ಬೆಳ್ಳಂದೂರು ಜಮೀನು ಡಿನೋಟಿಫಿಕೇಷನ್ ಕೇಸ್: ನನಗೆ ವಯಸ್ಸಾಯ್ತು, ಆರೋಗ್ಯವೂ ಸರಿಯಿಲ್ಲ ಎಂದು ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೇಳಿದ ಬಿ.ಎಸ್. ಯಡಿಯೂರಪ್ಪ

ಬೆಳ್ಳಂದೂರು ಜಮೀನು ಡಿನೋಟಿಫಿಕೇಷನ್ ಕೇಸ್: ನನಗೆ ವಯಸ್ಸಾಯ್ತು, ಆರೋಗ್ಯವೂ ಸರಿಯಿಲ್ಲ ಎಂದು ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೇಳಿದ ಬಿ.ಎಸ್. ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ

ಬಿ.ಎಸ್‌. ಯಡಿಯೂರಪ್ಪ ಕೆಮ್ಮು, ನೆಗಡಿ ಜ್ವರದಿಂದ ಬಳಲುತ್ತಿದ್ದಾರೆಂದು ಅರ್ಜಿ ಸಲ್ಲಿಸಿದ್ದಾರೆ. ಯಡಿಯೂರಪ್ಪಗೆ 79 ವರ್ಷ ಆಗಿದೆ, ಡಯಾಬಿಟಿಸ್ ಇದೆ. ಬೈಲಾಟರಲ್ ನ್ಯುಮೊನೈಟಿಸ್‌ನಿಂದಾಗ ವೈದ್ಯರ ಆರೈಕೆಯಲ್ಲಿದ್ದಾರೆ. ವೈದ್ಯರು ಮುಂದಿನ 10 ದಿನ ಬೆಡ್ ರೆಸ್ಟ್ ಗೆ ಸೂಚಿಸಿದ್ದಾರೆ. ಹೀಗಾಗಿ ಹಾಜರಾತಿಯಿಂದ ವಿನಾಯಿತಿ ನೀಡಲು ಬಿಎಸ್ವೈ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

TV9kannada Web Team

| Edited By: Ayesha Banu

May 25, 2022 | 10:09 PM

ಬೆಂಗಳೂರು: ಬೆಳ್ಳಂದೂರು ಬಳಿಯ ಜಮೀನು ಡಿನೋಟಿಫಿಕೇಷನ್ ಕೇಸ್ಗೆ ಸಂಬಂಧಿಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ(BS Yediyurappa) ಸಮನ್ಸ್ ಹಿನ್ನೆಲೆ ಅನಾರೋಗ್ಯ ಕಾರಣಕ್ಕೆ ಹಾಜರಾತಿಯಿಂದ‌ ವಿನಾಯಿತಿ ನೀಡುವಂತೆ ಬಿಎಸ್ವೈ ಮನವಿ ಸಲ್ಲಿಸಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಕೆಮ್ಮು, ನೆಗಡಿ ಜ್ವರದಿಂದ ಬಳಲುತ್ತಿದ್ದಾರೆಂದು ಅರ್ಜಿ ಸಲ್ಲಿಸಿದ್ದಾರೆ. ಯಡಿಯೂರಪ್ಪಗೆ 79 ವರ್ಷ ಆಗಿದೆ, ಡಯಾಬಿಟಿಸ್ ಇದೆ. ಬೈಲಾಟರಲ್ ನ್ಯುಮೊನೈಟಿಸ್‌ನಿಂದಾಗ ವೈದ್ಯರ ಆರೈಕೆಯಲ್ಲಿದ್ದಾರೆ. ವೈದ್ಯರು ಮುಂದಿನ 10 ದಿನ ಬೆಡ್ ರೆಸ್ಟ್ ಗೆ ಸೂಚಿಸಿದ್ದಾರೆ. ಹೀಗಾಗಿ ಹಾಜರಾತಿಯಿಂದ ವಿನಾಯಿತಿ ನೀಡಲು ಬಿಎಸ್ವೈ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಇಂದು ವಿನಾಯಿತಿ ನೀಡಿ ಜೂ.17ಕ್ಕೆ ಹಾಜರಾಗಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೂಚನೆ ನೀಡಿದೆ. ವಾಸುದೇವರೆಡ್ಡಿ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. 2000-01 ರಲ್ಲಿ ಐಟಿ ಪಾರ್ಕ್‌ಗೆಂದು ಕೆಐಎಡಿಬಿ ಭೂಸ್ವಾಧೀನ ಪ್ರಕರಣದಲ್ಲಿ, ಬೆಳ್ಳಂದೂರು, ದೇವರಬೀಸನಹಳ್ಳಿಯಲ್ಲಿ ಭೂಸ್ವಾಧೀನ ಕೇಸ್ ಬಗ್ಗೆ ದೂರು ಸಲ್ಲಿಸಲಾಗಿತ್ತು. ಇದನ್ನೂ ಓದಿ: ತಾಂಬೂಲ ಪ್ರಶ್ನೆಗೆ ಮೊದಲು ಮಳಲಿ ದರ್ಗಾ ಮತ್ತು ರಾಮಾಂಜನೇಯ ಭಜನಾ ದೇವಸ್ಥಾನಕ್ಕೆ ಪೊಲೀಸ್ ಸರ್ಪಗಾವಲು

ಬಿ.ಎಸ್‌ ಯಡಿಯೂರಪ್ಪ ಡಿಸಿಎಂ ಆಗಿದ್ದಾಗ 4.30 ಎಕರೆ ಡಿನೋಟಿಫೈ ಮಾಡಿಸಲಾಗಿದೆ ಎಂದು 2013 ರಲ್ಲಿ ವಾಸುದೇವರೆಡ್ಡಿ ಖಾಸಗಿ ದೂರು ಸಲ್ಲಿಸಿದ್ದರು. 2015 ರಲ್ಲಿ ಲೋಕಾಯುಕ್ತ ವಿಶೇಷ ಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ಆರೋಪದಲ್ಲಿ ಹುರುಳಿಲ್ಲವೆಂದು ಜನವರಿ 2021 ರಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಆದರೆ, ಬಿ ರಿಪೋರ್ಟ್ ತಿರಸ್ಕರಿಸಿ ತನಿಖೆ ನಡೆಸಲು ಆದೇಶಿಸಿತ್ತು. ಮತ್ತೆ ಲೋಕಾಯುಕ್ತ ಡಿವೈಎಸ್‌ಪಿ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದೀಗ ಹೆಚ್ಚುವರಿ ಬಿ ರಿಪೋರ್ಟ್ ತಿರಸ್ಕರಿಸಿ ಸಮನ್ಸ್ ಜಾರಿ ಮಾಡಲಾಗಿತ್ತು.

ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada