Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ತೆರಿಗೆ ಕಟ್ಟುವಂತೆ ಮೊಬೈಲ್​ಗೆ ಸಂದೇಶ: ಇದು ಸೈಬರ್ ಕ್ರೈಂ ಅಲ್ಲ ಎಂದು ಸ್ಪಷ್ಟಪಡಿಸಿದ ಬಿಬಿಎಂಪಿ

ಕೆಲ ದಿನಗಳ ಹಿಂದೆ ಕೆಲ ಬೆಂಗಳೂರಿನ ಜನರ ಮೊಬೈಲ್​ಗಳಿಗೆ ಬಿಬಿಎಂಪಿಯಿಂದ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಮೆಸೇಜ್​ ಬಂದಿತ್ತು. ಇದು ಸೈಬರ್ ಕ್ರೈಂ ಇರಬಹುದು ಎಂದು ಜನ ನಿರ್ಲಕ್ಷ್ಯ ಮಾಡಿದ್ದರು. ಸದ್ಯ ಈ ಬಗ್ಗೆ ಬಿಬಿಎಂಪಿ ಸ್ಪಷ್ಟನೆ ನೀಡಿದೆ. ಈ ಸಂದೇಶ ಪಾಲಿಕೆಯಿಂದ ಕಳಿಸಲಾಗಿದ್ದು ಆಸ್ತಿ ತೆರಿಗೆ ಪಾವತಿಸಿ ಎಂದು ಬಿಬಿಎಂಪಿಯ ಅಧಿಕಾರಿ ಮನವಿ ಮಾಡಿದ್ದಾರೆ.

ಆಸ್ತಿ ತೆರಿಗೆ ಕಟ್ಟುವಂತೆ ಮೊಬೈಲ್​ಗೆ ಸಂದೇಶ: ಇದು ಸೈಬರ್ ಕ್ರೈಂ ಅಲ್ಲ ಎಂದು ಸ್ಪಷ್ಟಪಡಿಸಿದ ಬಿಬಿಎಂಪಿ
ಬಿಬಿಎಂಪಿ
Follow us
ಆಯೇಷಾ ಬಾನು
|

Updated on: Nov 07, 2023 | 11:48 AM

ಬೆಂಗಳೂರು, ನ.07: ಕಳೆದ ವಾರ, ಬೆಂಗಳೂರಿನ ಅನೇಕ ಮಂದಿಗೆ ಆಸ್ತಿ ತೆರಿಗೆ (Property Tax) ಪಾವತಿಸುವಂತೆ ಬಿಬಿಎಂಪಿಯಿಂದ ಎಸ್‌ಎಂಎಸ್ ಬಂದಿತ್ತು. ಇದನ್ನು ಗಮನಿಸಿದ ಜನ ಇದು ಸೈಬರ್ ಕ್ರೈಂ ಇರಬೇಕು ಎಂದು ಸುಮ್ಮನಾಗಿದ್ದರೂ ಇನ್ನೂ ಕೆಲವರು ದೂರು ದಾಖಲಿಸಲು ಮುಂದಾಗಿದ್ದರು. ಆದರೆ ಈಗ ಈ ಮೆಸೇಜ್ ಬಗ್ಗೆ ಬಿಬಿಎಂಪಿ ಸ್ಪಷ್ಟನೆ ನೀಡಿದ್ದು ಈ ಎಸ್​ಎಂಎಸ್​ ಸುಳ್ಳಲ್ಲ. ಇದು ಬಿಬಿಎಂಪಿಯ (BBMP) ಅಧಿಕೃತ ಸಂದೇಶ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಬಿಬಿಎಂಪಿ ಕಳಿಸಿದ ಮೆಸೇಜ್ ಹೀಗಿದೆ

ಆಸ್ತಿ ತೆರಿಗೆಯು BBMP ಯ ಆದಾಯದ ಪ್ರಾಥಮಿಕ ಮೂಲವಾಗಿದೆ. ಮತ್ತು BBMP ಯ ಕಾರ್ಯನಿರ್ವಹಣೆ ಮತ್ತು ಅದರ ಸೇವೆ ವಿತರಣೆಗೆ ನಿರ್ಣಾಯಕವಾಗಿದೆ. ಎಲ್ಲಾ ಮಾಲೀಕರು ತಮ್ಮ ಆಸ್ತಿ ತೆರಿಗೆಯನ್ನು ತ್ವರಿತವಾಗಿ ಪಾವತಿಸಲು ನಾವು ವಿನಂತಿಸುತ್ತೇವೆ. ಇದನ್ನು ಸುಗಮಗೊಳಿಸಲು ಬಿಬಿಎಂಪಿಯು ಬಾಕಿ ಇರುವ ಅಥವಾ ಮಿತಿಮೀರಿದ ಆಸ್ತಿ ತೆರಿಗೆ ಹೊಂದಿರುವ ವ್ಯಕ್ತಿಗಳಿಗೆ SMS ಸಂದೇಶಗಳನ್ನು ಮತ್ತು ನೋಟಿಸ್‌ಗಳನ್ನು ಕಳುಹಿಸುತ್ತಿದೆ ಎಂದು ಬಿಬಿಎಂಪಿ ಮೆಸೇಜ್​ನಲ್ಲಿ ತಿಳಿಸಿದೆ.

ಇನ್ನು ಸಾರ್ವಜನಿಕರು ತೆರಿಗೆ ಪಾವತಿಸುವಂತೆ ಬಿಬಿಎಂಪಿ ಮನವಿ ಮಾಡಿದೆ. ನಾಗರಿಕರು ಆನ್‌ಲೈನ್‌ನಲ್ಲಿ https://bbmptax.karnataka.gov.in/ ತೆರಿಗೆ ಪಾವತಿಸಬಹುದು. ಯಾವುದೇ ಪ್ರಶ್ನೆಗಳಿದ್ದಲ್ಲಿ, ಸಹಾಯವಾಣಿ 1533 ಗೆ ಕರೆ ಮಾಡಬಹುದು ಎಂದು ಪಾಲಿಕೆ ತಿಳಿಸಿದೆ.

ಇದನ್ನೂ ಓದಿ: ನಿಮ್ಮ ಬಳಿ ಸೈಟ್ ಇದೆಯಾ? ಅದನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ವಾ, ಹಾಗಾದ್ರೆ ಬಿಬಿಎಂಪಿಯಿಂದ ದಂಡ ಫಿಕ್ಸ್

ಸೈಟ್ ಖರೀದಿಸಿ ನಿರ್ವಹಣೆ ಮಾಡದಿದ್ರೆ ಬಿಬಿಎಂಪಿಯಿಂದ ದಂಡ ಫಿಕ್ಸ್

ಹೆಚ್​ಎಸ್​ಆರ್ ಲೇಔಟ್​ನ ಖಾಲಿ ಜಾಗದಲ್ಲಿ ಚಿರತೆ ಪತ್ತೆಯಾಗಿತ್ತು. ಆದರೆ ಖಾಲಿ ನಿವೇಷನ ಜಾಗದಲ್ಲಿ ಗಿಡ ಗಂಟಿಗಳು ಬೆಳೆದು ಕೊಂಡಿದ್ದು ಚಿರತೆಯನ್ನ ಹಿಡಿಯುದಕ್ಕೆ ಅರಣ್ಯ ಅಧಿಕಾರಿಗಳು ಹರಸಾಹಸ ಪಡಬೇಕಾಯ್ತು.‌ ಅಲ್ಲದೇ ಇತ್ತೀಚಿಗೆ ಬಫರ್ ವಲಯಗಳಲ್ಲಿನ ಹಲವಾರು ಖಾಲಿ ನಿವೇಶನಗಳಲ್ಲಿ ಅಧಿಕೃತ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ.‌ ಹೀಗಾಗಿ ಇವುಗಳಿಗೆ ಬ್ರೇಕ್ ಹಾಕುವ ಜೊತೆಗೆ ಖಾಲಿ ಜಾಗದಲ್ಲಿ ಪೊದೆ ಬೆಳೆಯಲು ಬಿಟ್ರೆ ಇನ್ಮುಂದೆ ದಂಡ ವಿಧಿಸೋಕೆ ಬಿಬಿಎಂಪಿ ಮುಂದಾಗಿದೆ. ಇನ್ಮುಂದೆ ಯಾವುದೇ ಖಾಲಿ ಸೈಟುಗಳ ನಿರ್ವಹಣೆ ಮಾಡದೇ ಹಾಗೇ ಬಿಟ್ಟರೆ ಬಿಬಿಎಂಪಿ ದಂಡ ವಿಧಿಸಲಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ