ಬೆಂಗಳೂರಿನ ಚಿಕ್ಕಪೇಟೆ ಸಂಚಾರಿ ಠಾಣೆಯ ಹೆಸರು ಬದಲಾವಣೆ: ಹೊಸ ಹೆಸರು ಏನು ಗೊತ್ತಾ?
ಚಿಕ್ಕಪೇಟೆ ಸಂಚಾರ ಠಾಣೆ(Chickpet Traffic Police Station)ಯ ಹೆಸರನ್ನು ರಾಜ್ಯ ಸರ್ಕಾರ ಬದಲಾಯಿಸಿ, ಮರುನಾಮಕರಣಗೊಳಿಸಿದೆ. ಈ ಹಿನ್ನಲೆ ಹಳೆಯ ನಾಮಫಲಕ ತೆರವು ಮಾಡಿ, ಹೊಸ ನಾಮಫಲಕ ಅಳವಡಿಸಲು ಬೆಂಗಳೂರಿನ ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಅನಿತಾ ಹದ್ದಣ್ಣನವರ್ ಚಿಕ್ಕಪೇಟೆ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು, ಅ.01: ಬೆಂಗಳೂರಿನ ಚಿಕ್ಕಪೇಟೆ ಸಂಚಾರ ಠಾಣೆ(Chickpet Traffic Police Station)ಯ ಹೆಸರನ್ನು ರಾಜ್ಯ ಸರ್ಕಾರ ಬದಲಾಯಿಸಿ, ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆ ಎಂದು ಮರುನಾಮಕರಣಗೊಳಿಸಿದೆ. ಸರ್ಕಾರದ ಆದೇಶದ ಬೆನ್ನಲ್ಲೇ ತಕ್ಷಣವೇ ಹಳೆಯ ನಾಮಫಲಕ ತೆರವು ಮಾಡಿ, ಹೊಸ ನಾಮಫಲಕ ಅಳವಡಿಸಲು ಬೆಂಗಳೂರಿನ ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಅನಿತಾ ಹದ್ದಣ್ಣನವರ್ ಚಿಕ್ಕಪೇಟೆ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ಗೆ ಸೂಚನೆ ನೀಡಿದ್ದಾರೆ.
ಜೊತೆಗೆ ಪೊಲೀಸ್ ಠಾಣೆಯ ಎಲ್ಲಾ ಕಾನೂನು ವ್ಯವಹಾರಗಳಲ್ಲಿ ಹೊಸ ಹೆಸರು ಬಳಸಿ ತಕ್ಷಣ ಸರ್ಕಾರದ ಆದೇಶ ಅನುಷ್ಟಾನಕ್ಕೆ ತರುವಂತೆ ಠಾಣಾಧಿಕಾರಿಗೆ ಪತ್ರದ ಮೂಲಕ ಸೂಚಿಸಿದ್ದಾರೆ.
ಇನ್ನು ಇತ್ತೀಚೆಗೆ ಬೆಂಗಳೂರು ಸಂಚಾರ ಪೊಲೀಸರು ಮತ್ತು ಬೆಂಗಳೂರು ಅಪಾರ್ಟ್ಮೆಂಟ್ಸ್ ಫೆಡರೆಷನ್ರವರು ರಸ್ತೆ ಸುರಕ್ಷತೆಯನ್ನು ಉತ್ತೇಜಿಸುವ ಮತ್ತು ನೈಜ ಸಮಯದ ಸಂಚಾರದ ಟ್ರಾಫಿಕ್ ಅಲರ್ಟ್ಗಳನ್ನು ಹಂಚಿಕೊಳ್ಳುವ ಮೂಲಕ ಸಂಚಾರ ಸಮಸ್ಯೆಗಳನ್ನು ಪರಿಹರಿಸುವ ಉಪಕ್ರಮಗಳಲ್ಲಿ ಸಹಕರಿಸುವ ನಿಟ್ಟಿನಲ್ಲಿ ಹಾಗೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಒಪ್ಪಂದಕ್ಕೆ (MoU) ಸಂಚಾರ ವಿಭಾಗದ ಶ್ರೀ ಎಂ.ಎನ್.ಅನುಚೇತ್,ಐಪಿಎಸ್, ಜಂಟಿ ಪೊಲೀಸ್ ಆಯುಕ್ತರು ಹಾಗೂ ಶ್ರೀ ವಿಕ್ರಂ ರೈ, ಬೆಂಗಳೂರು ಅಪಾರ್ಟ್ಮೆಂಟ್ಸ್ ಫೆಡರೆಷನ್ ರವರು ಸಹಿ ಹಾಕಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ