ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಜಮೀರ್ ಅಹ್ಮದ್​ ​ಕಾರಣ, ಭಾಸ್ಕರ್ ರಾವ್

| Updated By: ವಿವೇಕ ಬಿರಾದಾರ

Updated on: Jan 13, 2025 | 1:29 PM

ಚಾಮರಾಜಪೇಟೆಯ ವಿನಾಯಕನಗರದಲ್ಲಿ ನಡೆದ ಹಸುಗಳ ಕೆಚ್ಚಲು ಕೋಯ್ದ ಪ್ರಕರಣಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಅವರೇ ನೇರ ಕಾರಣ ಎಂದು ಬಿಜೆಪಿ ಮುಖಂಡ ಭಾಸ್ಕರ್ ರಾವ್ ಆರೋಪಿಸಿದ್ದಾರೆ. ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳನ್ನು ಓಡಿಸಲು ಇದು ಷಡ್ಯಂತ್ರ ಎಂದು ಹೇಳಿದ್ದಾರೆ. ಪಶು ಆಸ್ಪತ್ರೆ ಜಾಗ ಕಬಳಿಕೆಗೆ ಸಂಚು ರೂಪಿಸಲಾಗಿದೆ ಎಂದೂ ಆರೋಪಿಸಿದ್ದಾರೆ.ಅಮಾಯಕನನ್ನು ಬಂಧಿಸಿ ಪ್ರಕರಣ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂದು ಅವರು ಖಂಡಿಸಿದ್ದಾರೆ.

ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಜಮೀರ್ ಅಹ್ಮದ್​ ​ಕಾರಣ, ಭಾಸ್ಕರ್ ರಾವ್
ಭಾಸ್ಕರ್​ ರಾವ್​, ಜಮೀರ್​ ಅಹ್ಮದ್​
Follow us on

ಬೆಂಗಳೂರು, ಜನವರಿ 13: ಚಾಮರಾಜಪೇಟೆಯ (Chamrajpete) ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ (Cow Attack) ಘಟನೆಗೆ ಸಚಿವ ಜಮೀರ್ ಅಹ್ಮದ್​ ಖಾನ್ (Zameer Ahmed Khan)​​ ನೇರ ಕಾರಣ. ಕಡಿಮೆ‌ ಸಂಖ್ಯೆಯಲ್ಲಿರುವ ಹಿಂದೂಗಳನ್ನು ಓಡಿಸಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಭಾಸ್ಕರ್​ ರಾವ್ (Bhaskar Rao) ಆರೋಪಿಸಿದರು.

ಚಾಮರಾಜಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಹಸು ಸಾಕಿದವರನ್ನು ಓಡಿಸಲು, ಪಶು ಆಸ್ಪತ್ರೆ ಕಬಳಿಸಲು ಸಂಚು ರೂಪಿಸಿದ್ದಾರೆ. ಅಲ್ಲಿ ಪಶು ಆಸ್ಪತ್ರೆಯನ್ನು ನೆಲಸಮ ಮಾಡಿ ಶಾಲೆ ನಿರ್ಮಿಸಲು ಹೊರಟಿದ್ದಾರೆ. ಬೇರೆ ಕಡೆ ಶಾಲೆ ಕಟ್ಟಲಿ. ಆ ಭಾಗದಲ್ಲಿ 2,227 ಹಸುಗಳಿವೆ. ತಾಳ್ಮೆಯಿಂದ ಇರುವ ಕಾರಣ ರಕ್ತಪಾತ ಆಗಿಲ್ಲ ಎಂದರು.

ಮುಸ್ಲಿಮರಲ್ಲಿ ಒಳ್ಳೆಯವರಿದ್ದಾರೆ, ಆದರೆ ನಾಯಕತ್ವ ಪ್ರಶ್ನಿಸುತ್ತಿದ್ದೇನೆ. ಎಫ್​ಐಆರ್​ ಸರಿಯಾಗಿ ಹಾಕಿಲ್ಲ, ಅಮಾಯಕನನ್ನು ಕರೆತಂದು ಕೂರಿಸಿದ್ದಾರೆ. ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ್ದಾರೆ. ಪ್ರಕರಣ ಮುಚ್ಚಿಹಾಕಲು ಬಿಹಾರ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ನಿಜವಾದ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ, ಓರ್ವನ ಬಂಧನ

ಸಚಿವ ಜಮೀರ್ ಮೂರು ಹಸುಗಳನ್ನು ಕೊಡಿಸುತ್ತೇನೆ ಅಂದಿದ್ದಾರೆ. ಸಚಿವ ಜಮೀರ್​ಗೆ ಭಾವನೆಯೇ ಇಲ್ಲ, ಅದೇನು ಆಟದ ವಸ್ತುವೇ? ಸಾವಿರ ಗೋವು ತಂದು ಕೊಟ್ಟರೂ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ. ಜಮೀರ್ ಮಾಡುತ್ತಿರುವ ಈ ಕೆಲಸವನ್ನು ಮುಸ್ಲಿಮರೇ ಮೆಚ್ಚುವುದಿಲ್ಲ ಎಂದು ವಾಗ್ದಾಳಿ ಮಾಡಿದರು.

ಚಾಮರಾಜಪೇಟೆಯಲ್ಲಿ ಸಿಸಿಕ್ಯಾಮರಾಗಳು ಹೆಚ್ಚು ಅಳವಡಿಸಬೇಕು. ಜಮೀರ್ ಅಹಮ್ಮದ್​ ಬಾಲಬಿಚ್ಚಲು ಸಿಎಂ ಸಿದ್ದರಾಮಯ್ಯ ಕಾರಣ. ಕಲ್ಲು ಎಸೆಯುವವರು, ಬೆಂಕಿ ಹಚ್ಚುವವರನ್ನು ತಯಾರು ಮಾಡುತ್ತಿದ್ದಾರೆ. ಜಮೀರ್ ಅಹ್ಮದ್​ ಕೊಡುವ ಹಣಕ್ಕಾ ಕಾಂಗ್ರೆಸ್​ನವರು ಅವರ ಹಿಂದೆ ಹೋಗುತ್ತಾರೆ ಅಷ್ಟೇ. ಜಯನಗರ, ಬಿಟಿಎಂ ಲೇಔಟ್​ ಎಲ್ಲೂ ನಡೆಯದ ಘಟನೆ ಚಾಮರಾಜಪೇಟೆಯಲ್ಲಿ ಏಕೆ ನಡೆಯುತ್ತದೆ? ಎಂದು ಪ್ರಶ್ನಿಸಿದರು.

ಏನಿದು ಘಟನೆ

ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕನಗರ ನಿವಾಸಿ ಕರ್ಣ ಎಂಬುವರು ಕಳೆದ ಹಲವು ವರ್ಷಗಳಿಂದ ಇಲ್ಲಿ ಹಸು ಸಾಕುತ್ತಿದ್ದಾರೆ. ಶನಿವಾರ ತಡರಾತ್ರಿ ಯಾರೋ ಕಿಡಿಗೇಡಿಗಳು ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿ, ಕಾಲಿಗೆ ಮಚ್ಚಿನಿಂದ ಹಲ್ಲೆ ಮಾಡಿ ವಿಕೃತಿ ಮೆರೆದಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:24 pm, Mon, 13 January 25