AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು 7 ಕೋಟಿ ರೂ ದರೋಡೆ​: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಕರಣದ ಕಿಂಗ್​ಪಿನ್​ ಪತ್ನಿ

ಬೆಂಗಳೂರಿನಲ್ಲಿ ನಡೆದಿರುವ 7.11 ಕೋಟಿ ರೂ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್​ಪಿನ್​ ರವಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಪತಿ ಕೃತ್ಯದಲ್ಲಿ ಭಾಗಿಯಾಗಿರೋದನ್ನ ರವಿ ಪತ್ನಿ ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ರವಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಬೆಂಗಳೂರು 7 ಕೋಟಿ ರೂ ದರೋಡೆ​: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಕರಣದ ಕಿಂಗ್​ಪಿನ್​ ಪತ್ನಿ
ದರೋಡೆ ಪ್ರಕರಣ
ರಾಚಪ್ಪಾಜಿ ನಾಯ್ಕ್
| Edited By: |

Updated on: Nov 21, 2025 | 6:06 PM

Share

ಬೆಂಗಳೂರು, ನವೆಂಬರ್​ 21: ನಗರದಲ್ಲಿ ನಡೆದಿರುವ 7.11 ಕೋಟಿ ನಗದು ದರೋಡೆ ಪ್ರಕರಣಕ್ಕೆ (robbery  case) ಸಂಬಂಧಿಸಿದಂತೆ 5.30 ಕೋಟಿ ರೂ. ಹಣವನ್ನು ಆಂಧ್ರದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಕೇಸ್​​ನ ಕಿಂಗ್​ಪಿನ್ (Kingpin)​ ರವಿ ಪತ್ನಿಯನ್ನು ನಿನ್ನೆ ರಾತ್ರಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರಕರಣದ ಕಿಂಗ್​ಪಿನ್​ ರವಿ ಪತ್ನಿ ಪೊಲೀಸರ ವಶಕ್ಕೆ

ಪ್ರಕರಣದ ಕಿಂಗ್​ಪಿನ್​ ರವಿ ಪತ್ನಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ರವಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಪತಿ ಕೃತ್ಯದಲ್ಲಿ ಭಾಗಿಯಾಗಿರೋದನ್ನು ರವಿ ಪತ್ನಿ ಒಪ್ಪಿಕೊಂಡಿದ್ದಾರೆ. ನಾನೇ ಪೊಲೀಸ್ ಠಾಣೆಗೆ ಬರಬೇಕು ಎಂದುಕೊಂಡಿದ್ದೆ, ನೀವೇ ಬಂದ್ರಿ ಎಂದು ಪೊಲೀಸರ ಜೊತೆಗೆ ಬಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ದರೋಡೆ ಕೇಸ್​: ಆರೋಪಿಗಳಿಗೆ ಪೊಲೀಸರ ಶಾಕ್​, ಆಂಧ್ರದಲ್ಲಿ ಬಹುಪಾಲು ಹಣ ಸೀಜ್​

ಪತಿ ರವಿ ಬೆಂಗಳೂರಿನಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದರು. ಆದರೆ ಟ್ರಾವೆಲ್ಸ್ ಏಜೆನ್ಸಿಯಲ್ಲಿ ಲಾಸ್​ ಆಗಿ ಕೆಲಸ ಇಲ್ಲದೆ ಮನೆಯಲ್ಲಿದ್ದರು. ಈ ವೇಳೆ ಏರಿಯಾದ ಹುಡುಗರನ್ನು ಸೇರಿಸಿಕೊಂಡು ರಾಬರಿಗೆ ಸಂಚು ರೂಪಿಸಿ ಹಣ ದರೋಡೆಗೆ ಪ್ಲ್ಯಾನ್ ಮಾಡಿದ್ದರು. ಸದ್ಯ ರವಿ ಬಗ್ಗೆ ಪತ್ನಿಯಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಪೋಲಿಸಪ್ಪನ ಬಂಧನ: 5.30ಕೋಟಿ ರೂ. ರಿಕವರಿ, ಉಳಿದಿದ್ದೇನಾಯ್ತು?

ಈ ಇಡೀ ಗ್ಯಾಂಗ್​ನ ಮಾಸ್ಟರ್ ಮೈಂಡ್ ಬೇರೆ ಯಾರೋ ಅಲ್ಲ. ಆರಕ್ಷಕರಲ್ಲೇ ಒಬ್ಬ. ಗೋವಿಂದಪುರ ಠಾಣೆಯ ಪೊಲೀಸ್ ಕಾನ್ಸ್​ಟೇಬಲ್ ಅಣ್ಣಪ್ಪ. ಅಣ್ಣಪ್ಪ ಮತ್ತವನ ಸ್ನೇಹಿತ ಸಿಎಂಎಸ್​ ಸೆಕ್ಯೂರಿಟಿ ಏಜೆನ್ಸಿಯ ಮಾಜಿ ನೌಕರ ಕ್ಸೇವಿಯರ್ 7 ಕೋಟಿ ರೂ ಲೂಟಿಯ ಸೂತ್ರದಾರರು.

ಇದನ್ನೂ ಓದಿ: 7 ಕೋಟಿ ದರೋಡೆ ಕೇಸ್​​ನ ಮಾಸ್ಟರ್​ಮೈಂಡ್​​ ಒಬ್ಬನಲ್ಲ, ಇಬ್ಬರು!: ಪೊಲೀಸಪ್ಪನ ಜೊತೆ ಸಿಎಂಎಸ್​​ ಮಾಜಿ ಉದ್ಯೋಗಿಯೂ ಲಾಕ್​​

ರಾಬರಿ ಪ್ಲ್ಯಾನ್​​ ನಿಂದು, ಎಸ್ಕೇಪ್ ಪ್ಲ್ಯಾನ್ ನಂದು ಅಂತ ದರೋಡೆ ಮಾಡಿಸ್ದೋರ ಪ್ಲ್ಯಾನಿಂಗ್ ಕೈಕೊಟ್ಟಿತ್ತು. ಸದ್ಯ ಇಬ್ಬರನ್ನೂ ಪೊಲೀಸರು ಎತ್ತಾಕ್ಕೊಂಡು ಬಂದಿದ್ದು, ಒಟ್ಟು 5 ಕೋಟಿ 30 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Rachappaji Naik S
Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ