ರೈಲು
ಬೆಂಗಳೂರು, ಏಪ್ರಿಲ್ 09: ಬೇಸಿಗೆ ರಜೆ (Summer Holiday) ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವವರಿಗೆ ನೈಋತ್ಯ ರೈಲ್ವೆ ಶಾಕ್ ನೀಡಿದೆ. ನೈಋತ್ಯ ರೈಲ್ವೆ (South Western Railway) ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರು-ಬಂಗಾರಪೇಟೆ (Bengaluru-Bangarpete) ಮತ್ತು ಮೈಸೂರು-ಅರಸಿಕೆರೆ (Mysore-Arsikere) ನಡುವೆ ಸಂಚರಿಸುವ ರೈಲುಗಳ ಸಂಚಾರವನ್ನು ರದ್ದು ಮಾಡಿದೆ. ಅಲ್ಲದೇ, ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ಮೂಲಕ ಮಾಹಿತಿ ನೀಡಿದೆ.
ವೈಟ್‌ಫೀಲ್ಡ್-ಕೃಷ್ಣರಾಜಪುರಂ ನಿಲ್ದಾಣಗಳ ನಡುವಿನ ಸೇತುವೆ ಕಾಮಗಾರಿ (ಸೇತುವೆ ಸಂಖ್ಯೆ.834) ಕಾರಣ ಬೆಂಗಳೂರು-ಬಂಗಾರಪೇಟೆ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಮಾರ್ಗ ಬದಲಾವಣೆ ಮಾಡಿದೆ. ರೈಲು ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡಿದೆ.
ರೈಲುಗಳ ರದ್ದತಿ:
- ರೈಲು ಸಂಖ್ಯೆ 06527: ಬಂಗಾರಪೇಟೆ-ಎಸ್ಎಮ್ವಿಟಿ ಬೆಂಗಳೂರು ಮೆಮು ವಿಶೇಷ ರೈಲು ಏಪ್ರಿಲ್ 12, 15, 19 ಮತ್ತು 22, 2025 ರಂದು ರದ್ದಾಗಲಿದೆ.
- ರೈಲು ಸಂಖ್ಯೆ 06528: ಎಸ್ಎಮ್ವಿಟಿ ಬೆಂಗಳೂರು-ಬಂಗಾರಪೇಟೆ ಮೆಮು ವಿಶೇಷ ರೈಲು ಏಪ್ರಿಲ್ 13, 16, 20 ಮತ್ತು 23, 2025 ರಂದು ರದ್ದಾಗಲಿದೆ.
ರೈಲುಗಳ ಭಾಗಶಃ ರದ್ದು
ರೈಲು ಸಂಖ್ಯೆ 16521: ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 15 ಮತ್ತು 22 ರಂದು ವೈಟ್‌ಫೀಲ್ಡ್-ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಸಂಚಾರ ರದ್ದಾಗಲಿದೆ. ಇದು ವೈಟ್‌ಫೀಲ್ಡ್‌ನಲ್ಲಿ ಅಲ್ಪಾವಧಿಗೆ ಕೊನೆಗೊಳ್ಳುತ್ತದೆ.
ರೈಲುಗಳ ಮಾರ್ಗ ಬದಲಾವಣೆ:
- ರೈಲು ಸಂಖ್ಯೆ 06269: ಮೈಸೂರು-ಎಸ್ಎಮ್ವಿಟಿ ಬೆಂಗಳೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು, ಏಪ್ರಿಲ್ 12, 15, 19 ಮತ್ತು 22 ರಂದು ಕೆಎಸ್ಆರ್ ಬೆಂಗಳೂರು ಮೂಲಕ ಸಂಚರಿಸುತ್ತದೆ. ಈ ರೈಲು ಇನ್ಮುಂದೆ ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿಲುಗಡೆಯಾಗುವುದಿಲ್ಲ.
- ರೈಲು ಸಂಖ್ಯೆ 06270: ಎಸ್ಎಮ್ವಿಟಿ ಬೆಂಗಳೂರು-ಮೈಸೂರು ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು, ಏಪ್ರಿಲ್ 15 ಮತ್ತು 22 ರಂದು ಎಸ್ಎಮ್ವಿಟಿ ಬೆಂಗಳೂರು, ಬಾಣಸವಾಡಿ, ಹೆಬ್ಬಾಳ, ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ಮೂಲಕ ಸಂಚರಿಸುತ್ತದೆ. ಈ ರೈಲು ಕೂಡ ಇನ್ಮುಂದೆ ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ ನಿಲುಗಡೆಯಾಗುವುದಿಲ್ಲ.
- ರೈಲು ಸಂಖ್ಯೆ 11013: ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಯಮತ್ತೂರು ಡೈಲಿ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 14 ಮತ್ತು 21 ಗೌರಿಬಿದನೂರು, ಯಲಹಂಕ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಕರ್ಮೇಲಾರಾಮ್ ಮತ್ತು ಹೊಸೂರು ನಿಲ್ದಾಣಗಳ ಮೂಲಕ ಸಂಚರಿಸುತ್ತದೆ. ಇದು ಬೆಂಗಳೂರು ಪೂರ್ವ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಎಸ್‌ಆರ್ ಬೆಂಗಳೂರಿನಲ್ಲಿ ನಿಲುಗಡೆಯಾಗುವುದಿಲ್ಲ. ಆದಾಗ್ಯೂ, ಇದು ಯಶವಂತಪುರದಲ್ಲಿ ತಾತ್ಕಾಲಿಕ ನಿಲುಗಡೆಯಾಗುತ್ತದೆ. ರಾತ್ರಿ 09:20ಕ್ಕೆ ಯಶವಂತಪುರಕ್ಕೆ ಆಗಮಿಸುವ ರೈಲು 09:40ಕ್ಕೆ ಹೊರಡುತ್ತದೆ.
ಟ್ವಿಟರ್ ಪೋಸ್ಟ್
ರೈಲುಗಳ ನಿಯಂತ್ರಣ ಮತ್ತು ಮರು ವೇಳಾಪಟ್ಟಿ:
- ರೈಲು ಸಂಖ್ಯೆ 11301: ಸಿಎಸ್‌ಎಂಟಿ ಮುಂಬೈ- ಕೆಎಸ್‌ಆರ್ ಬೆಂಗಳೂರು ಉದ್ಯಾನ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 12 ಮತ್ತು 19, 2025 ರಂದು ಮಾರ್ಗದಲ್ಲಿ ಕ್ರಮವಾಗಿ 45 ನಿಮಿಷ ಮತ್ತು 30 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
- ರೈಲು ಸಂಖ್ಯೆ 16594: ನಾಂದೇಡ್ ಕೆಎಸ್ಆರ್-ಬೆಂಗಳೂರು ಡಾಲಿ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಏಪ್ರಿಲ್ 12 ಮತ್ತು 19 ರಂದು ಕ್ರಮವಾಗಿ 140 ನಿಮಿಷ ಮತ್ತು 130 ನಿಮಿಷಗಳ ಕಾಲ ಮಾರ್ಗದಲ್ಲಿ ನಿಲ್ಲಿಸಲಾಗುತ್ತದೆ.
- ರೈಲು ಸಂಖ್ಯೆ 12658: ಕೆಎಸ್ಆರ್ ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 15 ಮತ್ತು 22, 2025 ರಂದು ಬೆಂಗಳೂರು ಕಂಟೋನ್ಮೆಂಟ್‌ನಲ್ಲಿ 10 ನಿಮಿಷಗಳ ಕಾಲ ಸಂಚಾರವನ್ನು ನಿಲ್ಲಿಸಲಾಗುತ್ತದೆ
- ರೈಲು ಸಂಖ್ಯೆ 22697: ಎಸ್‌ಎಸ್‌ಎಸ್ ಹುಬ್ಬಳ್ಳಿ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ 35 ನಿಮಿಷಗಳ ಕಾಲ ಸಂಚಾರವನ್ನು ಬದಲಾಯಿಸಲಾಗುತ್ತದೆ.
ಮೈಸೂರು ವಿಭಾಗದ ಹಬನಘಟ್ಟ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಕಾಲುವೆ ದಾಟುವ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ, ರೈಲು ಸಂಚಾರದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.
ರೈಲುಗಳ ಸಂಚಾರ ರದ್ದು:
- ರೈಲು ಸಂಖ್ಯೆ 56267: ಅರಸಿಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ಸಂಚಾರ ಏಪ್ರಿಲ್ 10, 12, 14, 29, ಮೇ 03, 10 ಮತ್ತು ಜೂನ್ 10 ರಂದು ರದ್ದಾಗಲಿದೆ.
- ರೈಲು ಸಂಖ್ಯೆ 16206: ಮೈಸೂರು-ತಾಳಗುಪ್ಪ ಡೈಲಿ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 16205 ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲುಗಳು ಜೂನ್ 10 ರಂದು ರದ್ದಾಗಲಿವೆ.
ರೈಲುಗಳ ಸಂಚಾರ ಭಾಗಶಃ ರದ್ದು:
- ರೈಲು ಸಂಖ್ಯೆ 16225: ಶಿವಮೊಗ್ಗ-ಮೈಸೂರು ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರು-ಅರಸೀಕರೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಮೈಸೂರಿನ ಬದಲು ಅರಸೀಕೆರೆಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ಇದನ್ನೂ ಓದಿ: ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ರೈಲುಗಳ ನಿಯಂತ್ರಣ/ತಡವಾಗಿ ಪ್ರಾರಂಭ
- ರೈಲು ಸಂಖ್ಯೆ 56266: ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ ರೈಲು ಮಾರ್ಗ ಮಧ್ಯದಲ್ಲಿ 50 ನಿಮಿಷ ಕಾಲ ನಿಯಂತ್ರಿಸಲಾಗುತ್ತದೆ.
- ರೈಲು ಸಂಖ್ಯೆ 56265: ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ಮತ್ತು ರೈಲು ಸಂಖ್ಯೆ 06269: ಮೈಸೂರು-ಎಸ್‌ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ ರೈಲುಗಳು ತಮ್ಮ ಮೂಲ ನಿಲ್ದಾಣದಿಂದ ಜೂನ್ 10, 2025 ರಂದು 60 ನಿಮಿಷ ತಡವಾಗಿ ಹೊರಡಲಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ