ಬೆಂಗಳೂರಿನ ಬಿಇಎಂಎಲ್​ ಘಟಕಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ: ಮೆಟ್ರೋ ಬೋಗಿಗಳ ಪರಿಶೀಲನೆ​​​

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನ ಬಿಇಎಂಎಲ್ ಘಟಕಕ್ಕೆ ಭೇಟಿ ನೀಡಿ, ಮೆಟ್ರೋ ಬೋಗಿಗಳನ್ನು ಪರಿಶೀಲಿಸಿದರು. ಬಿಇಎಂಎಲ್ ಕಾಳೇನ ಅಗ್ರಹಾರ-ನಾಗವಾರ ಪಿಂಕ್ ಲೈನ್‌ಗಾಗಿ ಚಾಲಕರಹಿತ ಕೋಚ್‌ಗಳನ್ನು ನಿರ್ಮಿಸುತ್ತಿದೆ. ಸಚಿವರು ಅಧಿಕಾರಿಗಳಿಂದ ಕಾರ್ಯಪ್ರಗತಿ ಮಾಹಿತಿ ಪಡೆದರು. ಜೊತೆಗೆ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.

ಬೆಂಗಳೂರಿನ ಬಿಇಎಂಎಲ್​ ಘಟಕಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಭೇಟಿ: ಮೆಟ್ರೋ ಬೋಗಿಗಳ ಪರಿಶೀಲನೆ​​​
ಬಿಇಎಂಎಲ್​ ಘಟಕಕ್ಕೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ
Image Credit source: pib twitter
Edited By:

Updated on: Apr 25, 2026 | 3:21 PM

ಬೆಂಗಳೂರು, ಏಪ್ರಿಲ್​ 25: ನಗರದ ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಘಟಕಕ್ಕೆ ಕೇಂದ್ರ ರೈಲ್ವೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw)  ಶನಿವಾರ ಭೇಟಿ ನೀಡಿದರು. ಅಲ್ಲಿ ಉತ್ಪಾದನೆಗೊಳ್ಳುತ್ತಿರುವ ಮೆಟ್ರೋ ಬೋಗಿಗಳನ್ನು ಪರಿಶೀಲಿಸಿದ ಸಚಿವರು, ಅಧಿಕಾರಿಗಳಿಂದ ಕಾರ್ಯಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು. ಜೊತೆಗೆ ಬಿಇಎಂಎಲ್​​ನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಬಿಇಎಂಎಲ್​ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ‌ಲೈನ್ ಮಾರ್ಗಕ್ಕಾಗಿ ಬಿಇಎಂಎಲ್​ ಚಾಲಕ ರಹಿತ ಎಂಜಿನ್​​​ ರೈಲು ಕೋಚ್​ಗಳನ್ನು ನಿರ್ಮಿಸುತ್ತಿದೆ. ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ‌ಲೈನ್ ಮಾರ್ಗದ 6 ಮೆಟ್ರೋ ಸ್ಟೇಷನ್​​ಗಳನ್ನು, ಮೇನಲ್ಲಿ ಓಪನ್ ಮಾಡಲು ಬಿಎಂಆರ್​​ಸಿಎಲ್​​ ತಯಾರಿ ನಡೆಸಿದೆ. ಆದರೆ ಟೆಸ್ಟಿಂಗ್ ಕೆಲಸ ಪೂರ್ಣಗೊಳ್ಳದ ಹಿನ್ನೆಲೆ, ಓಪನ್ ‌ಆಗುವುದು ಡೌಟ್ ಎನ್ನಲಾಗುತ್ತಿದೆ.

PIB ಟ್ವಿಟ್​​

ಜೂನ್ ಅಥವಾ ಜುಲೈನಲ್ಲಿ ಈ ಮಾರ್ಗ ಓಪನ್ ಆಗಲಿದೆ ಎನ್ನಲಾಗುತ್ತಿದೆ. ಪ್ರತಿ ಮಾರ್ಗ ಓಪನ್ ಮಾಡುವ ವೇಳೆ ರೈಲು ಇರುತ್ತಿರಲಿಲ್ಲ, ಆದರೆ ಈ ಬಾರಿ ಪಿಂಕ್ ಲೈನ್​​ಗಾಗಿ ಈಗಾಗಲೇ ಬಿಇಎಂಎಲ್​​ನಿಂದ 5 ರೈಲುಗಳು ಬಂದಿದ್ದರು, ಈ ಬಾರಿ ಟೆಸ್ಟಿಂಗ್ ಕೆಲಸ ಮುಗಿಯದ ಹಿನ್ನೆಲೆ, ಮೆಟ್ರೋ ವಿಳಂಬ ಆಗುತ್ತಿದೆ. ಪಿಂಕ್‌ ಲೈನ್​ಗಾಗಿ ಒಟ್ಟು ಬಿಇಎಂಎಲ್​​ನಲ್ಲಿ 23 ರೈಲುಗಳಿಗೆ ಆರ್ಡರ್ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು ಖಾಸಗಿ ಕಂಪನಿ ವಿಭಿನ್ನ ಪ್ಲಾನ್: ಮೆಟ್ರೋ ಬಳಸುವ ಉದ್ಯೋಗಿಗಳಿಗೆ ಸಿಗಲಿದೆ ತಿಂಗಳಿಗೆ 2,000 ರೂ!

ಕಾಳೇನ ಅಗ್ರಹಾರ ಟು ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿರುವ ಪಿಂಕ್ ಲೈನ್ 21.25 ಕಿಮೀ ವಿಸ್ತೀರ್ಣ, 18 ಮೆಟ್ರೋ ಸ್ಟೇಷನ್​​ಗಳನ್ನು ಹೊಂದಿದೆ. 12 ಅಂಡರ್ ಗ್ರೌಂಡ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್​​ಗಳಿವೆ. ಉಳಿದ 13.76. ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಕ್ತಾಯದ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್​ ಆಗಲಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us