ದರೋಡೆ ಪ್ರಕರಣ: ಇನ್ಸ್​​ಪೆಕ್ಟರ್​​​ ಮಹೇಶ್ ಕನಕಗಿರಿಗೆ ನ್ಯಾಯಾಂಗ ಬಂಧನ; ಸವಾಲಾದ ವಿಚಾರಣೆ

ಉದ್ಯಮಿಯೊಬ್ಬರ ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ತನಿಖೆಗೆ ಸಹಕರಿಸದೆ ಇರುವುದು ಪೊಲೀಸರಿಗೆ ಸವಾಲಾಗಿದೆ. ಆರೋಪಿಗಳ ಪರಸ್ಪರ ವಿರೋಧಾತ್ಮಕ ಹೇಳಿಕೆಗಳಿಂದಾಗಿ ತಾಂತ್ರಿಕ ಸಾಕ್ಷ್ಯಗಳ ಸಂಗ್ರಹಕ್ಕೆ ಖಾಕಿ ಪಡೆ ಮುಂದಾಗಿದೆ. ಜೊತೆಗೆ, ಮಹೇಶ್​​ ಕನಕಗಿರಿ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಡಿಸಿಪಿ ಸುಜಿತಾಗೆ ನಗರ ಪೊಲೀಸ್ ಆಯುಕ್ತರು ಸೂಚನೆಯನ್ನೂ ನೀಡಿದ್ದಾರೆ.

ದರೋಡೆ ಪ್ರಕರಣ: ಇನ್ಸ್​​ಪೆಕ್ಟರ್​​​ ಮಹೇಶ್ ಕನಕಗಿರಿಗೆ ನ್ಯಾಯಾಂಗ ಬಂಧನ; ಸವಾಲಾದ ವಿಚಾರಣೆ
ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿಗೆ ನ್ಯಾಯಾಂಗ ಬಂಧನ
Image Credit source: Tv9 Kannada
Edited By:

Updated on: Jun 21, 2026 | 10:31 AM

ಬೆಂಗಳೂರು, ಜೂನ್​​ 21: ಕೇರಳ ಮೂಲದ ಉದ್ಯಮಿಯೊಬ್ಬರಿಂದ 20 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ಸ್​​ಪೆಕ್ಟರ್​​​ ಮಹೇಶ್ ಕನಕಗಿರಿ ಅವರನ್ನು ಬಂಧಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ಸ್​​ಪೆಕ್ಟರ್​​​ ಮಹೇಶ್ ಕನಕಗಿರಿ ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕುಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧಿತ ಇತರ ಆರೋಪಿಗಳಾಗಿದ್ದು, ಅವರನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ತನಗೇನೂ ಗೊತ್ತಿಲ್ಲ ಎನ್ನುತ್ತಿರುವ ಇನ್ಸ್​​ಪೆಕ್ಟರ್​​​ !

ಇನ್ನು ಪ್ರಕರಣ ಸಂಬಂಧ ಮಡಿವಾಳ ಪೊಲೀಸರ ತನಿಖೆ ವೇಳೆ ನನಗೇನು ಗೊತ್ತಿಲ್ಲ. ಕುಪೇಂದ್ರ ರೆಡ್ಡಿ ಪರಿಚಯ. ಹೀಗಾಗಿ ಜೊತೇಲಿ ಹೋಗಿದ್ದೇ ಅಷ್ಟೇ ಎಂದು ಇನ್ಸ್​​ಪೆಕ್ಟರ್​​​ ಮಹೇಶ್ ಕನಕಗಿರಿ ಹೇಳಿದ್ದಾರಂತೆ. ರಾಬರಿ ವಿಚಾರ ತನಗೆ ಗೊತ್ತೇ ಇಲ್ಲ. ನೀವು ಬಂದು ಹೇಳಿದಾಗಲೇ ಆ ಬಗ್ಗೆ ತನಗೆ ಗೊತ್ತಾಗಿದೆ ಎಂದು ಮಹೇಶ್ ತಿಳಿಸಿದ್ದಾರೆ. ಐಡಿ ಕಾರ್ಡ್ ಬಗ್ಗೆ ಕೇಳಿದ್ರೆ ವಾಹನದ ಡ್ಯಾಶ್ ಬೋರ್ಡ್​​ನಲ್ಲಿ ಅದನ್ನು ಇಟ್ಟಿದ್ದೆ. ನನ್ನ ಗಮನಕ್ಕೆ ಬಾರದೆ ಅದನ್ನು ತೆಗೆದುಕೊಂಡು ಮಿಸ್ ಯೂಸ್ ಮಾಡಲಾಗಿದೆ. ಐಡಿ ಮಿಸ್ ಯೂಸ್ ಮಾಡಿದ್ದಾರೆ ಎಂಬ ಬಗ್ಗೆ ಬೇಕಿದ್ದರೆ ನಾನು ದೂರು ಕೊಡ್ತೀನಿ ಎಂದು ಹೇಳಿದ್ದಾರಂತೆ.

ಇದನ್ನೂ ಓದಿ: ಪೊಲೀಸ್ ಜೀಪ್‌ನಲ್ಲೇ ಬಂದು ದರೋಡೆ! ಕೇರಳ ಉದ್ಯಮಿಗಳಿಗೆ 20 ಲಕ್ಷ ರೂ. ಪಂಗನಾಮ ಹಾಕಿದ ಸಿಐಡಿ ಇನ್ಸ್‌ಪೆಕ್ಟರ್

ಆದರೆ ಉಳಿದ ಆರೋಪಿಗಳು ಮಾತ್ರ ವಿಚಾರಣೆ ವೇಳೆ ಇನ್ಸ್​​ಪೆಕ್ಟರ್​​​ ಕಡೆಗೇ ಬೆರಳು ತೋರಿಸಿದ್ದಾರೆ. ಅವರಿಗೆ ಎಲ್ಲ ಗೊತ್ತು. ಅವರು ಹೇಳಿದಂತೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಹೀಗಾಗಿ ಸದ್ಯ  ಮಹೇಶ್ ಕನಕಗಿರಿ ವಿಚಾರಣೆಯೇ ಚಾಲೆಂಜ್ ಆಗಿದ್ದು, ಅವರ ಮೊಬೈಲ್ ಸೀಜ್ ಮಾಡಿ ಖಾಕಿ ತನಿಖೆಗೆ ಮುಂದಾಗಿದೆ. ರಾಬರಿ ಬಗ್ಗೆ ಏನಾದ್ರೂ ಚಾಟಿಂಗ್, ಕರೆ ಮಾಡಿದ್ದಾರಾ ಎಂದು ಪರಿಶೀಲಿಸಲಾಗಿದೆ. ಈ ವೇಳೆ ಕುಪೇಂದ್ರ ರೆಡ್ಡಿ ಜೊತೆ ನಿರಂತರ ಸಂಪರ್ಕದಲ್ಲಿ ಇರೋದು ಬಯಲಾಗಿದೆ ಎನ್ನಲಾಗಿದೆ. ಉಳಿದಂತೆ ಹೋಟೆಲ್ ಸಿಸಿಟಿವಿ ಸೇರಿದಂತೆ ಹಲವು ತಾಂತ್ರಿಕ ಸಾಕ್ಷಗಳ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದು, ಮಹೇಶ್ ಕನಕಗಿರಿ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಡಿಸಿಪಿ ಸುಜಿತಾಗೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಪ್ರಕರಣದ ಆರೋಪಿ ಶಫಿ ಮೇಲೆ ರಾಬರಿ ಕೇಸ್​​ಗಳು ಇರುವ ಕಾರಣ, ಅವುಗಳಿಗೂ ಇನ್ಸ್​​ಪೆಕ್ಟರ್​​​ ಗೂ ಏನಾದ್ರೂ ಲಿಂಕ್ ಇದೆಯಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗ್ತಿದೆ. ನಾಪತ್ತೆಯಾಗಿರೋ ಶಫಿಗಾಗಿ ಹುಡುಕಾಟವೂ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:28 am, Sun, 21 June 26

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Loading...
Unable to load recommendations.
Follow Us