಎರಡು ವರ್ಷಗಳಿಂದ ದೀರ್ಘಕಾಲದ ನೆಫ್ರೋಟಿಕ್ ಸಿಂಡ್ರೋಮ್‌ನಿಂದ ಬಳಲುತ್ತಿತ್ತು . ಈ ವಾರ ಮತ್ತಷ್ಟು ಹದಗೆಟ್ಟಿದೆ ಎಂದು ದಿ ಹಿಂದೂ ವರದಿ ತಿಳಿಸಿದೆ.

ಆದರೆ, ಹಲವಾರು ಕುಟುಂಬಗಳು ಕಳೆದ ಕೆಲವು ವಾರಗಳಿಂದ ಅತಿಸಾರ ಮತ್ತು ವಾಂತಿ ಮಾಡಿರುವುದು ವರದಿಯಾಗಿವೆ. ಇದರಲ್ಲಿ ಒಬ್ಬ ನಿವಾಸಿ ಇಡೀ ದಿನ ಅತಿಸಾರದಿಂದ ಬಳಲುತ್ತಿದ್ದ ಗುರುವಾರ ಮುಂಜಾನೆ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಿಸಲಾಗಿತು ಎಂದು ವರದಿ ಹೇಳಿದೆ. ಈ ಸಾವಿನ ಬಗ್ಗೆ ತನಿಖೆ ನಡೆಸಲು ತಂಡವನ್ನು ಕಳುಹಿಸಲಾಗಿದೆ ಎಂದು ದಕ್ಷಿಣ ನಗರ ನಿಗಮದ ಆಯುಕ್ತ ರಮೇಶ್ ಕೆ.ಎನ್ ಹೇಳಿದ್ದಾರೆ. ಕಳೆದ ಒಂದು ತಿಂಗಳಿನಿಂದ ಹಲವಾರು ಬಾರಿ ವೈದ್ಯಕೀಯ ಶಿಬಿರ ಕೂಡ ಈ ಸ್ಥಳದಲ್ಲಿ ಮಾಡಲಾಗಿದೆ. ಇದೀಗ ಈ ಘಟನೆಯ ನಂತರ ನಿವಾಸಿಗಳಿಗೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ರಸ್ತೆ ಗುಂಡಿಯಿಂದ ಕೈ-ಕಾಲು ಮುರಿದುಕೊಂಡ ಬೈಕ್​​ ಸವಾರ, 6 ಲಕ್ಷ ರೂ. ಆಸ್ಪತ್ರೆ ಬಿಲ್‌

ಅಪಾರ್ಟ್ಮೆಂಟ್ ಅಸೋಸಿಯೇಷನ್‌ನ ಕಾರ್ಯದರ್ಶಿ ಈ ಬಗ್ಗೆ ಮಾತನಾಡಿದ್ದಾರೆ. “ವಾತಾವರಣದಲ್ಲಿ ಯಾವುದೇ ಮಾಲಿನ್ಯದ ಸಮಸ್ಯೆ ಕಂಡುಬಂದಿಲ್ಲ. ಆದರೆ ನಿಗಮದ ಆರೋಗ್ಯ ತಂಡದ ಸದಸ್ಯರೊಬ್ಬರು ಅಪಾರ್ಟ್ಮೆಂಟ್​​​ನ್ಲಿರುವ ಟ್ಯಾಂಕ್​​ನ ನೀರಿನ ಪರೀಕ್ಷೆ ನಡೆಸಿದ್ದಾರೆ. ಈ ಪರೀಕ್ಷೆ ವೇಳೆ ಸ್ವಲ್ಪ ಮಾಲಿನ್ಯವಾಗಿದೆ ಎಂಬುದು ಕಂಡು ಬಂದಿದೆ. ಇನ್ನು ಗುರುವಾರ ನಾಗರಿಕ ಅಧಿಕಾರಿಗಳು ಬಿಡಬ್ಲ್ಯೂಎಸ್ಎಸ್ಬಿ ಪ್ರತಿನಿಧಿಗಳು, ಅಪಾರ್ಟ್ಮೆಂಟ್ ಅಸೋಸಿಯೇಷನ್ ​​ಮತ್ತು ನಿವಾಸಿಗಳೊಂದಿಗೆ ಸಭೆ ನಡೆಸಿದ್ದರು.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮೇಷ ರಾಶಿಯ ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ
ಯುಗಾದಿ ವರ್ಷ ಭವಿಷ್ಯ; ಮೇಷ ರಾಶಿಯ ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ
ಬಜೆಟ್ ಬೆನ್ನಲ್ಲೇ ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಮಾತು
ಬಜೆಟ್ ಬೆನ್ನಲ್ಲೇ ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಮಾತು
ಸಿನಿಮಾ ಜರ್ನಿಗೆ ಬೆಂಬಲವಾಗಿ ನಿಂತ ಶಿವಣ್ಣನಿಗೆ ಧನ್ಯವಾದ ಹೇಳಿದ ವಿಜಯ್
ಸಿನಿಮಾ ಜರ್ನಿಗೆ ಬೆಂಬಲವಾಗಿ ನಿಂತ ಶಿವಣ್ಣನಿಗೆ ಧನ್ಯವಾದ ಹೇಳಿದ ವಿಜಯ್
ಕೋಲಾರದ ರೈತನ ಮಗ ಯುಪಿಎಸ್​ಸಿ ಪಾಸ್​ ಮಾಡಿದ್ದು ಹೇಗೆ ಗೊತ್ತಾ?
ಕೋಲಾರದ ರೈತನ ಮಗ ಯುಪಿಎಸ್​ಸಿ ಪಾಸ್​ ಮಾಡಿದ್ದು ಹೇಗೆ ಗೊತ್ತಾ?
ಬೆಂಗಳೂರು ಹೋಟೆಲ್​ಗಳಲ್ಲಿ ಕಾಫಿ, ತಿಂಡಿ ದರ ಹೆಚ್ಚಳ ಸಾಧ್ಯತೆ
ಬೆಂಗಳೂರು ಹೋಟೆಲ್​ಗಳಲ್ಲಿ ಕಾಫಿ, ತಿಂಡಿ ದರ ಹೆಚ್ಚಳ ಸಾಧ್ಯತೆ