ಬೆಂಗಳೂರು: ಕಟ್ಟಡದ ಮೇಲಿಂದ ಬಿದ್ದು ಒಂದೂವರೆ ವರ್ಷದ ಮಗು ಸಾವು
ಕಟ್ಟಡದ ಮೇಲಿಂದ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಾಮರಾಜಪೇಟೆಯ ಆಜಾದ್ ನಗರದ 6ನೇ ಕ್ರಾಸ್ನಲ್ಲಿ ನಡೆದಿದೆ.
ಬೆಂಗಳೂರು: ಕಟ್ಟಡದ ಮೇಲಿಂದ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಚಾಮರಾಜಪೇಟೆಯ ಆಜಾದ್ ನಗರದ 6ನೇ ಕ್ರಾಸ್ನಲ್ಲಿ ನಡೆದಿದೆ. ಒಂದೂವರೆ ವರ್ಷದ ದೀಕ್ಷಾ ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ ಮಗು. ವಿನಯ್ ಎಂಬ ದಂಪತಿಯ ಪುತ್ರಿ ದೀಕ್ಷಾ, ಸ್ನೇಹಿತರ ಮನೆಗೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ. ರಾತ್ರಿ 9 ಗಂಟೆ ಸುಮಾರಿಗೆ ಊಟ ಮಾಡಿಸುತ್ತಿದ್ದ ದೀಕ್ಷಾ ತಾಯಿ. ಆ ವೇಳೆ ಆಟವಾಡುತ್ತ ಗ್ರಿಲ್ಸ್ ಮೇಲೆ ಮಗು ಹತ್ತಿದೆ. ಬಳಿಕ ನೋಡ ನೋಡುತ್ತಿದ್ದಂತೆ ಜಾರಿ ಕೆಳ ಬಿದ್ದಿದ್ದು, ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ಮಾರ್ಗ ಮಧ್ಯೆ ಮಗು ಕೊನೆಯುಸಿರೆಳೆದಿದೆ. ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನವ ವಿವಾಹಿತೆ ಅನುಮಾನಾಸ್ಪದ ಸಾವು
ಕೊಡಗು: ಜಿಲ್ಲೆಯ ಕುಶಾಲನಗರ ತಾಲೂಕಿನ ಹೊಸಕೇಟೆ ಗ್ರಾಮದ ಅಕ್ಷಿತಾ (18) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಕಳೆದ ಶುಕ್ರವಾರ ಪೋಷಕರ ವಿರೋಧದ ಮಧ್ಯೆ ಪ್ರೀತಿಸಿ ಹೇಮಂತ್ ಎಂಬಾತನೊಂದಿಗೆ ವಿವಾಹವಾಗಿದ್ದ ಅಕ್ಷಿತಾ ಇದೀಗ ಗಂಡನ ಮನೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾಳೆ. ಅಕ್ಷಿತಾ ಮನೆಗೆ ತೆರಳಿ ಜೀವ ಬೆದರಿಕೆ ಹಾಕಿದ್ದ ಅತ್ತೆ ಗುರಿಜಾ, ಮಾವ ದಶರಥ ಎಂಬುವವರೆ ಕೊಲೆ ಮಾಡಿದ್ದಾರೆಂದು ಅಕ್ಷಿತಾ ಪೋಷಕರು ಆರೋಪಿಸಿದ್ದಾರೆ. ಇನ್ನು ಈ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಶಿವಮೊಗ್ಗ: ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಯುವಕ ಅನುಮಾನಸ್ಪದ ರೀತಿಯಲ್ಲಿ ಸಾವು
ನಕಲಿ ಬಂಗಾರ ನೀಡಿ 30.50 ಲಕ್ಷ ವಂಚನೆ
ದಾವಣಗೆರೆ: ತಮಿಳುನಾಡು ಮೂಲದ ವೀಳ್ಯೆದೆಲೆ ವ್ಯಾಪಾರಿಯೊಬ್ಬರಿಗೆ ವ್ಯಕ್ತಿಯೊಬ್ಬ ಬಂಗಾರದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿ ನಕಲಿ ನಾಣ್ಯಗಳನ್ನು ನೀಡಿ ಬರೊಬ್ಬರಿ 30.50 ಲಕ್ಷ ರೂ. ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತುಮ್ಮಿನಕಟ್ಟೆಯ ತಾಯಪ್ಪ ಎಂಬಾತನೇ ಮೋಸ ಮಾಡಿದ ವ್ಯಕ್ತಿ. ಹರಿಹರದ ಅಂಡರ್ ಬ್ರಿಡ್ಜ್ ಬಳಿ ನಿಮ್ಮನ್ನು ನೋಡಿರುವುದಾಗಿ ನಂಬಿಸಿದ ತಾಯಪ್ಪ ನಮ್ಮ ಊರಿನಲ್ಲಿ ತಿಪ್ಪೆಗುಂಡಿ ತೆಗೆಯುವಾಗ 2 ಕೆಜಿ. ಬಂಗಾರದ ನಾಣ್ಯಗಳು ಸಿಕ್ಕಿದ್ದು, ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ಹೇಳಿದ್ದಾನೆ.
ಆಗ ರವೀಂದ್ರನ್ ನಾಣ್ಯ ತೋರಿಸು ಎಂದು ಹೇಳಿದಾಗ ಹಿರೇಕೆರೂರಿಗೆ ಹೋಗಿ ಅಸಲಿ ನಾಣ್ಯವನ್ನು ತೋರಿಸಿದ್ದಾನೆ. ಅದನ್ನು ನಂಬಿದ ವ್ಯಾಪಾರಿ 30.50 ಲಕ್ಷವನ್ನು ನೀಡಿದಾಗ ನಕಲಿ ಬಂಗಾರ ಕೊಟ್ಟಿದ್ದಾನೆ. ಇದನ್ನ ತಮಿಳುನಾಡಿನಲ್ಲಿ ಪರೀಕ್ಷಿಸಿದಾಗ ನಕಲಿ ಎಂದು ತಿಳಿದಿದೆ. ಬಳಿಕ ತಾಯಪ‍್ಪನ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ