ಬೆಂಗಳೂರು ಬಂದ್: ಖಾಸಗಿ ಸಾರಿಗೆ ಸಂಘಟನೆಗಳಿಂದ ಇಂದು ಸಪ್ತ ದಿಗ್ಬಂಧನ, ರ್ಯಾಲಿ ಸಾಗುವ ಮಾರ್ಗಗಳು ಹೀಗಿವೆ

ಶಕ್ತಿ ಯೋಜನೆ ಸ್ಥಗಿತ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಖಾಸಗಿ ಸಾರಿಗೆ ಸಂಘಟನೆಗಳು ಇಂದು ಬೆಂಗಳೂರು ಬಂದ್​ಗೆ ಕರೆ ಕೊಟ್ಟಿವೆ. ಅದರಂತೆ, ಚಾಲಕರು ಹಾಗೂ ಮಾಲೀಕರು ನಗರ ಏಳು ದಿಕ್ಕುಗಳಿಂದ ಪ್ರತಿಭಟನಾ ರ್ಯಾಲಿ ಮೂಲಕ ಮೆಜೆಸ್ಟಿಕ್​​ಗೆ ಬರಲಿದ್ದಾರೆ. ಸದ್ಯ ಖಾಸಗಿ ಸಾರಿಗೆ ಸಂಘಟನೆಗಳಿಂದ ಸದಸ್ಯರಿಗೆ ರೂಟ್ ಮ್ಯಾಪ್ ತಲುಪಿದೆ.

ಬೆಂಗಳೂರು ಬಂದ್: ಖಾಸಗಿ ಸಾರಿಗೆ ಸಂಘಟನೆಗಳಿಂದ ಇಂದು ಸಪ್ತ ದಿಗ್ಬಂಧನ, ರ್ಯಾಲಿ ಸಾಗುವ ಮಾರ್ಗಗಳು ಹೀಗಿವೆ
ಖಾಸಿ ಸಾರಿಗೆ ಒಕ್ಕೂಟಗಳಿಂದ ಬೆಂಗಳೂರು ಬಂದ್Image Credit source: FILE PHOTO
Follow us
| Updated By: Rakesh Nayak Manchi

Updated on: Sep 11, 2023 | 6:49 AM

ಬೆಂಗಳೂರು, ಸೆ.11: ವಿವಿಧ ಬೇಡಿಕೆಗಳನ್ನು ಈಡೇರಿಸದೇ ಆಟ ಆಡುತ್ತಿರುವ ಸಾರಿಗೆ ಇಲಾಖೆ ವಿರುದ್ಧ ಖಾಸಗಿ ‌ಸಾರಿಗೆ ಸಂಘಟನೆ ಸಿಡಿಮಿಡಿಗೊಂಡಿದೆ. ಸರ್ಕಾರಕ್ಕೆ ಮನವಿ ಮಾಡಿ ಸಾಕಾಗಿದೆ, ಹೀಗಾಗಿ ಇಂದು ಬಂದ್ (Bengaluru Bandh) ಮಾಡುತ್ತಿದ್ದೇವೆ ಎಂದು ಹಲವು ಚಾಲಕರ ಒಕ್ಕೂಟ ಹೇಳಿವೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ಸೆಡ್ಡು ಹೊಡೆಯಲು ಸಿದ್ಧವಾಗಿವೆ.

ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಸಾರಿಗೆ ಸಂಘಟನೆಗಳಿಂದ ಇಂದು ಸಪ್ತ ದಿಕ್ಕುಗಳಿಂದ ಮೆರವಣಿಗೆ ಮೂಲಕ ಮೆಜೆಸ್ಟಿಕ್​ಗೆ ಆಗಮಿಸಿ ದಿಗ್ಬಂಧನ ಹಾಕಲಿದ್ದಾರೆ. ಆಟೋ ಚಾಲಕರಿಗೆ ಕ್ಯಾಬ್ ಚಾಲಕರು, ಶಾಲಾ ವಾಹನಗಳ ಚಾಲಕರು ಕೂಡ ಸಾತ್ ನೀಡಲಿದ್ದಾರೆ.

ನೆಲಮಂಗಲ, ಕೆಂಗೇರಿ, ವೈಟ್ ಫೀಲ್ಡ್, ಕೆ ಆರ್ ಪುರ, ಆನೇಕಲ್ ಭಾಗದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್​ ಬಳಿ ಆಗಮಿಸಲಿದ್ದಾರೆ. ಈಗಾಗಲೇ ಖಾಸಗಿ ಸಾರಿಗೆ ಸಂಘಟನೆಗಳಿಂದ ಸದಸ್ಯರಿಗೆ ರೂಟ್ ಮ್ಯಾಪ್ ತಲುಪಿದೆ.

ಮೊದಲನೇ ಮಾರ್ಗ

ಬೆಳಗ್ಗೆ 7 ಗಂಟೆಗೆ ಸರಿಯಾಗಿ ಪೀಣ್ಯ ಇಂಡಸ್ಟ್ರಿಯಲ್ ಮೆಟ್ರೋ ಇಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್​ಗೆ ಎಂಟ್ರಿ

ರ್ಯಾಲಿ ಸಾಗುವ ಮಾರ್ಗ

  • ಪೀಣ್ಯ ಎಸ್ ಆರ್ ಎಸ್ ಸಿಗ್ನಲ್ ಇಂದ ಗೊರಗುಂಟೆಪಾಳ್ಯ
  • ಯಶವಂತಪುರ ರೈಲ್ವೆ ನಿಲ್ದಾಣ
  • ಒರಾಯನ್ ಮಾಲ್
  • ರಾಜಾಜಿನಗರ 1 ಬ್ಲಾಕ್ ಸಿಗ್ನಲ್
  • ನವರಂಗ್ ಥಿಯೇಟರ್
  • ಡಾII ರಾಜಕುಮಾರ್ ರಸ್ತೆ
  • ಸುಜಾತಾ ಥಿಯೇಟರ್
  • ಓಕಳಿಪುರ
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗದಲ್ಲಿ ಸಾಗಿ ಬರುವ ರ್ಯಾಲಿ

ರ್ಯಾಲಿಯ ಎರಡನೇ ಮಾರ್ಗ

  • ಬೆಳಗ್ಗೆ 7:00ಗೆ ಯಲಹಂಕ ಪೊಲೀಸ್ ಸ್ಟೇಷನ್​ನಿಂದ ರ್ಯಾಲಿ ಆರಂಭ
  • ಯಲಹಂಕ ಪೊಲೀಸ್ ಸ್ಟೇಷನ್ ಇಂದ ಹೊರಡುವ ರ್ಯಾಲಿ ಬ್ಯಾಟರಾಯನಪುರದತ್ತ ಸಾಗುತ್ತೆ
  • ಬಳಿಕ ಕೊಡುಗೆಹಳ್ಳಿ ಗೇಟ್
  • ಹೆಬ್ಬಾಳ
  • ಸಿಬಿಐ
  • ಮೇಕ್ರಿ ಸರ್ಕಲ್
  • ಕಾವೇರಿ ಥಿಯೇಟರ್
  • ಚಾಲುಕ್ಯ ಸರ್ಕಲ್
  • ಮೈಸೂರ್ ಬ್ಯಾಂಕ್ ಸರ್ಕಲ್
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್

ಇದನ್ನೂ ಓದಿ: ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದಿಂದ ನಾಳೆ ಬೆಂಗಳೂರು ಬಂದ್​ಗೆ ಕರೆ: ಪರ್ಯಾಯ ಮಾರ್ಗಗಳು ಹೀಗಿವೆ

ಮೂರನೇ ಮಾರ್ಗ

  • ಬೆಳಗ್ಗೆ 7 ಗಂಟೆಗೆ ವೈಟ್ ಫೀಲ್ಡ್ ಮಯೂರ ಬೇಕ್ರಿ ಸರ್ಕಲ್ ಟು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
  • ವೈಟ್‌ಫೀಲ್ಡ್ ಮಯೂರ ಬೇಕರಿ ಸರ್ಕಲ್ ಇಂದ ಹೊರಟು
  • ಕುಂದಾನ ಹಳ್ಳಿ ಗೇಟ್
  • ಮಾರತಹಳ್ಳಿ
  • ಹೆಚ್ಏಎಲ್
  • ದೊಮ್ಮಲೂರು
  • ಹಡ್ಸನ್ ಸರ್ಕಲ್
  • ಕಾರ್ಪೊರೇಷನ್ ಸರ್ಕಲ್
  • ಮೈಸೂರ್ ಬ್ಯಾಂಕ್ ಸರ್ಕಲ್
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್​ಗೆ ಎಂಟ್ರಿ

ನಾಲ್ಕನೇ ಮಾರ್ಗ

  • ಬೆಳಗ್ಗೆ 7:00ಗೆ ಕೆಆರ್ ಪುರಂ ಐಟಿಐ ಗೇಟ್ ಇಂದ ಹೊರಡಲಿರುವ ರ್ಯಾಲಿ
  • ಕೆಆರ್ ಪುರಂ ಐಟಿಐ ಗೇಟ್ ಟು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್​ಗೆ ಎಂಟ್ರಿ
  • ಟಿನ್ ಫ್ಯಾಕ್ಟರಿ
  • ಇಂದಿರಾನಗರ
  • ಹಲಸೂರು
  • ಟ್ರಿನಿಟಿ ಸರ್ಕಲ್
  • ಗರುಡ ಮಾಲ್
  • ಸೋಲೇ ಸರ್ಕಲ್
  • ಹಡ್ಸನ್ ಸರ್ಕಲ್
  • ಕಾರ್ಪೊರೇಷನ್ ಸರ್ಕಲ್
  • ಮೈಸೂರ್ ಬ್ಯಾಂಕ್ ಸರ್ಕಲ್
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್

ಐದನೇ ಮಾರ್ಗ

  • ಬೆಳಗ್ಗೆ 7:00ಗೆ ಆನೇಕಲ್ ಇಂದ ಹೊರಡಲಿರುವ ರ್ಯಾಲಿ
  • ಆನೇಕಲ್ ಇಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ಗೆ ಹೋಗುವ ಮೆರವಣಿಗೆ
  • ಆನೇಕಲ್
  • ಚಂದಾಪುರ
  • ಅತ್ತಿಬೆಲೆ
  • ಎಲೆಕ್ಟ್ರಾನಿಕ್ ಸಿಟಿ
  • ಕೂಡ್ಲು ಗೇಟ್
  • ಬೊಮ್ಮನಹಳ್ಳಿ
  • ಸಿಲ್ಕ್ ಬೋರ್ಡ್
  • ಮಡಿವಾಳ
  • ಕೋರಮಂಗಲ
  • ಆಡುಗೋಡಿ
  • ಸೋಲೇ ಸರ್ಕಲ್
  • ಹಡ್ಸನ್ ಸರ್ಕಲ್
  • ಕಾರ್ಪೊರೇಷನ್ ಸರ್ಕಲ್
  • ಮೈಸೂರ್ ಬ್ಯಾಂಕ್ ಸರ್ಕಲ್
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್

ಆರನೇ ಮಾರ್ಗ

  • ಇಂದು ಬೆಳಗ್ಗೆ 7:00ಗೆ ಜಯನಗರ ಶಾಲಿನಿ ಗ್ರೌಂಡ್ ಇಂದ ಹೊರಡಲಿರುವ ರ್ಯಾಲಿ
  • ಜಯನಗರ ಶಾಲಿನಿ ಗ್ರೌಂಡ್ ಇಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ಗೆ ಹೋಗುವ ಮಾರ್ಗ
  • ಜಯನಗರ ಶಾಲಿನಿ ಗ್ರೌಂಡ್
  • ಆರ್ ವಿ ಮೆಟ್ರೋ ನಿಲ್ದಾಣ
  • ಸೌತ್ ಎಂಡ್ ಸರ್ಕಲ್
  • ಜೆಸಿ ರಸ್ತೆ
  • ಟೌನ್ ಹಾಲ್
  • ಕಾರ್ಪೊರೇಷನ್
  • ಮೈಸೂರ್ ಬ್ಯಾಂಕ್ ಸರ್ಕಲ್
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಇದನ್ನೂ ಓದಿ: ನಾಳೆ ಸಂಪೂರ್ಣ ಸ್ತಬ್ಧವಾಗುತ್ತಾ ಬೆಂಗಳೂರು? ಏನಿರುತ್ತೆ? ಏನಿರಲ್ಲ?

ಏಳನೇ ಮಾರ್ಗ

  • ಬೆಳಗ್ಗೆ 7:00 ಗಂಟೆಗೆ ರಾಜರಾಜೇಶ್ವರಿ ಆರ್ಚ್ ಇಂದ ಹೊರಡಲಿರುವ ರ್ಯಾಲಿ
  • ರಾಜ ರಾಜೇಶ್ವರಿ ನಗರ ಟು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೂಟ್
  • ರಾಜರಾಜೇಶ್ವರಿ ನಗರ ಗೇಟ್
  • ನಾಯಂಡಹಳ್ಳಿ
  • ಮೈಸೂರು ರಸ್ತೆ
  • ಚಾಮರಾಜಪೇಟೆ
  • ಗೂಡ್ಶೆಡ್ ರೋಡ್
  • ಮೆಜೆಸ್ಟಿಕ್ ರೈಲ್ವೆ ನಿಲ್ದಾಣ
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗದಲ್ಲಿ ಸಾಗಿ ಬರಲಿರುವ ರ್ಯಾಲಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು