AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಸ್ ರಸ್ತೆಯಲ್ಲಿ ಲೇನ್ ಶಿಸ್ತು ಉಲ್ಲಂಘನೆ, ಅತಿವೇಗದ ಚಾಲನೆ ಮಾಡಿದರೆ ಹುಷಾರ್; ಪತ್ತೆ ಮಾಡುತ್ತೆ ಲೇಸರ್ ಟ್ರ್ಯಾಕ್ ಗನ್

ನೈಸ್ ರಸ್ತೆಯಲ್ಲಿ ಎರ್ರಾಬಿರ್ರಿ ವಾಹನ ಚಾಲನೆ ಮಾಡುವುದು, ಅತಿವೇಗದಲ್ಲಿ ಓಡಿಸುವುದು, ಲೇನ್ ಶಿಸ್ತು ಕಾಪಾಡದೇ ಇರುವುದರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಕಠಿಣ ಕ್ರಮ ಆರಂಭಿಸಿದ್ದಾರೆ. ಲೇಸರ್ ಟ್ರ್ಯಾಕ್ ಗನ್ ಮೂಲಕ ತಪ್ಪಿತಸ್ಥರನ್ನು ಪತ್ತೆಮಾಡಿ ದಂಡ ವಿಧಿಸುವ ಕಾರ್ಯಾಚರಣೆ ಈಗಾಗಲೇ ಆರಂಭವಾಗಿದೆ. ಹಾಗಾದರೆ ಯಾವ ವಾಹನಕ್ಕೆ ಎಷ್ಟು ವೇಗದ ಮಿತಿ? ಯಾವ ವಾಹನ ಯಾವ ಲೇನ್​​ನಲ್ಲಿ ಸಂಚರಿಸಬೇಕು? ತಪ್ಪಿದರೆ ಏನಾಗುತ್ತದೆ? ಎಲ್ಲ ಮಾಹಿತಿ ಇಲ್ಲಿದೆ.

ನೈಸ್ ರಸ್ತೆಯಲ್ಲಿ ಲೇನ್ ಶಿಸ್ತು ಉಲ್ಲಂಘನೆ, ಅತಿವೇಗದ ಚಾಲನೆ ಮಾಡಿದರೆ ಹುಷಾರ್; ಪತ್ತೆ ಮಾಡುತ್ತೆ ಲೇಸರ್ ಟ್ರ್ಯಾಕ್ ಗನ್
ನೈಸ್ ರಸ್ತೆ (ಶಂಗ್ರಹ ಚಿತ್ರ)
ರಾಚಪ್ಪಾಜಿ ನಾಯ್ಕ್
| Edited By: |

Updated on:Aug 09, 2024 | 9:24 AM

Share

ಬೆಂಗಳೂರು, ಆಗಸ್ಟ್ 9: ನೈಸ್ ರಸ್ತೆಯಲ್ಲಿ ಅತಿವೇಗದ ವಾಹನ ಚಾಲನೆ ಮಾಡುವವರನ್ನು ನಿಯಂತ್ರಿಸಲು ಬೆಂಗಳೂರು ಸಂಚಾರ ಪೊಲೀಸರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ನೈಸ್ ರಸ್ತೆಯಲ್ಲಿ ಓವರ್​ ಸ್ಪೀಡ್ ಚಾಲನೆ ಮಾಡುವವರ ಮೇಲೆ ಕಣ್ಣಿಡಲು ‘ಲೇಸರ್ ಟ್ರ್ಯಾಕ್ ಗನ್’ ಅಳವಡಿಸಲಾಗಿದ್ದು, ಇದರ ಮೂಲಕ ಅತಿವೇಗದ ಚಾಲನೆ ಮಾಡಿದವರನ್ನು ಪತ್ತೆಹಚ್ಚಿ 1,000 ರೂ. ದಂಡ ವಿಧಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ‘ಲೇಸರ್ ಟ್ರ್ಯಾಕ್ ಗನ್’ ಅಳವಡಿಸಲಾಗಿದೆ.

ಏನಿದು ಲೇಸರ್ ಟ್ರ್ಯಾಕ್ ಗನ್?

ಲೇಸರ್ ಟ್ರ್ಯಾಕ್ ಗನ್ ಎಂಬುದು ವೇಹನಗಳು ಚಲಿಸುತ್ತಿರುವ ವೇಗವನ್ನು ಪತ್ತೆಹಚ್ಚುವ ಒಂದು ಸಾಧನ. ನೈಸ್ ರಸ್ತೆಯಲ್ಲಿ ಅಲ್ಲಲ್ಲಿ ಪ್ರಯಾಣಿಕರ ಅರಿವಿಗೆ ಬಾರದಂತೆ ಈ ಸಾಧನದೊಂದಿಗೆ ಸಂಚಾರ ಪೊಲೀಸರು ಇರಲಿದ್ದಾರೆ. ನಿಗದಿತ ಮಿತಿಗಿಂತ ವೇಗವಾಗಿ ವಾಹನ ಸಂಚರಿಸಿದರೆ ಲೇಸರ್ ಟ್ರ್ಯಾಕ್ ಗನ್ ಅದನ್ನು ಕ್ಯಾಪ್ಚರ್ ಮಾಡುತ್ತದೆ. ವಾಹನದ ನಂಬರ್ ಅನ್ನು ಈ ಯಂತ್ರ ಡಿಟೆಕ್ಟ್ ಮಾಡುತ್ತದೆ. ಲೇಸರ್ ಟ್ರ್ಯಾಕ್ ಗನ್ ಇರಿಸಿದ ಜಾಗದಿಂದ ಟೋಲ್ ಬಳಿಗೆ ವಾಹನದ ಮಾಹಿತಿ ಹೋಗುತ್ತದೆ. ವಾಹನದ ಫೋಟೊ ಹಾಗೂ ನಂಬರ್ ವಾಟ್ಸ್​ಆ್ಯಪ್ ಮೂಲಕ ಟೋಲ್ ಬಳಿ ಇರುವ ಸಿಬ್ಬಂದಿಗೆ ರವಾನೆಯಾಗುತ್ತದೆ. ಟೋಲ್ ಬಳಿ ವಾಹನದ ವೇಗ ಕಡಿಮೆ ಆದಾಗ ವಾಹನ ತಡೆದು ಟ್ರಾಫಿಕ್ ಪೊಲೀಸರು ದಂಡ ಸ್ವೀಕರಿಸಲಿದ್ದಾರೆ.

ಒಂದು ವಾರದಿಂದ ನಡೆಯುತ್ತಿದೆ ದಂಡ ವಸೂಲಿ

ಕಳೆದ ಒಂದು ವಾರದಿಂದ ಲೇಸರ್ ಟ್ರ್ಯಾಕ್ ಗನ್ ಮೂಲಕ ಅತಿವೇಗದ ಚಾಲನೆ ಪತ್ತೆಹಚ್ಚಿ ದಂಡ ವಸೂಲಿ ಮಾಡಲಾಗುತ್ತಿದೆ. ಒಂದೊಂದು ಮಾದರಿಯ ವಾಹನಕ್ಕೆ ಒಂದೊಂದು ವೇಗದ ಮಿತಿ ನಿಗದಿಪಡಿಸಲಾಗಿದೆ. ಆ ವೇಗದ ಮಿತಿ ಮೀರಿ ಚಾಲನೆ ಮಾಡಿದರೆ ದಂಡ ಬೀಳಲಿದೆ. ಇಷ್ಟೇ ಅಲ್ಲದೆ, ನಿಗದಿತ ಟ್ರ್ಯಾಕ್​​ನಲ್ಲಿಯೇ ವಾಹನಗಳು ಸಂಚರಿಸಬೇಕು. ಟ್ರ್ಯಾಕ್ ದಾಟಿ ಬಂದರೂ ಫೈನ್ ಬೀಳುವುದು ಖಚಿತವಾಗಿದೆ.

ಯಾವ ವಾಹನಕ್ಕೆ ಎಷ್ಟು ವೇಗದ ಮಿತಿ?

8 ಜನಕ್ಕಿಂತ ಕಡಿಮೆ ಸಾಮರ್ಥ್ಯ ಹೊಂದಿರುವ ವಾಹನಗಳಿಗೆ 120 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿದೆ. 8 ಜನರಿಗಿಂತ ಅಧಿಕ ಸಾಮರ್ಥ್ಯ ಇರುವ ವಾಹನ ವೇಗದ ಮಿತಿ 80 ಕಿಮೀ ಆಗಿದೆ.

ಯಾವ ವಾಹನ ಯಾವ ಟ್ರ್ಯಾಕ್​​ನಲ್ಲಿ ಸಂಚರಿಸಬೇಕು?

ನೈಸ್ ರಸ್ತೆಯ ಬಲ ಭಾಗದಲ್ಲಿ ಕಾರುಗಳು ಸಂಚರಿಸಬೇಕು. ಬಲ ಭಾಗದಲ್ಲಿ ಸಂಚರಿಸುವ ಕಾರಿನ ವೇಗದ ಮಿತಿ ಗಂಟೆಗೆ 120 ಕಿ.ಮೀ ಇರಬೇಕು. 121 ಕಿಮೀ ಹಾಗೂ ಅದಕ್ಕಿಂತ ಹೆಚ್ಚು ವೇಗವಾಗಿ ಸಾಗಿದರೆ ದಂಡ ಬೀಳಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಫ್ಯಾನ್ಸಿ ನಂಬರ್ ಹರಾಜು: ಯಾವ ನಂಬರ್​ಗೆ ಎಷ್ಟು ಹಣ? ಇಲ್ಲಿದೆ ಪಟ್ಟಿ

ರಸ್ತೆಯ ಎಡಭಾಗದ ಟ್ರ್ಯಾಕ್​​ನಲ್ಲಿ ಬೈಕ್ ಹಾಗೂ ಗೂಡ್ಸ್ ವಾಹನಗಳು ಸಂಚರಿಸಬೇಕು. ಈ ವಾಹನಗಳ ವೇಗದ ಮಿತಿ ಗಂಟೆಗೆ 80 ಕಿಮೀ ಆಗಿದೆ. 81 ಕಿಮೀ ಹಾಗೂ ಅಧಿಕ ವೇಗದಲ್ಲಿ ಚಾಲನೆ ಮಾಡಿದರೆ ದಂಡ ತೆರಬೇಕಾಗಲಿದೆ. ಲೇಸರ್ ಟ್ರ್ಯಾಕ್ ಗನ್ ಸಹಾಯದಿಂದ ದಿನಕ್ಕೆ 30 ರಿಂದ 35 ಪ್ರಕರಣಗಳು ದಾಖಲಾಗುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:11 am, Fri, 9 August 24

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ