ಬೆಂಗಳೂರು-ಮೈಸೂರು ರಸ್ತೆಯನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು : ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ
ಬೆಂಗಳೂರು-ಮೈಸೂರು ಹೈವೆ ಕಾಮಗಾರಿ ವಿಚಾರ ನನ್ನ ಗಮನಕ್ಕೆ ಬಂದಿದೆ. ಮಳೆ ಬಂದು ಸ್ವಲ್ಪ ಸಮಸ್ಯೆ ಆಗಿದೆ. ಡ್ರೈನೇಜ್ ಸಿಸ್ಟಮ್ ಸಮಸ್ಯೆ ಆಗಿದೆ. ಅದನ್ನು ಮುಂದಿನ ನಿರ್ಧಿಷ್ಟ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರು: ಬೆಂಗಳೂರು-ಮೈಸೂರು ಹೈವೆ (Bengaluru-Mysore Highway) ಕಾಮಗಾರಿ ವಿಚಾರ ನನ್ನ ಗಮನಕ್ಕೆ ಬಂದಿದೆ. ಮಳೆ ಬಂದು ಸ್ವಲ್ಪ ಸಮಸ್ಯೆ ಆಗಿದೆ. ಡ್ರೈನೇಜ್ ಸಿಸ್ಟಮ್ ಸಮಸ್ಯೆ ಆಗಿದೆ. ಅದನ್ನು ಮುಂದಿನ ನಿರ್ಧಿಷ್ಟ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಬೆಂಗಳೂರಿನಲ್ಲಿ ಭರವಸೆ ನೀಡಿದ್ದಾರೆ. ಕಾಮಗಾರಿಯಲ್ಲಿ ಯಾವುದೇ ಕರೆಪ್ಷನ್ ಆಗಿಲ್ಲ. ಕ್ವಾಲಿಟಿ ಕಾಮಗಾರಿ ಮಾಡುವ ಗುರಿ ಇದೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದರು.
ಕಾಮಗಾರಿ ಬಗ್ಗೆ ಅಧಿಕಾರಿಗಳ ಬಳಿ ವರದಿ ಕೇಳಿದ್ದೇನೆ. ಕಳೆದ 50 ವರ್ಷಗಳಲ್ಲಿ ಭಾರೀ ಮಾಳೆಯಾಗಿದೆ. ಮಳೆಯಿಂದ ಸಮಸ್ಯೆ ಆಗಿರೋದು ಸತ್ಯ. ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಂತೆ ಕ್ರಮ ಆಗಲಿದೆ. ಈಗಾಗಲೇ ಕಾಮಗಾರಿ ಬಹುತೇಕ ಮುಗಿದಿದೆ. ಪ್ರಧಾನಿ ಮೋದಿ ಜೊತೆ ಚರ್ಚೆ ಮಾಡಿ ಶೀಘ್ರವೇ ಉದ್ಘಾಟನೆ ಮಾಡಲಿದ್ದೇವೆ ಎಂದು ತಿಳಿಸಿದರು.
ಶಿರಾಡಿಘಾಟ್ ಕಾಮಗಾರಿ ವಿಚಾರವಾಗಿ ಮಾತನಾಡಿದ ಅವರು ಫಾರೆಸ್ಟ್ ಮಿನಿಸ್ಟರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲರೂ ಭೇಟಿಯಾಗಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಕೂಡ ಚರ್ಚೆಯಾಗಿದೆ. 15,000ಕೋಟಿ ವೆಚ್ಚದಲ್ಲಿ ಟನಲ್ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಯುದ್ದೋಪಾದಿಯ ರೀತಿ ಅದರ ಕಾಮಗಾರಿ ಮಾಡಿ ಶೀಘ್ರವೇ ಮುಕ್ತ ಮಾಡುತ್ತೇವೆ. ನಿನ್ನೆ ಕರ್ನಾಟಕ ಸಿಎಂ ಬೊಮ್ಮಾಯಿ ಜೊತೆ ದೀರ್ಘ ಸಭೆ ಮಾಡಿದ್ದೇನೆ. ಗ್ರೀನ್ ಫೀಲ್ಡ್ ಕಾರಿಡಾರ್ ನಿರ್ಮಾಣಕ್ಕೆ ನಿರ್ಧಾರ ಆಗಿದೆ. ಕರ್ನಾಟಕ – ತಮಿಳುನಾಡು ಅಂತರ್ ರಾಜ್ಯ ಸಂಪರ್ಕಕ್ಕೆ, 260 ಕಿ.ಮೀ ಉದ್ದದ ಗ್ರೀನ್ ಫೀಲ್ಡ್ ಕಾರಿಡಾರ್, ಬೆಂಗಳೂರು – ಕಡಪ – ವಿಜಯವಾಡ ಹೈವೇ ನಿರ್ಮಾಣಕ್ಕೂ ತೀರ್ಮಾನ ಕೈಗೊಳ್ಳಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ನಡೀತಿದೆ. 288 ಕಿ.ಮೀ ಉದ್ದದ ಸ್ಯಾಟಲೈಟ್ ರಿಂಗ್ ರೋಡ್ ನಿರ್ಮಾಣ ಮಾಡಲಿದ್ದೇವೆ. ಮಂಗಳೂರು – ಬಾಂಬೆ ಕನೆಕ್ಟಿವಿಟಿ ಹೈವೇ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಮಂಥನ ಅನ್ನೋದು ಸಾರಿಗೆ ಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ. ಕಳೆದ ಎರಡು ಮೂರು ವರ್ಷದಲ್ಲಿ ಪ್ರತೀ ರಾಜ್ಯದ ಎಲ್ಲಾ ಸಾರಿಗೆ ಸಚಿವರ ಜೊತೆ ಚರ್ಚೆ ಮಾಡಿ ಜಾರಿಗೆ ತಂದಿದ್ದೇವೆ. ಆರು ರಾಜ್ಯಗಳು ಈ ಮಂಥನ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದಿವೆ. ಉಳಿದ ರಾಜ್ಯಗಳು ಶೇ.50 ರಷ್ಟು ಅಳವಡಿಸಿಕೊಂಡಿವೆ. ಮಂಥನ್ ಜಾರಿಗೆ ತರುವ ಮೊದಲು ಉನ್ನತ ಮಟ್ಟದ ಸಭೆ ಮಾಡಲಾಗಿತ್ತು. ಟ್ರಾನ್ಸ್‌ಪೋರ್ಟ್, ಆರ್.ಟಿ.ಓ ಅಧಿಕಾರಿಗಳು, ರಾಜ್ಯ ಸರ್ಕಾರ ಕೆಲ ಅಧಿಕಾರಿಗಳು ಭಾಗಿಯಾಗಿದ್ದರು ಮಾಹಿತಿ ನೀಡಿದರು.
ಅಧಿಕಾರಿಗಳ ಸಮಾವೇಶ ನಡೆಸಿದ್ದು ಅಲ್ಲಿ ಡ್ರೋನ್ ಸರ್ವೆ, ಪಿಪಿಟಿ ಎಲ್ಲವೂ ಮಾಡಲಾಗಿತ್ತು. ಹತ್ತು ಮಹತ್ವದ ವಿಚಾರಗಳನ್ನ ಅಪ್ ಲೋಡ್ ಮಾಡಲಾಗಿದೆ. ಕರ್ನಾಟಕದ ಸಮಸ್ಯೆ ಈಗ ಬಂದಿದೆ. ಸಿಎಂ ಬೊಮ್ಮಾಯಿ ಅವರು ಭೇಟಿಯಾಗಿದ್ದಾರೆ. ಬೆಂಗಳೂರು ಟ್ರಾಫಿಕ್ ಬಗ್ಗೆ ಕೂಡ ಚರ್ಚೆಯಾಗಿದೆ. ಬೆಂಗಳೂರು ರಸ್ತೆ ಬಗ್ಗೆ ನಮ್ಮ ಡಿಪಾರ್ಟ್‌ಮೆಂಟ್ ಚರ್ಚೆ ಮಾಡಿದೆ. ಬೆಂಗಳೂರು ಚೆನೈ ಕಾರಿಡಾರ್ ಬಗ್ಗೆ ಚರ್ಚೆಯಾಗಿದೆ. ದೇಶದ ಉತ್ತರ ಹಾಗೂ ದಕ್ಷಿಣ ಸಂಚಾರ ದಟ್ಟಣೆ ಕಡಿಮೆ ಮಾಡಲು ಕಾರಿಡಾರ್ ಹೈವೆ ಮಾಡಲಾಗುತ್ತಿದೆ ಎಂದು ಮಾತನಾಡಿದರು.
ಬೆಂಗಳೂರು ಸ್ಯಾಟಲೈಟ್ ಕಾರಿಡಾರ್ ಮಾಡಲಾಗಿದೆ. 16 ಸಾವಿರ ಕೋಟಿ ಇದಕ್ಕಾಗಿ ಖರ್ಚಾಗುತ್ತಿದೆ. ಮುಂಬೈ, ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಮಾಡಲಾಗುತ್ತಿದೆ. ಮುಂಬೈನಿಂದ ಬೆಂಗಳೂರಿಗೆ ಬರಲು ಆರು ಗಂಟೆ ಪ್ರಯಾಣ ಸಮಯ ಆಗಲಿದೆ. ಚೆನೈ-ಬೆಂಗಳೂರು, ಮುಂಬೈ-ಪುಣೆ, ಹೈವೆಗಳು ಕೂಡ ನಿರ್ಮಾಣ ಆಗುತ್ತಿದೆ. ಬೆಂಗಳೂರಿನ ಟ್ರಾಫಿಕ್ ಕನ್ಜೆಕ್ಷನ್ ಬಗ್ಗೆ ಅಧ್ಯಯನ ಮಾಡಲಾಗಿದೆ. ತುಮಕೂರು ರಸ್ತೆಯಲ್ಲಿ, ರಸ್ತೆ, ಮೆಟ್ರೋ, ಫ್ಲೈ ಓವರ್ ಮೂರು ಮಾದರಿಗಳನ್ನು ಬೇರೆ ಕಡೆ ಅಳವಡಿಸಿಕೊಳ್ಳುವಂತೆ ಮಾಡಲಾಗುವುದು ಎಂದು ನುಡಿದರು.
ಬೆಂಗಳೂರಿನಲ್ಲಿ ರಿಂಗ್ ರೋಡ್ ಮಾಡಲಾಗುತ್ತಿದೆ. ಬೇರೆ ಬೇರೆ ಮಾರ್ಗಗಳಿಗೆ ರಿಂಗ್ ರೋಡ್ ಬೇರೆ ರಾಜ್ಯಗಳಿಗೂ ಸಂಪರ್ಕ ಕಲ್ಪಿಸಲಾಗುತ್ತಿದೆ. ಈಗಾಗಲೇ ಮೈಸೂರು ರಸ್ತೆ ಕೂಡ ನಿರ್ಮಾಣ ಹಂತದಲ್ಲಿದೆ. ಪಬ್ಲಿಕ್ ಮಾಸ್ ಟ್ರಾನ್ಸ್‌ಪೋರ್ಟ್, ಪಿಲಿಪೈನ್ಸ್ ನಲ್ಲಿರೋ ಸ್ಕೈ ಬಸ್ ಮಾದರಿಯನ್ನ, ವಿಶ್ವದ ತಜ್ಞರ ಜೊತೆ ಚರ್ಚೆ ಮಾಡಿ ಬೆಂಗಳೂರಿನಲ್ಲಿ ಪೈಲೆಟ್ ಪ್ರಾಜೆಕ್ಟ್ ಮಾಡಲು ಚಿಂತನೆ ಮಾಡಲಾಗಿದೆ. ಯಶಸ್ವಿಯಾದರೆ, ಅದನ್ನು ಅಳವಡಿಸಿಕೊಳ್ಳಬಹುದು ಎಂದು ಸೂಚಿಸಿದರು.
ಒಂದು ಮನೆಯಲ್ಲಿ ನಾಲ್ಕು ಜನ ಇದ್ರೂ ಆರು ಗಾಡಿಗಳಿವೆ. ಪಾರ್ಕಿಂಗ್ ಸಮಸ್ಯೆ ಇರುತ್ತೆ. ಟ್ರಾಲಿ ಬಸ್ ಪ್ರಾಜೆಕ್ಟ್ ಕೂಡ ಇದೆ. ಜನ ಟಿಕೆಟ್ ಬುಕ್ ಮಾಡಿ, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿಕೊಂಡು ಹೋಗಬಹುದು. ಪೆಟ್ರೋಲ್ ಗಾಡಿಯಲ್ಲಿ ಹೋದ್ರೆ 7ರೂ, ಡಿಸಲ್ ಗಾಡಿಯಲ್ಲಿ ಹೋದ್ರೆ 5ರೂ, ಬ್ಯಾಟರಿ ಗಾಡಿಯಲ್ಲಿ ಹೋದ್ರೆ 1ರೂ ವೆಚ್ಚ ತಗುಲಲಿದೆ. ಬ್ಯಾಟರಿ ಕಾರ್ ಬಳಸಿದರೆ ಪೆಟ್ರೋಲ್ ದರ ಕೂಡ ಕಡಿಮೆಯಾಗಲಿದೆ. ಲಿಥಿಯಂ, ಎತೆನಾಲ್ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಕರ್ನಾಟಕ ಕಬ್ಬು ಹೆಚ್ಚು ಬೆಳೆಯುತ್ತಿದ್ದಾರೆ, ಅದರಿಂದ ಎಥನಾಲ್ ಬಳಸಬಹುದು. ಎಥೆನಾಲ್ನ್ನು ಎಲ್ಲಾ ವಾಹನಗಳಿಗೆ ಬಳಸಿಕೊಳ್ಳುವ ಮೂಲಕ ಪೆಟ್ರೋಲ್ ಕಡಿಮೆ ಬಳಕೆ ಮಾಡಬೇಕಿದೆ. ಎಲೆಕ್ಟ್ರಿಕ್ ವಾಹನಗಳನ್ನ ಹೆಚ್ಚು ಬಳಸಬೇಕಿದೆ. ಇದರಿಂದ ಪೊಲ್ಯೂಷನ್ ಹಾಗೂ ಟ್ರಾಫಿಕ್ ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.
ಬೆಂಗಳೂರು ವಿಕಾಸಕ್ಕೆ ಸಿಎಂಗೆ ಸೂಚನೆ ನೀಡಿದ್ದೇನೆ. ಎಲ್ಲರೂ ಸೇರಿ ಬೆಂಗಳೂರು ಬೆಳವಣಿಗೆ ಮಾಡಬೇಕಿದೆ. ಬೆಂಗಳೂರು ಬಹಳ ದೊಡ್ಡ ಎಕನಾಮಿಕ್ ಸೆಂಟರ್ ಆಗಿದೆ. ವಿಶ್ವದ ಬಹಳಷ್ಟು ಸಂಸ್ಥೆಗಳು ಇಲ್ಲಿ ಕೆಲಸ ಮಾಡುತ್ತಿವೆ. ಹಾಗಾಗಿ ನಾವು ಬೆಂಗಳೂರನ್ನು ಪ್ರಮುಖವಾಗಿ ಗಮನ ಹರಿಸುತ್ತಿದ್ದೇವೆ. ತುಮಕೂರು ಪ್ಲೈಓವರ್ ನಲ್ಲಿ ಸಮಸ್ಯೆ ಇದೆ. ಗುತ್ತಿಗೆದಾರ ಸಮಸ್ಯೆ ಇದೆ. ಈ ಸಮಸ್ಯೆ ಬಗೆಹರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡು ತಿಂಗಳಲ್ಲಿ ಪೂರ್ಣ ಸಮಸ್ಯೆ ಬಗೆಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೀಟ್ ಬೆಲ್ಟ್ ಕಡ್ಡಾಯ ಹಾಗೂ ಏರ್ ಬ್ಯಾಗ್ ವಿಚಾರವಾಗಿ ಮಾತನಾಡಿದ ಅವರು ಸೀಟ್ ಬೆಲ್ಟ್ ಬಳಕೆ ಇಂದ ಶೇ.50ರಷ್ಟು ಸಾವನ್ನಪ್ಪುವವರ ಸಂಖ್ಯೆ ಕಡಿಮೆ ಆಗಿದೆ. ಮುಂಬೈ, ಪೂಣೆ ಹೈವೆಯಲ್ಲಿ ಮಾಡೆಲ್ ಮಾಡಲಾಗಿದೆ. ಅಮಿತಾ ಬಚ್ಚನ್, ಅಕ್ಷಯ್ ಕುಮಾರ್, ಕ್ರಿಕೆಟರ್‌ಗಳು ಉಚಿತವಾಗಿ ಜಾಹೀರಾತು ನೀಡಿದ್ದಾರೆ. ರಸ್ತೆ ಸುರಕ್ಷತೆಗೆ ಎಲ್ಲರೂ ಕೈ ಜೋಡಿಸಬೇಕು. ಸೀಟ್ ಬೆಲ್ಟ್ ಮುಂದೆ, ಹಿಂದೆ ಅಂತಲ್ಲ, ಎಲ್ಲರೂ ಸೀಟ್ ಬೆಲ್ಟ್ ಹಾಕಿದರೆ ಸುರಕ್ಷಿತವಾಗಿರಲಿದ್ದಾರೆ ಎಂದು ವಿನಂತಿಸಿದ್ದಾರೆ.
ರಾಜ್ಯ ಸರ್ಆಕರದ 40% ಕಮಿಷನ್ ಆರೋಪ ವಿಚಾರವಾಗಿ ಮಾತನಾಡಿದ ಅವರು ರಾಜಕೀಯ ದುಡಿಯುವ ಮಾರ್ಗ ಅಲ್ಲ. ರಾಜ್ಯ ಸರ್ಕಾರದ ಬಗ್ಗೆ ಯಾವುದೇ ಹೇಳಿಕೆ ನೀಡಲ್ಲ. ಆದರೆ ಹೆದ್ದಾರಿ ಗುತ್ತಿಗೆಯಲ್ಲಿ ಒಂದು ಭ್ರಷ್ಟಾಚಾರ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Fri, 9 September 22