AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಪಿಯುಸಿ ಅಂಕಪಟ್ಟಿ ನೀಡಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆದಿದ್ದ ನಾಲ್ವರಿಗೆ ಶಾಕ್​​: 2 ವರ್ಷ ಜೈಲು ಶಿಕ್ಷೆ

ನಕಲಿ ದ್ವಿತೀಯ ಪಿಯುಸಿ (II PUC) ಅಂಕಪಟ್ಟಿಗಳನ್ನು ಸಲ್ಲಿಸಿ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿ (VA) ಹುದ್ದೆ ಗಿಟ್ಟಿಸಿಕೊಂಡಿದ್ದ ನಾಲ್ವರು ವಂಚಕರಿಗೆ ಬೆಳಗಾವಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ನೇಮಕಾತಿಯ ನಂತರ ದಾಖಲೆಗಳ ಪರಿಶೀಲನೆ ವೇಳೆ ಅಂಕಪಟ್ಟಿಗಳು ನಕಲಿಯಾಗಿರುವುದು ಪತ್ತೆಯಾಗಿತ್ತು. ಇದರಿಂದಾಗಿ ಅಂದಿನ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಕಲಿ ಪಿಯುಸಿ ಅಂಕಪಟ್ಟಿ ನೀಡಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆದಿದ್ದ ನಾಲ್ವರಿಗೆ ಶಾಕ್​​: 2 ವರ್ಷ ಜೈಲು ಶಿಕ್ಷೆ
ನಕಲಿ ಪಿಯುಸಿ ಅಂಕಪಟ್ಟಿ ನೀಡಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆದಿದ್ದ ನಾಲ್ವರಿಗೆ ಶಾಕ್
ಪ್ರಸನ್ನ ಹೆಗಡೆ
|

Updated on: Aug 03, 2026 | 5:35 PM

Share

ಬೆಳಗಾವಿ, ಆಗಸ್ಟ್​​ 03: ನಕಲಿ ದ್ವಿತೀಯ ಪಿಯುಸಿ (II PUC) ಅಂಕಪಟ್ಟಿಗಳನ್ನು ಸಲ್ಲಿಸಿ ಗ್ರಾಮ ಆಡಳಿತಾಧಿಕಾರಿ (Village Accountant) ಹುದ್ದೆ ಪಡೆದಿದ್ದ ನಾಲ್ವರಿಗೆ ಬೆಳಗಾವಿಯ ಎರಡನೇ ಜೆಎಂಎಫ್‌ಸಿ (JMFC) ನ್ಯಾಯಾಲಯವು ತಲಾ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ 19 ಸಾವಿರ ರೂಪಾಯಿ ದಂಡ ವಿಧಿಸಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಅನೆಹಳ್ಳಿ ಗ್ರಾಮದ ರಾಜು ವೆಂಕಟೇಶಪ್ಪ ಟಿ., ಕುನ್ನಿಬಂಡಿ ಗ್ರಾಮದ ಮೋಹನ್‌ಕುಮಾರ್ ಚಂದ್ರಪ್ಪ, ಮದ್ದೇರಿ ಗ್ರಾಮದ ಮಂಜುನಾಥ ಬೈಚಪ್ಪ ಹಾಗೂ ಅನೆಹಳ್ಳಿ ಗ್ರಾಮದ ಬಾಲಕೃಷ್ಣ ವೆಂಕಟಪ್ಪ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.

ಪ್ರಕರಣದ ಹಿನ್ನೆಲೆ

2012ರ ಸೆಪ್ಟೆಂಬರ್ 6ರಂದು ಬೆಳಗಾವಿ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಖಾಲಿ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದ್ದರು. ಈ ವೇಳೆ ಆರೋಪಿಗಳು ಬೆಂಗಳೂರಿನ ಅಪರಿಚಿತ ವ್ಯಕ್ತಿಯೊಬ್ಬರಿಂದ ನಕಲಿ ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ಪಡೆದು, ಅದರಲ್ಲಿ ಹೆಚ್ಚಿನ ಅಂಕಗಳನ್ನು ತೋರಿಸಿ ಮೆರಿಟ್ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದು ಗ್ರಾಮ ಆಡಳಿತಾಧಿಕಾರಿಗಳಾಗಿ ನೇಮಕಗೊಂಡಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಚಾಮರಾಜಪೇಟೆ ಪೊಲೀಸ್ ಠಾಣೆ ಬಳಿಯೇ ಕೊಕೇನ್ ಡೆಲಿವರಿ ದಂಧೆ! 50 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ

ದಾಖಲೆ ಪರಿಶೀಲನೆಯಲ್ಲಿ ಬಯಲಾದ ವಂಚನೆ

ನೇಮಕಾತಿಯ ನಂತರ ದಾಖಲೆಗಳ ಪರಿಶೀಲನೆ ವೇಳೆ ಅಂಕಪಟ್ಟಿಗಳು ನಕಲಿಯಾಗಿರುವುದು ಪತ್ತೆಯಾಗಿತ್ತು. ಇದರಿಂದಾಗಿ ಅಂದಿನ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಆರೋಪಿಗಳು ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಬಳಸಿ ಸರ್ಕಾರಿ ಉದ್ಯೋಗ ಪಡೆದಿರುವುದು ದೃಢಪಟ್ಟಿತು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬೆಳಗಾವಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ನಾಲ್ವರನ್ನು ದೋಷಿಗಳೆಂದು ತೀರ್ಪು ನೀಡಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಮಗನಿಗೆ ಸಚಿವ ಸ್ಥಾನ ಸಿಕ್ಕಿದ ಖುಷಿಗೆ ಕಣ್ಣೀರಿಟ್ಟ ತಾಯಿ
ಮಗನಿಗೆ ಸಚಿವ ಸ್ಥಾನ ಸಿಕ್ಕಿದ ಖುಷಿಗೆ ಕಣ್ಣೀರಿಟ್ಟ ತಾಯಿ
‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಶಿವಲಿಂಗೇಗೌಡ
‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಶಿವಲಿಂಗೇಗೌಡ
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ