Bangalore Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಪವರ್ ಕಟ್
Bengaluru News: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಬೆಳಿಗ್ಗೆ 10ರಿಂದ 4ರವರೆಗೆ ಪವರ್ ಕಟ್ ಇರಲಿದೆ. ಇಂದು (ಬುಧವಾರ) ಕನಕಪುರ, ಹೆಚ್ಎಸ್ಆರ್ ಲೇಔಟ್ನಲ್ಲಿ ಪವರ್ ಕಟ್ ಇರಲಿದೆ.
ಬೆಂಗಳೂರು: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು (ಬುಧವಾರ) ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಳೆದೊಂದು ವಾರದಿಂದ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗುತ್ತಲೇ ಇದೆ. ಇನ್ನೆರಡು ದಿನ ಪೈಪ್ ಹಾಕುವುದು, ಜಲಶ್ರೀ ನೀರು ಸರಬರಾಜು ಕೆಲಸ, ಇಂಟರ್‌ಲಿಂಕಿಂಗ್, ತ್ರೈಮಾಸಿಕ ನಿರ್ವಹಣೆ ಕೆಲಸಗಳಿಂದಾಗಿ ಪವರ್ ಕಟ್ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಬೆಳಿಗ್ಗೆ 10ರಿಂದ 4ರವರೆಗೆ ಪವರ್ ಕಟ್ ಇರಲಿದೆ. ಇಂದು (ಬುಧವಾರ) ಕನಕಪುರ, ಹೆಚ್ಎಸ್ಆರ್ ಲೇಔಟ್ನಲ್ಲಿ ಪವರ್ ಕಟ್ ಇರಲಿದೆ. ಹಾಗೇ, ಎಸ್ ಎಸ್ ಲೇಔಟ್ ಎ ಬ್ಲಾಕ್, ಎಂಬಿಎ ಕಾಲೇಜು ರಸ್ತೆ, ಅಥಣಿ ಕಾಲೇಜು, ಆಫೀಸರ್ಸ್ ಕ್ಲಬ್ ಮತ್ತು ಬಸವನಗುಡಿ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ.
ಇದನ್ನೂ ಓದಿ: Bangalore Power Cut: ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್, ಕೋರಮಂಗಲ ಮುಂತಾದೆಡೆ ಇನ್ನೆರಡು ದಿನ ಪವರ್ ಕಟ್
ಹಾಗೇ, ಸೋಮನಹಳ್ಳಿ ಮತ್ತು ಟಿ.ಕೆ.ಹಳ್ಳಿಯ ಕೆಲವು ಪ್ರದೇಶಗಳು, ವಿಶ್ವಪ್ರಿಯ ಲೇಔಟ್, ಬೇಗೂರು ಕೊಪ್ಪ ರಸ್ತೆ, ದೇವರಚಿಕ್ಕನಹಳ್ಳಿ, ಅಕ್ಷಯನಗರ, ದಕ್ಷಿಣದ ಪ್ರತಿಷ್ಠಿತ ಹಾಡು, ತೇಜಸ್ವಿನಿ ನಗರ. ಅಪಾರ್ಟ್ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.