ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿಯ ಆರೋಗ್ಯದಲ್ಲಿ ಏರುಪೇರು; ಮತ್ತೆ ICUಗೆ ಶಿಫ್ಟ್, ಆರೋಪಿಯನ್ನು ಶಪಿಸುತ್ತಿರುವ ಪೋಷಕರು
ಯುವತಿಯ ಆರೋಗ್ಯ ಏರುಪೇರಾಗಿದ್ದು ತೀವ್ರ ಜ್ವರ ಮತ್ತು ಬಾಡಿಯಲ್ಲಿ ಇನ್ಫೆಕ್ಷನ್ ಕಂಡುಬಂದಿದೆ. ಹೀಗಾಗಿ ಹಾಸ್ಪಿಟಲ್ ಸಿಬ್ಬಂದಿ ಯುವತಿಯನ್ನು ಮತ್ತೆ ICU ಗೆ ಶಿಫ್ಟ್ ಮಾಡಿ ಆಕ್ಸಿಜನ್ ಸಪೋರ್ಟ್ ನಿಂದ ಚಿಕಿತ್ಸೆ ನೀಡುತ್ತಿದ್ದಾರೆ.
ಬೆಂಗಳೂರು: ಮಾಡಬಾರದ್ದು ಮಾಡಿದ್ರೇ ಆಗಬಾರದ್ದು ಆಗುತ್ತೇ ಅಂತಾರೆ. ಆದರೆ ಪ್ರೇಮ (ಆ್ಯಸಿಡ್ ಅಟ್ಯಾಕ್ ಯುವತಿ) ಯುವತಿ ಏನು ತಪ್ಪು ಮಾಡಿಲ್ಲ. ಆದರೆ ಓರ್ವ ಕಿರಾತಕ ಮಾಡಿದ ತಪ್ಪಿನಿಂದಾಗಿ (ಆ್ಯಸಿಡ್ ದಾಳಿ) ನಿಂದಾಗಿ ಕಳೆದ ಸರಿಸುಮಾರು 28 ದಿನಗಳಿಂದ ಹಾಸ್ಪಿಟಲ್ ನಲ್ಲಿ ಸಾವು ಬದುಕಿನ ನಡುವೆ ಫೈಟ್ ಮಾಡುತ್ತಿದ್ದಾಳೆ. ಅಷ್ಟಕ್ಕೂ ಆಸಿಡ್ ದಾಳಿಗೆ ಒಳಗದ ಯುವತಿಯ ಪರಿಸ್ಥಿತಿ ಈಗ ಹೇಗಿದೆ ಎನ್ನುವ ಬಗ್ಗೆ ಒಂದು ವರದಿ ಇಲ್ಲಿದೆ.
ಏಪ್ರಿಲ್ 28 ರಂದು ಪ್ರೇಮ ಎನ್ನುವ ಯುವತಿಯ ಮೇಲೆ ನಾಗೇಶ್ ಎನ್ನುವ ಕಿರಾತಕ ಆ್ಯಸಿಡ್ ಹಾಕಿದ್ದ. ಯುವತಿ ಮೇಲೆ ಆ್ಯಸಿಡ್ ಹಾಕಿ ಬೇರೆ ರಾಜ್ಯಕ್ಕೆ ಹೋಗಿ ತಲೆಮರಸಿಕೊಂಡಿದ್ದ. ಸುಮಾರು ಹದಿನೈದು ದಿನಗಳ ಬಳಿಕ ನಾಗೇಶ್ ನನ್ನು ತಮಿಳುನಾಡಿನ ಒಂದು ಆಶ್ರಮದಲ್ಲಿ ಪೋಲಿಸರು ಬಂಧಿಸಿದ್ದರು. ಇನ್ನೂ ಅಲ್ಲಿಂದ ನಾಗೇಶ್ ನನ್ನು ಪೋಲಿಸರು ಕರೆದುಕೊಂಡು ಬರುವಾಗ ಪೋಲಿಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿ ಪೋಲಿಸರಿಂದ ಗುಂಡಿನ ದಾಳಿಗೆ ಒಳಗಾಗಿ ವಿಕ್ಟೋರಿಯಾ ಹಾಸ್ಪಿಟಲ್ ನಲ್ಲಿ ನಾಗೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಪರಿಸ್ಥಿತಿ ಒಂದೊಂದು ದಿನ ಒಂದೊಂದು ರೀತಿಯಲ್ಲಿದೆ. ಹಾಸ್ಪಿಟಲ್ನಲ್ಲಿ ಸಾವು- ಬದುಕಿನ ನಡುವೆ ಹೋರಾಟ ಮಾಡ್ತಿದ್ದಾಳೆ. ಆ್ಯಸಿಡ್ ಯುವತಿಯ ಮೇಲೆ ಶೇಕಡಾ 1/3rd (36%) ರಷ್ಟು ಶರೀರದ ಮೇಲೆ ಡೀಪ್ ಅಟ್ಯಾಕ್ ಆಗಿರುವುದರಿಂದಾಗಿ ಯುವತಿಗೆ ಸರ್ಜರಿ ಮಾಡುವಾಗ ಇನ್ಫೆಕ್ಷನ್ ಕಂಡು ಬರುತ್ತಿದೆ. ಅದರಿಂದಾಗಿ ಯುವತಿಯ ಪೋಷಕರ ಆತಂಕಕ್ಕೆ ಕಾರಣವಾಗುತ್ತಿದೆ. ಇದನ್ನೂ ಓದಿ: ಕೊರೊನಾ ಇರಲಿ, ಇಲ್ಲದಿರಲಿ ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತು ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ! ಹೇಗೆ ಅಂತೀರಾ?
ಯುವತಿಯ ಆರೋಗ್ಯ ಏರುಪೇರು, ತೀವ್ರ ಜ್ವರ ಏಪ್ರಿಲ್ 28 ರಂದು ನಗರದ ಸೇಂಟ್ ಜಾನ್ಸ್ ಹಾಸ್ಪಿಟಲ್ ನ ICU ಎಮರ್ಜೆನ್ಸಿ ವಾರ್ಡ್ ನಲ್ಲಿ ಯುವತಿಗೆ ಚಿಕಿತ್ಸೆ ನೀಡ್ತಿದ್ರೂ ಬಳಿಕ ಎರಡು ಮೇಜರ್ ಆಪರೇಷನ್ ಮತ್ತು ಡ್ರೆಸ್ಸಿಂಗ್ ಕೂಡ ಹಾಸ್ಪಿಟಲ್ ನಲ್ಲಿ ಮಾಡಿದ್ರು. ಇನ್ನೂ ಕೆಲವು ದಿನಗಳ ಬಳಿಕ ಯುವತಿಯ ಬಿಪಿ ನಾರ್ಮಲ್ ಆಗಿದ ಬಳಿಕ ಆಕೆಯನ್ನು ಸ್ಪೆಷಲ್ ಬರ್ನಿಂಗ್ ವಿಭಾಗಕ್ಕೆ ಶಿಫ್ಟ್ ಮಾಡಲಾಯಿತು. ಆಗ ಡಾಕ್ಟರ್ ಕೂಡ ಯುವತಿಯ ವಿಚಾರದಲ್ಲಿ ತೊಂದರೆ ಇಲ್ಲ ಜ್ವರ ಬಂದರೆ ಕಷ್ಟ ಎಂದು ಹೇಳಿದ್ದರು. ಆದರೆ ಈಗ ಯುವತಿಯ ಆರೋಗ್ಯ ಏರುಪೇರಾಗಿದ್ದು ತೀವ್ರ ಜ್ವರ ಮತ್ತು ಬಾಡಿಯಲ್ಲಿ ಇನ್ಫೆಕ್ಷನ್ ಕಂಡುಬಂದಿದೆ. ಹೀಗಾಗಿ ಹಾಸ್ಪಿಟಲ್ ಸಿಬ್ಬಂದಿ ಯುವತಿಯನ್ನು ಮತ್ತೆ ICU ಗೆ ಶಿಫ್ಟ್ ಮಾಡಿ ಆಕ್ಸಿಜನ್ ಸಪೋರ್ಟ್ ನಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಯುವತಿಯ ರಕ್ತದಲ್ಲಿ ಪ್ರೋಟೀನ್ ಕಂಟೇಂಟ್ ಕೂಡ ಕಡಿಮೆ ಇದೆ. ಇನ್ನೂ ಮೂರು ನಾಲ್ಕು ವಾರಗಳ ಕಾಲ ಯುವತಿ ICU ನಲ್ಲಿಯೇ ಚಿಕಿತ್ಸೆ ಪಡೆಯಬೇಕಾಗುತ್ತೆ. ಹಾಗೆ ವಿಕ್ಟೋರಿಯಾ ಹಾಸ್ಪಿಟಲ್ ನಿಂದ ಚರ್ಮವನ್ನು ಕೂಡ ತಂದು ಹಾಕಲಾಯಿತು ಇಂತಹ ಕೇಸ್ಗಳ ವಿಚಾರದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಸೇಂಟ್ ಜಾನ್ಸ್ ಹಾಸ್ಪಿಟಲ್ CMO ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇನ್ನೂ ಯುವತಿಯನ್ನು ಇಂತಹ ಪರಿಸ್ಥಿತಿಯಲ್ಲಿ ಕಂಡು ಪೋಷಕರು ಆತಂಕಕ್ಕೆ ಈಡಾಗಿದ್ದಾರೆ. ನಿನ್ನೆ ಮೊನ್ನೆಯ ತನಕ ಚೆನ್ನಾಗಿ ಇದ್ದ ಮಗಳು ಮತ್ತೆ ICU ವಾರ್ಡ್ ಗೆ ಶಿಫ್ಟ್ ಮಾಡಿದ್ದನ್ನು ಕಂಡು ಪೋಷಕರು ಆತಂಕ ಪಡುತ್ತಿದ್ದಾರೆ. ಹಾಗೆ ಮಗಳ ವಿಚಾರದಲ್ಲಿ ನಾಗೇಶ್ ಮಾಡಿದ ಕೃತ್ಯ ಕಂಡು ಪೋಷಕರು ಇಡಿಶಾಪ ಹಾಕ್ತಿದ್ದಾರೆ. ಅವನಿಗೆ ನೇಣಿಗೆ ಹಾಕಬೇಕು ಇಲ್ಲದಿದ್ದರೆ ನಮ್ಮ ಮಗಳು ಹೇಗೆ ನೋವನ್ನು ಅನುಭವಸಿದ್ರು ಹಾಗೆ ಅವನಿಗೆ ಕೂಡ ನೋವು ಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಮಗಳು ನೋವಿನಲ್ಲಿಯೇ ನಮ್ಮ ಜೊತೆಗೆ ಮಾತನಾಡ್ತಿದ್ದಾಳೆ ನಮ್ಮ ಕುಟುಂಬದ ಸದಸ್ಯರನ್ನು ನೆನೆದು ಕಣ್ಣೀರು ಹಾಕ್ತಿದ್ದಾಳೆ. ನಮ್ಮ ಮಗಳು ಬೇಗ ಗುಣಮುಖವಾಗಿ ಹೊರಗೆ ಬರಬೇಕು ಎಂದು ಯುವತಿಯ ದೊಡ್ಡಪ್ಪ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ರಾಷ್ಟ್ರಕವಿ ಕುವೆಂಪು ಅನೇಕರ ಪ್ರೋತ್ಸಾಹದಿಂದ ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂಬ ಉಲ್ಲೇಖದ ಬಗ್ಗೆ ಸ್ಪಷ್ಟನೆ ನೀಡಿದ ಬರಗೂರು ರಾಮಚಂದ್ರಪ್ಪ
ಒಟ್ಟಿನಲ್ಲಿ ನಾಗೇಶ್ ಪೋಲಿಸರಿಂದ ತಪ್ಪಿಸಿಕೊಳ್ಳಲು ಹೋಗಿ ಗುಂಡಿನ ಏಟು ತಿಂದು ಹಾಸ್ಪಿಟಲ್ ನಲ್ಲಿ ಇದ್ರೇ ಇತ್ತ ಪ್ರೇಮ ಏನು ತಪ್ಪು ಮಾಡಿಲ್ಲದಿದ್ದರೂ ಕಳೆದ 28 ದಿನಗಳಿಂದ ಹಾಸ್ಪಿಟಲ್ ನಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದಾಳೆ. ಯುವತಿ ಆದಷ್ಟು ಬೇಗ ಗುಣಮುಖವಾಗಿ ಹೊರಗೆ ಬರಬೇಕು ಎನ್ನುವುದು ಎಲ್ಲರ ಆಶಯ.
ವರದಿ: ಬಾಲಾಜಿ, ಟಿವಿ9 ಬೆಂಗಳೂರು
Published On - 8:00 pm, Wed, 25 May 22