AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: 18 ತಿಂಗಳಲ್ಲಿ ರಸ್ತೆಗಿಳಿಯಲಿವೆ 4,500 ಪರಿಸರ ಸ್ನೇಹಿ ಇ-ಬಸ್‌ಗಳು!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮುಂದಿನ 18 ತಿಂಗಳಲ್ಲಿ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ತನ್ನ ಪಡೆಗೆ ಸೇರ್ಪಡೆಗೊಳಿಸಲಿದೆ. ಕೇಂದ್ರ ಸರ್ಕಾರದ 'ಪಿಎಂ ಇ-ಡ್ರೈವ್' ಯೋಜನೆಯಡಿ ಈ ಬಸ್‌ಗಳು ಸಿಗಲಿದ್ದು, ಬಿಎಂಟಿಸಿಯ ಒಟ್ಟು ಬಸ್‌ಗಳ ಸಂಖ್ಯೆ 11,000ಕ್ಕೆ ಏರಿಕೆಯಾಗಲಿದೆ. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ಕಡಿಮೆಯಾಗುವ ನಿರೀಕ್ಷೆಯಿದೆ.

ಬೆಂಗಳೂರು: 18 ತಿಂಗಳಲ್ಲಿ ರಸ್ತೆಗಿಳಿಯಲಿವೆ 4,500 ಪರಿಸರ ಸ್ನೇಹಿ ಇ-ಬಸ್‌ಗಳು!
ಬಿಎಂಟಿಸಿ ಇ-ಬಸ್Image Credit source: The Indian Express
ಭಾವನಾ ಹೆಗಡೆ
|

Updated on: Sep 05, 2026 | 8:46 AM

Share

ಮುಖ್ಯಾಂಶಗಳು

  • ಬಿಎಂಟಿಸಿಗೆ 4,500 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸಲು ಸಚಿವ ಸಂಪುಟ ಅನುಮೋದನೆ.
  • ಮುಂದಿನ 18 ತಿಂಗಳಲ್ಲಿ ಸಂಸ್ಥೆಯ ಅರ್ಧಕ್ಕರ್ಧ ಬಸ್‌ಗಳು ಎಲೆಕ್ಟ್ರಿಕ್ ಆಗಿ ಬದಲಾವಣೆ.
  • ಹೊಸ ಇ-ಬಸ್‌ಗಳ ಆಗಮನದಿಂದ ಬಿಎಂಟಿಸಿ ಒಟ್ಟು ಬಸ್‌ಗಳ ಸಂಖ್ಯೆ 11,000ಕ್ಕೆ ಏರಿಕೆ.

ಬೆಂಗಳೂರು, ಸೆಪ್ಟೆಂಬರ್ 05: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಲು ಮತ್ತು ಪರಿಸರ ಸ್ನೇಹಿಯಾಗಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದೆ. ಕೇಂದ್ರ ಸರ್ಕಾರದ ‘ಪಿಎಂ ಇ-ಡ್ರೈವ್’ ಯೋಜನೆಯಡಿ 4,500 ಹೊಸ ವಿದ್ಯುತ್‌ ಚಾಲಿತ (ಇ-ಬಸ್) ಬಸ್‌ಗಳನ್ನು ಪಡೆದುಕೊಳ್ಳಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಮುಂದಿನ 18 ತಿಂಗಳಲ್ಲಿ ಬಿಎಂಟಿಸಿಯ ಒಟ್ಟು ಬಸ್‌ಗಳ ಪೈಕಿ ಶೇಕಡಾ 50ಕ್ಕಿಂತ ಹೆಚ್ಚು ಭಾಗ ಎಲೆಕ್ಟ್ರಿಕ್ ಬಸ್‌ಗಳಾಗಲಿವೆ.

ಪ್ರಸ್ತುತ ಸ್ಥಿತಿ ಮತ್ತು ಹೊಸ ವಿಸ್ತರಣೆ

ಪ್ರಸ್ತುತ ಬಿಎಂಆರ್‌ಟಿಸಿ ಬಳಿ ಸುಮಾರು 7,000 ಬಸ್‌ಗಳಿದ್ದು, ಅವುಗಳಲ್ಲಿ 1,700 ಇ-ಬಸ್‌ಗಳು GCC ಮಾದರಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಹೊಸದಾಗಿ 4,500 ಇ-ಬಸ್‌ಗಳು ಸೇರ್ಪಡೆಯಾಗುವುದರ ಜೊತೆಗೆ, ಹಳೆಯ ಬಸ್‌ಗಳ ತೆರವು ಕಾರ್ಯಾಚರಣೆಯ ನಂತರ ಸಂಸ್ಥೆಯ ಒಟ್ಟು ಬಸ್‌ಗಳ ಸಂಖ್ಯೆ ಸುಮಾರು 11,000ಕ್ಕೆ ಏರಿಕೆಯಾಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬಸ್‌ಗಳ ವಿವರ ಮತ್ತು ಯೋಜನೆ

ಖಾಸಗಿ ಸಂಸ್ಥೆಗಳು ಬಸ್‌ಗಳನ್ನು ಪೂರೈಸಿ ನಿರ್ವಹಣೆ ಮಾಡಲಿದ್ದು, ಬಿಎಂಟಿಸಿ ಪ್ರತಿ ಕಿಲೋಮೀಟರ್ ಆಧಾರದಲ್ಲಿ ದರ ಪಾವತಿಸಲಿದೆ. ಈ 4,500 ಬಸ್‌ಗಳಲ್ಲಿ:

  • 3,500 ನೋನ್-ಎಸಿ 12-ಮೀಟರ್ ಬಸ್‌ಗಳು
  • 300 ಎಸಿ 12-ಮೀಟರ್ ಬಸ್‌ಗಳು
  • 600 ನೋನ್-ಎಸಿ 9-ಮೀಟರ್ ಬಸ್‌ಗಳು
  • 100 ಎಸಿ 9-ಮೀಟರ್ ಬಸ್‌ಗಳು ಸೇರಿವೆ.

ಒಪ್ಪಂದ ಅಂತಿಮಗೊಂಡ 6 ತಿಂಗಳಲ್ಲಿ ಮೊದಲ ಹಂತದ ಬಸ್‌ಗಳು ರಸ್ತೆಗೆ ಇಳಿಯಲಿವೆ.

ಇದನ್ನೂ ಓದಿ ಬಿಎಂಟಿಸಿ ಬಸ್ಸುಗಳಲ್ಲಿ ಸ್ಪೇರ್ ಪಾರ್ಟ್ಸ್ ಅಭಾವ: ನಡುರಸ್ತೆಯಲ್ಲೇ ಬಸ್ ಕೆಟ್ಟು ಚಾಲಕರು-ಪ್ರಯಾಣಿಕರ ಪರದಾಟ

ಆರ್ಥಿಕ ನೆರವು ಮತ್ತು ಸವಾಲುಗಳು

ಕೇಂದ್ರ ಸರ್ಕಾರವು ಈ ಬಸ್‌ಗಳನ್ನು ಒದಗಿಸುತ್ತಿದ್ದು, ರಾಜ್ಯ ಸರ್ಕಾರವು ಬಿಎಂಟಿಸಿಗೆ ವಾರ್ಷಿಕ 600 ಕೋಟಿ ರೂಪಾಯಿ ಧನಸಹಾಯ ನೀಡಲಿದೆ. ಆದಾಗ್ಯೂ, ಕಾರ್ಯಾಚರಣೆಯ ವೆಚ್ಚದಿಂದ ಸಂಸ್ಥೆಗೆ ವಾರ್ಷಿಕ ಸುಮಾರು 1,000 ಕೋಟಿ ರೂ.ಗಳ ಕೊರತೆ ಎದುರಾಗಲಿದ್ದು, ಅದನ್ನು ಸ್ವಂತ ಸಂಪನ್ಮೂಲದಿಂದ ಭರಿಸಬೇಕಾಗುತ್ತದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, “ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಪರಿಸರ ಮಾಲಿನ್ಯ ತಡೆಯಲು ಈ ಯೋಜನೆ ಸಹಕಾರಿಯಾಗಲಿದೆ” ಎಂದು ತಿಳಿಸಿದ್ದಾರೆ. ಇದಲ್ಲದೆ, ಹೊಸ ಡೆಪೋಗಳ ನಿರ್ಮಾಣ ಹಾಗೂ ನಿಲ್ದಾಣಗಳ ಮೇಲ್ದರ್ಜೆಗೇರಿಸಲು ಕೇಂದ್ರದಿಂದ 2,000 ಕೋಟಿ ರೂ. ನೆರವು ಪಡೆಯಲು ಚಿಂತಿಸಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ