AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರೇ ನಂ. 2: ಮುಂಬೈ ಹಿಂದಿಕ್ಕಿ ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲವಾದ ನಮ್ಮ ಮೆಟ್ರೋ

ಪಿಂಕ್ ಲೈನ್‌ನ 7.5 ಕಿ.ಮೀ. ಮಾರ್ಗ ಇಂದು ಲೋಕಾರ್ಪಣೆಯಾಗುತ್ತಿದ್ದಂತೆ ನಮ್ಮ ಮೆಟ್ರೋ ಜಾಲ 103.6 ಕಿ.ಮೀ.ಗೆ ಏರಿಕೆಯಾಗಲಿದೆ. ಮುಂಬೈ ಹಿಂದಿಕ್ಕಿ, ದೆಹಲಿ ಬಳಿಕ ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿದ ನಗರ ಎಂಬ ಖ್ಯಾತಿ ಬೆಂಗಳೂರಿಗೆ ಸಿಗಲಿದೆ. ಈ ಮಾರ್ಗ ಶನಿವಾರದಿಂದ ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದೆ.

ಬೆಂಗಳೂರೇ ನಂ. 2: ಮುಂಬೈ ಹಿಂದಿಕ್ಕಿ ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲವಾದ ನಮ್ಮ ಮೆಟ್ರೋ
ಬೆಂಗಳೂರು ಮೆಟ್ರೋ
ಕಿರಣ್​ ಸೂರ್ಯ
| Edited By: |

Updated on: Nov 13, 2026 | 9:14 AM

Share

ಬೆಂಗಳೂರು, ನವೆಂಬರ್ 13: ಪಿಂಕ್ ಲೈನ್‌ನ 7.5 ಕಿ.ಮೀ. ಮಾರ್ಗ ಇಂದು ಲೋಕಾರ್ಪಣೆಯಾಗುತ್ತಿದ್ದಂತೆಯೇ ನಮ್ಮ ಮೆಟ್ರೋ ಮತ್ತೊಂದು ಮೈಲಿಗಲ್ಲು ತಲುಪಲಿದೆ. ಒಟ್ಟು 103.6 ಕಿ.ಮೀ. ಜಾಲದೊಂದಿಗೆ ಬೆಂಗಳೂರು ನಗರವು ಮುಂಬೈಯನ್ನು ಹಿಂದಿಕ್ಕಿ ದೆಹಲಿಯ ನಂತರದ ಸ್ಥಾನಕ್ಕೇರಲಿದೆ. ಅಂದರೆ, ಎರಡನೇ ಸ್ಥಾನ ಪಡೆಯಲಿದೆ.

ದೇಶದ ಮೆಟ್ರೋ ಜಾಲಗಳ ಹೋಲಿಕೆ

ದೆಹಲಿ ಮೆಟ್ರೋ 374.5 ಕಿ.ಮೀ. ಜಾಲದೊಂದಿಗೆ ಮೊದಲ ಸ್ಥಾನದಲ್ಲಿದೆ. ಮುಂಬೈನಲ್ಲಿ 102 ಕಿ.ಮೀ. (ಮುಂಬೈ 91 ಕಿ.ಮೀ., ನವಿ ಮುಂಬೈ 11.1 ಕಿ.ಮೀ.) ಮೆಟ್ರೋ ಮಾರ್ಗವಿದೆ. ನಂತರದ ಸ್ಥಾನಗಳಲ್ಲಿ ಕೋಲ್ಕತ್ತಾ (73–74 ಕಿ.ಮೀ.), ಹೈದರಾಬಾದ್ (69), ಚೆನ್ನೈ (68.7), ಅಹಮದಾಬಾದ್–ಗಾಂಧಿನಗರ (65), ನಾಗ್ಪುರ (38.2) ಮತ್ತು ಪುಣೆ (33 ಕಿ.ಮೀ.) ಇವೆ. ನಮ್ಮ ಮೆಟ್ರೋಗಿಂತ ಮೊದಲೇ ಆರಂಭವಾದ ಹಲವು ನಗರಗಳನ್ನು ಬೆಂಗಳೂರು ಮೀರಿಸಿದ್ದು, ಅತಿ ವೇಗವಾಗಿ ಬೆಳೆದ ಮೆಟ್ರೋ ಎಂಬ ಖ್ಯಾತಿಯೂ ಇದರದ್ದಾಗಿದೆ.

ಪಿಂಕ್ ಲೈನ್ ಟಿಕೆಟ್ ದರ

ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರದವರೆಗಿನ ಈ ಮಾರ್ಗದಲ್ಲಿ ಆರು ನಿಲ್ದಾಣಗಳಿದ್ದು, ₹3,470 ಕೋಟಿ ವೆಚ್ಚವಾಗಿದೆ. ನವೆಂಬರ್ 14ರ ಬೆಳಗ್ಗೆ 6ರಿಂದ ವಾಣಿಜ್ಯ ಸಂಚಾರ ಆರಂಭವಾಗಲಿದ್ದು, ಐದು ರೈಲುಗಳು ಸುಮಾರು 8 ನಿಮಿಷಕ್ಕೊಂದರಂತೆ ಸಂಚರಿಸಲಿವೆ. ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರಕ್ಕೆ ₹30, ಹುಳಿಮಾವು ಅಥವಾ ಐಐಎಂಬಿ (ಬಿಳೇಕಹಳ್ಳಿ)ವರೆಗೆ ₹20, ಎನ್.ಎಸ್. ಪಾಳ್ಯ–ಜೆ.ಪಿ. ನಗರ 4ನೇ ಹಂತದವರೆಗೆ ₹10 ದರ ನಿಗದಿಯಾಗಿದೆ.

ಪಿಂಕ್ ಲೈನ್‌ನ ವಿಶೇಷಗಳೇನು?

ಒಟ್ಟು 21.26 ಕಿ.ಮೀ. ಉದ್ದದ ಪಿಂಕ್ ಲೈನ್‌ನಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 18 ನಿಲ್ದಾಣಗಳಿರಲಿದ್ದು, 12 ಅಂಡರ್​ಗ್ರೌಂಡ್ ಹಾಗೂ 6 ಎಲಿವೇಟೆಡ್ ನಿಲ್ದಾಣಗಳಾಗಿವೆ. ಅಂಡರ್​ಗ್ರೌಂಡ್ ಭಾಗ ಇನ್ನೂ ನಿರ್ಮಾಣ ಹಂತದಲ್ಲಿದೆ. ಎಲಿವೇಟೆಡ್ ಮಾರ್ಗ ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಸಾಗಲಿದೆ. ಬಿಇಎಂಎಲ್ ನಿರ್ಮಿತ ಆರು ಬೋಗಿಗಳ ರೈಲುಗಳು ಚಾಲಕರಹಿತ ಸಂಚಾರ ತಂತ್ರಜ್ಞಾನ ಹೊಂದಿದ್ದು, ಗರಿಷ್ಠ 90 ಕಿ.ಮೀ. ವೇಗ ಹಾಗೂ 2,008 ಪ್ರಯಾಣಿಕರ ಸಾಮರ್ಥ್ಯ ಹೊಂದಿವೆ. ಎಲಿವೇಟೆಡ್ ಮಾರ್ಗದ ಆರೂ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಗೇಟ್‌ಗಳನ್ನು ಅಳವಡಿಸಲು ಯೋಜಿಸಲಾಗಿದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಹಳದಿ ಮಾರ್ಗದೊಂದಿಗೆ, ಎಂ.ಜಿ. ರಸ್ತೆಯಲ್ಲಿ ನೇರಳೆ ಮಾರ್ಗದೊಂದಿಗೆ ಸಂಪರ್ಕ ಸಿಗಲಿದೆ.

ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋಗೆ ಇಂದು ಪ್ರಧಾನಿ ಮೋದಿ ಚಾಲನೆ: 100 ಕಿಮೀ ಗಡಿ ದಾಟಲಿದೆ ಬೆಂಗಳೂರಿನ ಮೆಟ್ರೋ ಜಾಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ