ಬೆಂಗಳೂರಿಗರೇ ಸಿದ್ದರಾಗಿ: ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ; ಕನಿಷ್ಠ ತಾಪಮಾನ ಎಷ್ಟು ಗೊತ್ತಾ?

ಬೆಂಗಳೂರಿನಲ್ಲಿ ಮುಂದಿನ ವಾರ ದಾಖಲೆಯ ಚಳಿ ಎದುರಾಗಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ನಗರದ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ನಿರೀಕ್ಷೆಯಿದೆ. ಇದು 2016ರ ನಂತರ ಡಿಸೆಂಬರ್‌ನಲ್ಲಿ ದಾಖಲಾಗುವ ಅತ್ಯಂತ ಕಡಿಮೆ ತಾಪಮಾನವಾಗಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಚಳಿಯ ತೀವ್ರತೆ ಹೆಚ್ಚಲಿದೆ.

ಬೆಂಗಳೂರಿಗರೇ ಸಿದ್ದರಾಗಿ: ಮುಂದಿನವಾರ ರಾಜಧಾನಿಯಲ್ಲಿ ಇರಲಿದೆ ದಾಖಲೆಯ ಚಳಿ; ಕನಿಷ್ಠ ತಾಪಮಾನ ಎಷ್ಟು ಗೊತ್ತಾ?
ಚಳಿ

Updated on: Dec 11, 2025 | 11:56 AM

ಬೆಂಗಳೂರು, ಡಿಸೆಂಬರ್​​ 11: ಸಿಲಿಕಾನ್​​ ಸಿಟಿ ನಿವಾಸಿಗಳೇ ಈಗ ಇರುವ ವಾತಾವರಣವೇ ನಿಮಗೆ ಚಳಿ ಚಳಿ ಅನ್ನಿಸುತ್ತಿದ್ಯಾ? ಹಾಗಿದ್ರೆ ಮತ್ತಷ್ಟು ಕೂಲ್​​ ಕೂಲ್​​ ವೆದರ್​​ ಎದುರಿಸಲು ನೀವು ಸಿದ್ಧರಾಗಿ. ರಾಜಧಾನಿ ಬೆಂಗಳೂರಲ್ಲಿ ಮುಂದಿನ ವಾರ ಚಳಿ ಮತ್ತಷ್ಟು ಹೆಚ್ಚಲಿದೆ ಎಂದು ಹವಾಮಾನ ಇಳಾಖೆ ತಿಳಿಸಿದೆ. ನಗರದ ಕನಿಷ್ಠ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯುವ ನಿರೀಕ್ಷೆಯಿದ್ದು, ಇದು 2016ರ ನಂತರ ಡಿಸೆಂಬರ್‌ನಲ್ಲಿ ದಾಖಲಾಗುವ ಅತಿ ಕಡಿಮೆ ತಾಪಮಾನವಾಗಿದೆ.

ನಗರದಲ್ಲಿ ಚಳಿಗಾಲದ ತೀವ್ರತೆ ಕ್ರಮೇಣ ಹೆಚ್ಚುತ್ತಿದ್ದು, ಮುಂದಿನವಾರ ಬೆಳಗ್ಗಿನ ಹೊತ್ತು ಮತ್ತು ಸಂಜೆ ವೇಳೆ ಭರ್ಜರಿ ಚಳಿ ಇರಲಿದೆ. ಕಳೆದ ವಾರ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ಪರಿಣಾಮ ಬೆಂಗಳೂರಿಗರಿಗೆ ಚಳಿಯ ಅನುಭವ ಆಗಿತ್ತು. ಆದ್ರೆ ಮುಂದಿನ ವಾರ ನಗರದ ಕನಿಷ್ಠ ತಾಪಮಾನ ಮತ್ತಷ್ಟು ಇಳಿಕೆ ಆಗಲಿರುವ ಕಾರಣ, ಚಳಿಯೂ ಹೆಚ್ಚಲಿದೆ. IMD ಪ್ರಕಾರ, ಕನಿಷ್ಠ ತಾಪಮಾನ 12ರಿಂದ 14 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದ್ದು, ಡಿಸೆಂಬರ್‌ನ ಸರಾಸರಿ 16.4 ಡಿಗ್ರಿಗಿಂತ ಕಡಿಮೆಯಾಗಿದೆ. ಅಂದಾಜು ಪ್ರಕಾರ ತಾಪಮಾನ ಇಳಿಕೆ ಮುಂದುವರಿದರೆ, 2016ರ ಡಿಸೆಂಬರ್ 11ರ ನಂತರ ಅತ್ಯಂತ ಚಳಿಯನ್ನು ಬೆಂಗಳೂರು 2025ರ ಡಿಸೆಂಬರ್​​ನಲ್ಲಿ ದಾಖಲಿಸಲಿದೆ. ಆ ವೇಳೆ ಕೂಡ ನಗರದ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ತಲುಪಿತ್ತು.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ; ಬೆಂಗಳೂರು ಸೇರಿ ಹಲವೆಡೆ ಶೀತಗಾಳಿ ಹೆಚ್ಚಳ

ರಾಜ್ಯದ ಹಲವೆಡೆ ಚಳಿ ಹೆಚ್ಚಡ

ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ಚಳಿ ಹೆಚ್ಚಿರಲಿದೆ. ಬೀದರ್​​, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡದಲ್ಲಿ ಇಂದು ಮತ್ತು ನಾಳೆ ಚಳಿ ಹೆಚ್ಚಿರಲಿದೆ. ಕರಾವಳಿ ಜಿಲ್ಲೆಗಳು ಸೇರಿ ಉಳಿದೆಡೆ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us