
ಬೆಂಗಳೂರು, ಆಗಸ್ಟ್ 28: ಟ್ರಾಫಿಕ್ ಫೈನ್ಗೆ ಬೆಂಗಳೂರು ಪೊಲೀಸರ ಶೇಕಡಾ 50 ರಿಯಾಯಿತಿಗೆ (Traffic Fine Discount) ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಉಪಕ್ರಮವನ್ನು ಸದುಪಯೋಗಪಡಿಸಿಕೊಂಡು ಸವಾರರು ಬಾಕಿ ದಂಡ (Fine) ಪಾವತಿಸುವ ಮೂಲಕ ಅರ್ಧದಷ್ಟು ಹಣ ಉಳಿತಾಯ ಮಾಡುತ್ತಿದ್ದಾರೆ. ಇಲ್ಲೊಬ್ಬರು ಸವಾರರು, ತಮ್ಮ ಒಂದೇ ವಾಹನದ ಮೇಲಿದ್ದ 100 ಕೇಸ್ಗೆ ಬರೋಬರಿ 46,500 ರೂ. ದಂಡ ಕಟ್ಟಿದ್ದಾರೆ.
ಶೇಕಡಾ 50 ರಿಯಾಯಿತಿಯಲ್ಲಿ ಬೈಕ್ ಮಾಲೀಕನಿಂದ ಹೆಚ್.ಎ.ಎಲ್ ಟ್ರಾಫಿಕ್ ಪೊಲೀಸರು ದಂಡ ಕಟ್ಟಿಸಿಕೊಂಡಿದ್ದಾರೆ. ಬಾಕಿ ದಂಡ ಪಾವತಿಗೆ ಸರ್ಕಾರ ಆಗಸ್ಟ್ 23 ರಿಂದ ಸೆಪ್ಟೆಂಬರ್ 9ರ ವರೆಗೆ 50% ರಿಯಾಯಿತಿ ನೀಡಿದೆ. ಹೀಗಾಗಿ ಬಾಕಿ ಉಳಿಸಿಕೊಂಡ ದಂಡವನ್ನು ವಾಹನ ಮಾಲೀಕರು ಪಾವತಿಸುತ್ತಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ಫೈನ್ ಶೇ 50ರ ರಿಯಾಯಿತಿಗೆ ಭರ್ಜರಿ ರೆಸ್ಪಾನ್ಸ್: ನಾಲ್ಕೇ ದಿನದಲ್ಲಿ ಸಂಗ್ರಹವಾದ ದಂಡವೆಷ್ಟು ಗೊತ್ತಾ?
ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸಂಚಾರ ಪೊಲೀಸರು ಶೇ 50ರಷ್ಟು ರಿಯಾಯಿತಿ ಘೋಷಣೆ ಮಾಡಿದ್ದರು. ಬೆಂಗಳೂರಿನಲ್ಲಿ ಬಾಕಿ ಉಳಿದಿದ್ದ ದಂಡ ವಸೂಲಿಗೆ ಪೊಲೀಸ್ ಇಲಾಖೆ 50% ರಿಯಾಯಿತಿ ನೀಡಿದೆ. ಸದ್ಯ ಇದಕ್ಕೆ ಸವಾರರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಪರಿಣಾಮ ಆರಂಭವಾಗಿ 4 ದಿನಗಳಲ್ಲಿ 14,89,36,300 ರೂ ಹಣ ಬಾಕಿ ದಂಡ ಸಂಗ್ರಹವಾಗಿತ್ತು. ಆ ಮೂಲಕ 5,25,551 ಬಾಕಿ ಕೇಸ್‌ಗಳಿಗೆ ವಾಹನ ಮಾಲೀಕರು ದಂಡ ಪಾವತಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:35 pm, Thu, 28 August 25