Delta Variant: ಬೆಂಗಳೂರಲ್ಲಿ 268 ಜನರಿಗೆ ಡೆಲ್ಟಾ ವೈರಸ್​; ಇಬ್ಬರಿಗೆ ಕಪ್ಪಾ, 38 ಮಂದಿಗೆ ಡೆಲ್ಟಾ ರೂಪಾಂತರಿ ಸೋಂಕು ದೃಢ

ಬೆಂಗಳೂರಿನಲ್ಲಿ ಈವರೆಗೆ 268 ಜನರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದ್ದು, 268 ಜನರ ಪೈಕಿ ಇಬ್ಬರಲ್ಲಿ ಕಪ್ಪಾ ವೈರಸ್ ಕಂಡುಬಂದಿದೆ. ಅಲ್ಲದೇ, 38 ಜನರಲ್ಲಿ ಡೆಲ್ಟಾ ವೈರಾಣುವಿನ ಮತ್ತೊಂದು ಪ್ರಭೇದ ಇರುವುದು ದೃಢಪಟ್ಟಿದೆ.

Delta Variant: ಬೆಂಗಳೂರಲ್ಲಿ 268 ಜನರಿಗೆ ಡೆಲ್ಟಾ ವೈರಸ್​; ಇಬ್ಬರಿಗೆ ಕಪ್ಪಾ, 38 ಮಂದಿಗೆ ಡೆಲ್ಟಾ ರೂಪಾಂತರಿ  ಸೋಂಕು ದೃಢ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Sep 08, 2021 | 11:04 AM

ಬೆಂಗಳೂರು: ಕರ್ನಾಟಕದಲ್ಲಿ ಪರಿಸ್ಥಿತಿಯನ್ನು ಅಲ್ಲೋಲಕಲ್ಲೋಲಗೊಳಿಸಿದ್ದ ಕೊರೊನಾ ಸೋಂಕು ಸದ್ಯ ನಿಯಂತ್ರಣದಲ್ಲಿದ್ದಂತೆ ಮೇಲ್ನೋಟಕ್ಕೆ ಕಾಣುತ್ತಿದೆಯಾದರೂ ಮನೆ ಮನೆ ಸರ್ವೇ ಸೇರಿದಂತೆ ಬೆಂಗಳೂರಿನಲ್ಲಿ ಲಭ್ಯವಾಗುತ್ತಿರುವ ಇತರೆ ಅಂಕಿ ಅಂಶಗಳು ಆತಂಕವನ್ನು ಜೀವಂತವಾಗಿಡುತ್ತಿವೆ. ಬೆಂಗಳೂರಿನಲ್ಲಿ ಈವರೆಗೆ 268 ಜನರಲ್ಲಿ ಡೆಲ್ಟಾ ವೈರಸ್ ಪತ್ತೆಯಾಗಿದ್ದು, 268 ಜನರ ಪೈಕಿ ಇಬ್ಬರಲ್ಲಿ ಕಪ್ಪಾ ವೈರಸ್ ಕಂಡುಬಂದಿದೆ. ಅಲ್ಲದೇ, 38 ಜನರಲ್ಲಿ ಡೆಲ್ಟಾ ವೈರಾಣುವಿನ ಮತ್ತೊಂದು ಪ್ರಭೇದ ಇರುವುದು ದೃಢಪಟ್ಟಿದೆ.

ಇನ್ನೊಂದೆಡೆ, ಕೇರಳದಲ್ಲಿ ಉಲ್ಬಣಗೊಂಡಿರುವ ನಿಫಾ ವೈರಸ್​ ಕೂಡಾ ಭೀತಿ ಹೆಚ್ಚಲು ಕಾರಣವಾಗಿದ್ದು, ನಿಫಾ ವೈರಸ್ ಜತೆಗೆ ಇದೀಗ ಡೆಲ್ಟಾ ಪ್ರಭೇದ ಕಂಡಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ. ಕೇರಳದಿಂದ ಬಂದವರಲ್ಲಿ ಕೊರೊನಾ ಸೋಂಕು ಧೃಡವಾಗಿರುವುದರಿಂದ ಸೋಂಕಿತರಿಂದ ಸಂಗ್ರಹಿಸಿದ ಮಾದರಿಗಳನ್ನು ಜಿನೋಮಿಕ್ ಸೀಕ್ವೆನ್ಸ್‌ಗೆ ಕಳುಹಿಸಲಾಗಿದೆ.

22,362 ಜನರಿಗೆ ಕೊರೊನಾ ಸೋಂಕು ಪತ್ತೆ ಬಿಬಿಎಂಪಿಯಿಂದ ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ 22,362 ಜನರಿಗೆ ಕೊರೊನಾ ಸೋಂಕು ಸಕ್ರಿಯವಾಗಿರುವುದು ಪತ್ತೆಯಾಗಿದೆ. 21 ದಿನಗಳಲ್ಲಿ 7,11,648 ಜನರನ್ನು ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 22,362 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಆತಂಕಕಾರಿ ವಿಚಾರವೆಂದರೆ ಸದರಿ ಪರೀಕ್ಷೆಗೆ ಒಳಪಟ್ಟವರೆಲ್ಲರೂ ತಮಗೆ ಸೋಂಕಿಲ್ಲವೆಂದು ಭಾವಿಸಿ ಮನೆಯಲ್ಲೇ ಇದ್ದರು. ಇವರ್ಯಾರಿಗೂ ಸೋಂಕಿನ ಲಕ್ಷಣಗಳಾಗಲೀ, ತೀವ್ರ ತೊಂದರೆಯಾಗಲೀ ಬಾಧಿಸದ ಕಾರಣ ಕೊರೊನಾಕ್ಕೆ ತುತ್ತಾಗಿರುವ ಅಂದಾಜೇ ಇರಲಿಲ್ಲ. ಆದರೆ, ಬಿಬಿಎಂಪಿ ವೈದ್ಯರು ಮನೆಗೆ ಬಂದು ತಪಾಸಣೆ ಮಾಡಿದಾಗಲೇ ಸೋಂಕು ಇರುವುದು ಧೃಡವಾಗಿದೆ.

ಬಿಬಿಎಂಪಿ ಮನೆ ಮನೆ ಆರೋಗ್ಯ ಸಮೀಕ್ಷೆಯಲ್ಲಿ ಪಾಲಿಕೆ ವೈದ್ಯರು ನಿಮ್ಮ ಮನೆ ಬಾಗಿಲಿಗೆ ಎಂಬ ಯೋಜನೆಯಡಿ ಸಮೀಕ್ಷೆ ಮಾಡಲಾಗಿತ್ತು. ಇದರಲ್ಲಿ 21 ದಿನಗಳ ಅವಧಿಯಲ್ಲಿ 7,11,648 ಜನರ ಆರೋಗ್ಯ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ವೇಳೆ 22,362 ಜನರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಈ 22 ಸಾವಿರ ಜನರಿಗೆ ತಮ್ಮಲ್ಲಿ‌ ಕೊರೊನಾ‌ ಸೋಂಕು ಇದೆ ಎಂಬ ವಿಚಾರವೇ ಗೊತ್ತಿರಲಿಲ್ಲವಾದ್ದರಿಂದ ಅವರು ಎಂದಿನಂತೆ ಇದ್ದರು. ಬಿಬಿಎಂಪಿ ವೈದ್ಯರು ಮನೆ ಮನೆಗೂ ಹೋಗಿ ತಪಾಸಣೆ ಮಾಡಿದ್ದರಿಂದಷ್ಟೇ ಸೋಂಕು ಇರುವ ವಿಚಾರ ಬೆಳಕಿಗೆ ಬಂದಿದೆ.  ಇದು ಆಘಾತಕಾರಿ ಬೆಳವಣಿಗೆಯ ಮುನ್ಸೂಚನೆಯಾಗಿದ್ದು ಒಂದು ವೇಳೆ ಹೀಗೆ ಲಕ್ಷಣಗಳಿಲ್ಲದೇ ಸೋಂಕು ಹಬ್ಬುತ್ತಾ ಹೋಗಿ ಏಕಾಏಕಿ ಹೆಚ್ಚಳವಾದಲ್ಲಿ ಮೂರನೇ ಅಲೆ ಗಂಭೀರವಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಇದೇ ಹೊತ್ತಿನಲ್ಲಿ ಬಿಬಿಎಂಪಿ ಡೆತ್ ಆಡಿಟ್ ವರದಿಯನ್ನು (BBMP Death Audit Report) ತಯಾರಿಸಿದ್ದು ಅದರಲ್ಲಿ ಸಾವಿಗೆ ಕಾರಣವಾದ ಸಂಗತಿಯ ಅಸಲಿಯತ್ತು ಬಯಲಾಗಿದೆ. ಕೊರೊನಾ 2 ನೇ ಅಲೆಯಲ್ಲಿ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇದ್ದವರೇ ಅತೀ ಹೆಚ್ಚು ಸಂಖ್ಯೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಬಿಬಿಎಂಪಿ ಡೆತ್ ಆಡಿಟ್ ವರದಿಯಲ್ಲಿ ತಿಳಿದುಬಂದಿದೆ. ಆಸ್ಪತ್ರೆಗೆ ದಾಖಲಿಸಿದ 30-40 ಗಂಟೆಗಳಲ್ಲೇ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇದ್ದವರು ಕೊನೆಯುಸಿರೆಳೆದಿದ್ದಾರೆ. ಸೋಂಕು ಕಾಣಿಸಿಕೊಂಡ ಡಯಾಬಿಟಿಸ್ ಹಾಗೂ ಹೈಪರ್ ಟೆನ್ಷನ್ ಇದ್ದ ರೋಗಿಗಳಲ್ಲೇ ಮರಣ ಪ್ರಮಾಣ ಹೆಚ್ಚಿತ್ತು ಎನ್ನುವ ಅಂಶ ಇದೀಗ ಹೊರಬಿದ್ದಿದೆ.

ಇದನ್ನೂ ಓದಿ: ಡಯಾಬಿಟಿಸ್​, ಹೈಪರ್​ ಟೆನ್ಷನ್​ ಇದ್ದ ಕೊರೊನಾ ಸೋಂಕಿತರು ಬೇಗ ಸಾವಿಗೀಡಾಗಿದ್ದಾರೆ: ಬಿಬಿಎಂಪಿ ಡೆತ್​ ಆಡಿಟ್​ ವರದಿ ಹೇಳಿದ ಸತ್ಯ 

Nipah Virus: ಕೊವಿಡ್​ಗಿಂತಲೂ ಅಪಾಯಕಾರಿಯಾಗಿರುವ ನಿಫಾ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?

(Bengaluru 268 people infected for Delta variant 2 of them have Kappa infection says report)

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ