ಮುನಿರತ್ನ ವಿರುದ್ಧ ಕಮಿಷನ್ ಆರೋಪ ಪ್ರಕರಣ: ಅರೆಸ್ಟ್ ಆಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಜಾಮೀನು

ಬಂಧನಕ್ಕೊಳಗಾಗಿದ್ದ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಗೆ ಜಾಮೀನು ಮಂಜೂರಾಗಿದೆ. ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್​ ಕಮಿಷನ್​ ಬಾಂಬ್ ಸಿಡಿಸಿ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು.

ಮುನಿರತ್ನ ವಿರುದ್ಧ ಕಮಿಷನ್ ಆರೋಪ ಪ್ರಕರಣ: ಅರೆಸ್ಟ್ ಆಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಜಾಮೀನು
ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತು ಸಚಿವ ಮುನಿರತ್ನ
Follow us
TV9 Web
| Updated By: Rakesh Nayak Manchi

Updated on:Dec 25, 2022 | 7:18 AM

ಬೆಂಗಳೂರು: ಬಂಧನಕ್ಕೊಳಗಾಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಐವರಿಗೆ ಬೆಂಗಳೂರಿನ 8ನೇ ACMM ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ (40 percent commission) ಆರೋಪ ಮಾಡಿದ್ದ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಅವರನ್ನು ಪೊಲೀಸರು ಬಂಧಿಸಿದ್ದರು. ಸಚಿವ ಮುನಿರತ್ನ (Munirathna) ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ (Defamation case)ಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವೈಯಾಲಿಕಾವಲ್‌ ಪೊಲೀಸರು, ಡಿ.ಕೆಂಪಣ್ಣ ಜೊತೆಗೆ ವಿ.ಕೃಷ್ಣಾ ರೆಡ್ಡಿ, ನಟರಾಜು, ಗುರುಸಿದ್ದಪ್ಪ ಅವರನ್ನೂ ಅರೆಸ್ಟ್ ಮಾಡಿ ಕೋರಮಂಗಲದಲ್ಲಿರುವ ಜಡ್ಜ್​ ನಿವಾಸದಲ್ಲಿ ಜಡ್ಜ್​ ಎದುರು ಹಾಜರುಪಡಿಸಿದ್ದರು. ಗಂಭೀರ ಅಪರಾಧ ಪ್ರಕರಣ ಅಲ್ಲದಿದ್ದರಿಂದ ನ್ಯಾಯಾಧೀಶರು ಬಂಧಿತ ಐವರಿಗೂ ಜಾಮೀನು ಮಂಜೂರು (Grant of bail) ಮಾಡಿದ್ದಾರೆ. ಅಲ್ಲದೆ ಸೋಮವಾರ ಕೋರ್ಟ್​ಗೆ ಹಾಜರಾಗುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಕೆಂಪಣ್ಣ ಅವರು ಇತ್ತೀಚೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಮಾತ್ರವಲ್ಲದೇ ಸಚಿವರುಗಳ ವಿರುದ್ಧವೂ 40% ಕಮಿಷನ್ ಆರೋಪ ಮಾಡಿದ್ದರು. ಅದರಲ್ಲೂ ಸಚಿವ ಮುನಿರತ್ನ ಅವರ ವಿರುದ್ಧ ಬಹಿರಂಗವಾಗಿಯೇ ಕಮಿಷನ್ ಆರೋಪ ಮಾಡಿದ್ದರು. ಈ ಹಿನ್ನಲೆ ಮುನಿರತ್ನ ಅವರು ಕೆಂಪಣ್ಣ ಮಾನಹಾನಿ ಕೇಸ್ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪಣ್ಣ ಅವರು ಕೋರ್ಟ್​ಗೆ ಗೈರಾಗಿದ್ದಕ್ಕೆ ವಾರೆಂಟ್ ಜಾರಿಯಾಗಿತ್ತು. ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷನ ಡಿ.ಕೆಂಪಣ್ಣ ವಿ.ಕೃಷ್ಣಾರೆಡ್ಡಿ, ಸೇರಿ 19 ಪ್ರತಿವಾದಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಆದರೂ ಯಾವುದೇ ಉತ್ತರ ನೀಡದಿದ್ದರಿಂದ ಬಂಧಿಸಲಾಗಿತ್ತು.

ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ

ಮೊದಲಿಗೆ ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ, ಬಳಿಕ MLAಗಳಿಗೆ 10 ಪರ್ಸೆಂಟ್​ ಕಮಿಷನ್​ ಕೊಡಬೇಕು, ಮಂತ್ರಿ​​ಗಳಿಗೆ ಶೇಕಡಾ 5ರಷ್ಟು ಪರ್ಸೆಂಟೇಜ್​ ಕೊಡಬೇಕು ಎಂಬ ಸ್ಫೋಟಕ ಬಾಂಬ್ ಸಿಡಿಸಿದ್ದರು. ಬಿಜೆಪಿ ಸರ್ಕಾರದಲ್ಲಿ 40% -50% ಕಮಿಷನ್​ ವಸೂಲಿ ಆಗುತ್ತಿದ್ದು, 2019ರ ನಂತರ ಸರ್ಕಾರದಲ್ಲಿ ಪರ್ಸೆಂಟೇಜ್​ ಹೆಚ್ಚಾಗಿದೆ. ಕಾಂಟ್ರಾಕ್ಟರ್​​​ಗಳಿಂದ ಹೆಜ್ಜೆ-ಹೆಜ್ಜೆಗೂ ಕಮಿಷನ್​ ವಸೂಲಿ ಆಗುತ್ತಿದೆ. ನಾನು ಈಗಾಗಲೇ ಪ್ರಧಾನಿ ಮೋದಿಯವರಿಗೂ ದೂರು ನೀಡಿದ್ದೇನೆ ಎಂದಿದ್ದರು.

ಕರ್ನಾಟಕದಲ್ಲಿ 1 ಲಕ್ಷ ಮಂದಿ ಕಾಂಟ್ರಾಕ್ಟರ್​​ಗಳು ಇದ್ದಾರೆ. KRIDL ಗುತ್ತಿಗೆಯಲ್ಲಿ ಕೆಲಸ ಮಾಡದೇ ಹಣ ಪಡೆಯುತ್ತಿದ್ದಾರೆ, ಏಪ್ರಿಲ್​​​ನಲ್ಲಿ 50 ಸಾವಿರ ಕಾಂಟ್ರಾಕ್ಟರ್​ಗಳು ಹೋರಾಟ ಮಾಡಿದ್ದೇವೆ. ರಸ್ತೆಗಳೂ ಕಳಪೆ ಕಾಮಗಾರಿಯಿಂದ ನಿರ್ಮಾಣ ಆಗುತ್ತಿವೆ. 20 ರಿಂದ 25 ಸಾವಿರ ಕೋಟಿ ಹಣ ರಾಜಕಾರಣಿಗಳ ಜೇಬು ಸೇರುತ್ತಿದೆ. ಭ್ರಷ್ಟಾಚಾರದ ಬಗ್ಗೆ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆಂಪಣ್ಣ ಕಿಡಿಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:18 am, Sun, 25 December 22

ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ