ಅವಧಿ ಮೀರಿ ಪಾರ್ಟಿ, ಡ್ರಗ್ಸ್ ಬಳಕೆ: ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಮೇಲೆ ಸಿಸಿಬಿ ದಾಳಿ
ಬೆಂಗಳೂರಿನ ಪ್ರತಿಷ್ಠಿತ JW ಮ್ಯಾರಿಯಟ್ ಹೋಟೆಲ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ತಡರಾತ್ರಿ ಅವಧಿ ಮೀರಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಆರೋಪ ಕೇಳಿಬಂದಿದೆ. ದಾಳಿ ವೇಳೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 07: ಅವಧಿ ಮೀರಿ ಹೋಟೆಲ್ನಲ್ಲಿ ಪಾರ್ಟಿ ಮತ್ತು ಡ್ರಗ್ಸ್ (drugs) ಬಳಕೆ ಆರೋಪ ಕೇಳಿಬಂದ ಹಿನ್ನಲೆ ನಗರದ ಪ್ರತಿಷ್ಠಿತ JW ಮಾರಿಯೆಟ್ ಹೋಟೆಲ್ ಮೇಲೆ ಸಿಸಿಬಿ ದಾಳಿ (CCB raid) ಮಾಡಿದೆ. ಸಿಸಿಬಿ ಎಸಿಪಿ ಮಹಾನಂದ ನೇತೃತ್ವದಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 50ಕ್ಕೂ ಹೆಚ್ಚು ಜನ ಪಾರ್ಟಿ ಮಾಡುತ್ತಿದ್ದ ಬಗ್ಗೆ ನಿಖರ ಮಾಹಿತಿ ಪಡೆದು ಸಿಸಿಬಿ ಪೊಲೀಸರು ತಡರಾತ್ರಿ ಅವಧಿ ಮೀರಿ ಪಾರ್ಟಿ ಮಾಡುತ್ತಿದ್ದಾಗ ದಾಳಿ ಮಾಡಿದ್ದಾರೆ. ಸದ್ಯ ದಾಳಿ ವೇಳೆ ಓರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದ್ದಾರೆ.
ವಿದೇಶಿ ಪ್ರಜೆಗಳಿಂದ ಬೃಹತ್ ಪ್ರಮಾಣದ ಡ್ರಗ್ಸ್ ವಶಕ್ಕೆ: 9 ಜನರ ಬಂಧನ
ಇನ್ನು ಡ್ರಗ್ಸ್ ಸಂಗ್ರಹಿಸಿಟ್ಟಿದ್ದ ವಿದೇಶಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಮಾಹಿತಿ ಆಧರಿಸಿ ಬೆಂಗಳೂರಿನ ಏಳು ಕಡೆ ಯಲಹಂಕ ಉಪನಗರ ಠಾಣೆ ಪೊಲೀಸರಿಂದ ಕಾರ್ಯಾಚರಣೆ ಮಾಡಿ ಇಬ್ಬರು ವಿದೇಶಿ ಮಹಿಳೆಯರು ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ರೆಡಿಮೇಡ್ ಬಟ್ಟೆಗಳ ಪ್ಯಾಕ್ಗಳಲ್ಲಿ ಡ್ರಗ್ಸ್ ಮಾರಾಟ! ನೈಜೀರಿಯಾ ಪ್ರಜೆಗಳಿಬ್ಬರು ಪೊಲೀಸ್ ವಶಕ್ಕೆ
ಅಡ್ಮಾಕೊ ಬ್ರೈಟ್, ಎನ್ಕೇಟೈ ಕೋಫಿ, ಬೆನೆಡಿಕ್ಟ್, ಪ್ರಿಸ್ಕಿಲ್ ಸೇರಿ ಇತರರು ಬಂಧಿತರು. ದಾಳಿ ವೇಳೆ ಪಾಸ್ಪೋರ್ಟ್ ಅವಧಿ ಮೀರಿ ವಾಸವಿರುವುದು ಕೂಡ ಪತ್ತೆ ಆಗಿದೆ. ಯಲಹಂಕದ ದೊಡ್ಡಬೆಟ್ಟಹಳ್ಳಿ ಮನೆಯೊಂದರಲ್ಲಿ ಗಾಂಜಾ ಜಪ್ತಿ ಮಾಡಲಾಗಿದೆ. ಬಂಧಿತರಿಂದ 70 ಲಕ್ಷ ರೂ. ಮೌಲ್ಯದ 700 ಗ್ರಾಂ. ಎಂಡಿಎಂಎ ಸೀಜ್ ಮಾಡಲಾಗಿದೆ.
ಬರೋಬ್ಬರಿ 38 ಕೋಟಿ ರೂ ಮೌಲ್ಯದ ಡ್ರಗ್ಸ್ನ್ನು ಬೆಂಕಿಗಾಹುತಿ
ಇನ್ನು ಇತ್ತೀಚೆಗೆ ಸಿಲಿಕಾನ್ ಸಿಟಿಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸೀಜ್ ಆಗಿದ್ದ ಬರೋಬ್ಬರಿ 38 ಕೋಟಿ ರೂ ಮೌಲ್ಯದ ಡ್ರಗ್ಸ್ನ್ನು ಬೆಂಕಿಗೆ ಹಾಕುವ ಮೂಲಕ ನಾಶಪಡಿಸಲಾಗಿತ್ತು. ವೀಕೆಂಡ್ ಬಂತ್ತು ಅಂದ್ರೆ ಸಾಕು ಟೆಕ್ಕಿಗಳು, ಯುವಕ, ಯುವತಿಯರು ಗಾಂಜಾ, ಡ್ರಗ್ಸ್ ಅಂತಹ ಮತ್ತೆರಿಸುವ ಪದಾರ್ಥಗಳ ಮೂಲಕ ಪಾರ್ಟಿ ಮಾಡಲು ಹೋಗಿ ಪೊಲೀಸರ ಬಲೆಗೆ ಬಿದ್ದಿದ್ದರು.
ಇದನ್ನೂ ಓದಿ: ಮೈಸೂರಿನಲ್ಲೇ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಇದೇ ರೀತಿ ಕಳೆದ ಒಂದು ವರ್ಷದಲ್ಲಿ ಸಿಲಿಕಾನ್ ಸಿಟಿ ಹಾಗೂ ಔಟ್ ಸ್ಕಟ್ಸ್ ನಲ್ಲಿ ದಾಖಲಾಗಿದ್ದ ವಿವಿಧ ಪ್ರಕರಣಗಳಲ್ಲಿ ಸೀಜ್ ಮಾಡಲಾಗಿದ್ದ ವಿವಿಧ ಬಗೆಯ ಮಾದಕ ದ್ರವ್ಯ ವಸ್ತುಗಳನ್ನ ಸಿಟಿ ಪೊಲೀಸರು ನಾಶಪಡಿಸಿದ್ದರು.
ವರದಿ: ಪ್ರದೀಪ್ ಚಿಕ್ಕಾಟೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




