ಗ್ಯಾರಂಟಿಯಿಂದ ಗುತ್ತಿಗೆದಾರಿಗೆ ಆತಂಕ: ಬಾಕಿ ಹಣ ಪಾವತಿಸುವಂತೆ ಬಿಬಿಎಂಪಿಗೆ ಡೆಡ್ ಲೈನ್
ಗ್ಯಾರಂಟಿಯಿಂದ ಗುತ್ತಿಗರದಾರಿಗೆ ಆತಂಕ ಶುರುವಾಗಿದ್ದು, ಬಾಕಿ ಹಣ ಪಾವತಿಸುವಂತೆ ಬಿಬಿಎಂಪಿಗೆ ಬೆಂಗಳೂರು ಗುತ್ತಿಗೆದಾರರ ಸಂಘ ಡೆಡ್ ಲೈನ್ ನೀಡಿದೆ.
ಬೆಂಗಳೂರು: ಸರ್ಕಾರದ ಗ್ಯಾರಂಟಿಯಿಂದ ಗುತ್ತಿಗರದಾರಿಗೆ ಆತಂಕ ಶುರುವಾಗಿದ್ದು, ಜೂನ್ 5ರೊಳಗೆ ಬಾಕಿ ಇರುವ ಸುಮಾರು 2500 ಕೋಟಿ ರೂ. ಬಿಲ್ ಬಾಕಿ ಕ್ಲಿಯರ್ ಮಾಡುವಂತೆ ಬಿಬಿಎಂಪಿಗೆ ಬೆಂಗಳೂರು ಗುತ್ತಿಗೆದಾರರ ಸಂಘ ಡೆಡ್ ಲೈನ್ ನೀಡಿದೆ. ಒಂದು ವೇಳೆ ಬಿಲ್ ಕ್ಲಿಯರ್ ಮಾಡದಿದ್ದಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಎಚರಿಕೆ ನೀಡಿದೆ. ಐದು ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿಯಾದ್ರೆ ಕಾಮಗಾರಿಯ ಬಾಕಿ ಕ್ಲಿಯರ್ ಆಗುತ್ತೋ ಇಲ್ವೊ ಎನ್ನುವ ಆತಂಕ ಶುರುವಾಗಿದೆ. ಹೀಗಾಗಿ ಪಾಲಿಕೆಗೆ ಜೂನ್ 5 ರೊಳಗೆ ಹಣ ಕ್ಲೀಯರ್ ಮಾಡದೇ ಇದ್ದರೆ ಬೆಂಗಳೂರು ವ್ಯಾಪ್ತಿಯಲ್ಲಿ ಎಲ್ಲ ಕಾಮಗಾರಿ ಸ್ಥಗಿತ ಮಾಡುವುದಾಗಿ ಬೆಂಗಳೂರು ಗುತ್ತಿಗೆದಾರರ ಸಂಘ ಎಚ್ಚರಿಸಿದೆ. ಈ ಬಗ್ಗೆ ಬೆಂಗಳೂರು ಗುತ್ತಿಗೆದಾರರ ಸಂಘವು ಬಿಬಿಎಂಪಿ ಆಯುಕ್ತರನ್ನ ಭೇಟಿ ಮಾಡಿ ಬಾಕಿ ಬಿಲ್ ಕ್ಲೀಯರ್ ಮಾಡುವಂತೆ ಮನವಿ ಮಾಡಿದೆ. ಇದೀಗ ಗುತ್ತೆಗೆದಾರರ ಡೆಡ್ ಲೈನ್ ನಿಂದ ಪಾಲಿಕೆಗೆ ಹೊಸ ಟೆನ್ಷನ್ ಶುರುವಾದಂತಾಗಿದೆ.
ಅನ್ನಭಾಗ್ಯ, ಗೃಹಲಕ್ಷ್ಮೀ, ಸೇರಿದಂತೆ ಸರ್ಕಾರ ಐದು ಗ್ಯಾರಂಟಿಗಳ ಜಾರಿಗೆಗೆ ಹಣ ಕ್ರೂಢಿಕರಣಕ್ಕೆ ಮುಂದಾಗಿದೆ. ಫ್ರೀಂ ಸ್ಕೀಂನಿಂದ ಬಾಕಿ ಉಳದಿರುವ ಸಾವಿರಾರು ಕೋಟಿ ರೂ. ಸಮಯಕ್ಕೆ ಸರಿಯಾಗಿ ಸಿಗುತ್ತೋ ಇಲ್ವೋ ಎನ್ನುವ ಟೆನ್ಷನ್ನಲ್ಲಿ ಗುತ್ತಿಗೆದಾರರು ಇದ್ದಾರೆ. ಹೀಗಾಗಿ ಬಾಕಿ ಹಣ ಪಾವತಿ ಮಾಡುವಂತೆ ಬಿಬಿಎಂಪಿಯಲ್ಲಿ ಗುತ್ತಿಗೆದಾರರ ಫೈಟ್ ಶುರುವಾಗಿದೆ.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರ್ತಿದ್ದಂತೆ ಕಳೆದ ಸರ್ಕಾರದ ಕಾಮಗಾರಿ ಹಾಗೂ ಬಿಲ್ ಪಾವತಿಗೆ ಬ್ರೇಕ್ ಹಾಕಿದೆ. ಹೀಗಾಗಿ ಪಾಲಿಕೆಯ ಅನುದಾನದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗೆ ಹಣ ಪಾವತಿ ತಡೆಹಿಡಯಲಾಗಿದೆ. ಕಳೆದ ಎರಡು ವರ್ಷದ ಸುಮಾರು ಎರಡು ಸಾವಿರ ಕೋಟಿ ಬಿಲ್ ಬಾಕಿ ಇದೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿನ 2400 ಕೋಟಿ ರೂ. ಅಧಿಕ ಬಿಲ್ ಪಾವತಿ ಕ್ಲೀಯರ್ ಮಾಡಬೇಕಿದೆ.
ಮೇ 26 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತದಲ್ಲಿ ಪ್ರಾರಂಭಿಸಲಾದ ಯೋಜನೆಗಳನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳ ಹಣ ಪಾವತಿಯಲ್ಲಿ ಮತ್ತಷ್ಟು ವಿಳಂಬಕ್ಕೆ ಕಾರಣವಾಗಿದ್ದು, ಇದು ಗುತ್ತಿಗೆದಾರರ ಸಂಘದ ಅಸಮಾಧಾನಕ್ಕೆ ಕಾರಣವಾಗಿದೆ.