ಸಾಕುಪ್ರಾಣಿ ಪರವಾನಗಿ: ಹೊಸ ಕರಡು ರಚಿಸಿಲು ನಿರ್ಧರಿಸಿದ ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಸದಾಗಿ ಸಾಕುಪ್ರಾಣಿ ಪರವಾನಗಿ ಕರಡು ಅನ್ನು ಸಿದ್ದಪಡಿಸಲು ನಿರ್ಧರಿಸಿದೆ.

ಸಾಕುಪ್ರಾಣಿ ಪರವಾನಗಿ: ಹೊಸ ಕರಡು ರಚಿಸಿಲು ನಿರ್ಧರಿಸಿದ ಬಿಬಿಎಂಪಿ
ಬಿಬಿಎಂಪಿ
Follow us
ವಿವೇಕ ಬಿರಾದಾರ
|

Updated on: Aug 06, 2023 | 2:42 PM

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೊಸದಾಗಿ ಸಾಕುಪ್ರಾಣಿ ಪರವಾನಗಿ ಕರಡು ಅನ್ನು ಸಿದ್ದಪಡಿಸಲು ನಿರ್ಧರಿಸಿದೆ. ಈ ಮೂಲಕ 2021 ರಲ್ಲಿ ರೂಪಗೊಂಡಿದ್ದ ಹಳೆಯ ಕರಡು ರದ್ದುಗೊಳ್ಳಲಿದೆ. 2021ರ ಕರಡನ್ನು ಎರಡು ವರ್ಷಗಳ ಹಿಂದೆಯೇ ಅನುಮೋದನೆ ಮತ್ತು ಅಧಿಸೂಚನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಇದನ್ನು ಅನುಮೋದಿಸಿಲ್ಲ ಎಂದು ಬಿಬಿಎಂಪಿಯ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಕೆ.ಪಿ.ರವಿಕುಮಾರ್ ತಿಳಿಸಿದರು.

ಇನ್ನು ಕರಡಲ್ಲಿ ಉಲ್ಲೇಖಿಸಿರುವ ಕೆಲವು ಷರತ್ತುಗಳನ್ನು ಸರಳಗೊಳಿಸಬೇಕಾಗಿದೆ. ಹೀಗಾಗಿ ಹೊಸ ಕರಡು ರೂಪಿಸಲು ನಿರ್ಧರಿಸಿದ್ದೇವೆ. ನಾಯಿ ಸಾಕಲು ಪಡೆಯಬೇಕಾದ ಪರವಾನಿಗೆಯನ್ನು ಸರಳೀಕರಿಸಿ, ಶೀಘ್ರದಲ್ಲೇ ಅದನ್ನು ಸಿದ್ಧಪಡಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸುತ್ತೇವೆ ಎಂದರು.

ಸದ್ಯ ಅಸ್ತಿತ್ವದಲ್ಲಿರುವ ಕರಡಲ್ಲಿ ಮಾನ್ಯವಾಗಿಲ್ಲದ ಕೆಲವು ಅಂಶಗಳಿವೆ. ಬಿಬಿಎಂಪಿ ಸರ್ಕಾರದ ಸಮಯವನ್ನು ಹಾಳು ಮಾಡುತ್ತಿದೆ, ಕೂಡಲೇ ಹಿಂದಿನ ಕರಡನ್ನು ಹಿಂಪಡೆದು ಹೊಸ ಕರಡು ಸಿದ್ಧಪಡಿಸಬೇಕು ಎಂದು ಪ್ರಾಣಿ ಪ್ರಿಯ ಅರುಣ್ ಪ್ರಸಾದ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಮೇಲೆ ಡಿಕೆ ಶಿವಕುಮಾರ್​ ಮತ್ತಷ್ಟು ಹಿಡಿತ; 2019-2023ರ ನಡುವಿನ ಕಾಮಗಾರಿಗಳ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ಸರ್ಕಾರವು ಖಾಸಗಿ ಕ್ಲಬ್‌ಗಳ ನಿಯಮಗಳನ್ನು ಪರಿಗಣಿಸಬಾರು. ಶಾಸನಬದ್ಧ ಸಂಸ್ಥೆಗಳ ನಿಯಮಗಳನ್ನು ಪರಿಗಣಿಸಬೇಕು. ಸಾಕುಪ್ರಾಣಿಗಳ ವಿಷಯದಲ್ಲಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಶಾಸನಬದ್ಧ ಸಂಸ್ಥೆಯಾಗಿದೆ. ಇದು ನಿಬಂಧನೆಗಳನ್ನು ಘೋಷಿಸುವ ಅಧಿಕಾರವನ್ನು ಹೊಂದಿದೆ ಎಂದು ಹೇಳಿದರು.

ಪ್ರತಿ ಕುಟುಂಬಕ್ಕೆ ನಾಯಿಗಳ ಸಂಖ್ಯೆಯನ್ನು ನಿರ್ಬಂಧಿಸುವ ಯಾವುದೇ ಮಾರ್ಗಸೂಚಿಗಳನ್ನು AWBI ನೀಡಿಲ್ಲ. ಆದರೆ ಬಿಬಿಎಂಪಿಯ ಕರಡು ಪ್ರಕಾರ ಮನೆಗೆ ಮೂರು ನಾಯಿಗಳನ್ನು ಸಾಕಲು ಮಾತ್ರ ಅವಕಾಶ ನೀಡಲಾಗಿದೆ.

ನಾಯಿಗಳ ನಡವಳಿಕೆಯ ಆಧಾರದ ಮೇಲೆ ಯಾವುದೇ ಕಾನೂನು ವರ್ಗೀಕರಣವಿಲ್ಲದಿದ್ದರೂ, ಜರ್ಮನ್ ಶೆಫರ್ಡ್, ರಾಟ್‌ವೀಲರ್, ಡೋಬರ್‌ಮನ್ ಮತ್ತು ಹೌಂಡ್‌ ತಳಿಯ ನಾಯಿಗಳನ್ನು ಉಘ್ರ ನಾಯಿಗಳೆಂದು ಬಿಬಿಎಂಪಿ ಗುರುತಿಸಿದೆ. ಮತ್ತು ಅವುಗಳನ್ನು ಫ್ಲಾಟ್‌ಗಳು ಅಥವಾ ಬಹು ಮನೆಗಳನ್ನು ಹೊಂದಿರುವ ಬಿಲ್ಡಿಂಗ್​ಗಳಲ್ಲಿ ಸಾಕುವುದನ್ನು ನಿರ್ಬಂಧಿಸಿದೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ